ಐಟಿ ದಾಳಿಯ ವೇಳೆ ಕಾಂಗ್ರೆಸ್‌ ಸಂಸದನ ಮನೆಯಲ್ಲಿ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ?

ಜಾರ್ಖಂಡ್‌ನ ರಾಜ್ಯಸಭಾ ಸಂಸದ ಎಂ.ಪಿ.ಧೀರಜ್ ಸಾಹುಗೆ ಸೇರಿದ ಒಡಿಶಾದಲ್ಲಿ ಇರುವ Boudh Distillery Private Limited ನಿಂದ ಎರಡು ಕೋಟಿಯಲ್ಲ ಬರೋಬ್ಬರಿ 200 ಕೋಟಿ ರೂಪಾಯಿ ಹಣವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಲೆಕ್ಕ ಇಷ್ಟಕ್ಕೇ ಮುಗಿಯದೇ ಕೋಟಿಯ ಲೆಕ್ಕ ಇನ್ನೂ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

Dhiraj Prasad Sahu
Dhiraj Prasad Sahu

ಈ ಪ್ರಕರಣದ ಕುರಿತು ಟ್ವೀಟ್ ಮಾಡಿರುವ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, “ದೇಶವಾಸಿಗಳು ಈ ನೋಟುಗಳ ರಾಶಿಯನ್ನೊಮ್ಮೆ‌ ನೋಡಬೇಕು. ನಂತರ ಅವರ ನಾಯಕರ ಪ್ರಾಮಾಣಿಕತೆಯ ಭಾಷಣಗಳನ್ನು ಕೇಳಬೇಕು, ಸಾರ್ವಜನಿಕರಿಂದ ಏನನ್ನು ಲೂಟಿ ಮಾಡಿದರೂ ಅದರ ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕಾಗುತ್ತದೆ ಹಾಗೂ ಇದು ದೇಶದ ಜನತೆಗೆ ಮೋದಿಯ ಗ್ಯಾರಂಟಿಯಾಗಿದೆ” ಎಂದು ಹೇಳಿದ್ದಾರೆ.

ಶ್ರೀ ನರೇಂದ್ರ ಮೋದಿಯವರು ಮಾಡಿರುವ ಟ್ವೀಟ್
ಶ್ರೀ ನರೇಂದ್ರ ಮೋದಿಯವರು ಮಾಡಿರುವ ಟ್ವೀಟ್

 

ಆದಾಯ ತೆರಿಗೆ ಇಲಾಖೆಯು ಹಣವನ್ನು ಇನ್ನೊಮ್ಮೆ ಲೆಕ್ಕ ಮಾಡುವುದರಲ್ಲಿ ಮಗ್ನವಾಗಿದ್ದರೆ, ಇನ್ನು 2018ರ ರಾಜ್ಯಸಭಾ ಚುನಾವಣಾ ಅಫಿದವಿತ್ ಪ್ರಕಾರ ಸಂಸದ ಧೀರಜ್ ಸಾಹು ಒಟ್ಟು 34.83 ಕೋಟಿ ಆಸ್ತಿ ಹೊಂದಿದ್ದಾಗಿ ಘೋಷಿಸಿಕೊಂಡು, 2.04 ಕೋಟಿಯ ಚರಾಸ್ತಿ (ಐಷಾರಾಮಿ ಕಾರುಗಳು ಸೇರಿದಂತೆ) ಇರುವುದಾಗಿ ತೋರಿಸಿಕೊಂಡಿದ್ದರು.

ಎಂದಿನಂತೆ ವಿಪಕ್ಷಗಳು ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಆರೋಪ ಮಾಡುವಲ್ಲಿ ಮಗ್ನವಾಗಿದ್ದರೆ, ಇದಕ್ಕೆ ಪ್ರತಿಕ್ರಿಯೆ ನೀಡದೆ ಬಿಜೆಪಿ ಇದನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಆದರೆ, ಐಟಿ ರೈಡ್‌ನ ಕುರಿತು ಏನನ್ನೂ ಪ್ರತಿಕ್ರಿಯೆ ನೀಡದ ಸಂಸದ ಧೀರಜ್ ಸಾಹು ಅವರ ನಡೆಯನ್ನು ಕಾದು ನೋಡಬೇಕಿದೆ.

You might also like
Leave A Reply

Your email address will not be published.