ಹಿಂದೂಗಳಿಗೆ ಸಂಭ್ರಮದ ಸುದ್ದಿ – ಶ್ರೀರಾಮ ಮಂದಿರದ ಗರ್ಭಗುಡಿಯ ಫೋಟೋ ಬಿಡುಗಡೆ!

ದೇಶದ ಬಹುಸಂಖ್ಯಾತ ಹಿಂದೂ ಸಮುದಾಯದ ಶತಮಾನಗಳ ಹೋರಾಟದ ಫಲ ಶ್ರೀರಾಮ ಮಂದಿರ ನಿರ್ಮಾಣದ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಭಾರತೀಯರು ಶ್ರೀ ರಾಮನ ದರ್ಶನ ಕೃಪೆಗಾಗಿ ಕಾದು ಕುಳಿತಿದ್ದಾರೆ.

2024ರ ಜನವರಿ 22ರಂದು ಪ್ರಧಾನಿ ಮೋದಿಯವರು ದೇವಸ್ಥಾನದ ಉದ್ಘಾಟನೆ ಮಾಡುವ ಬಗ್ಗೆ ಈಗಾಗಲೇ ದೇಶದ ಜನತೆಗೆ ತಿಳಿದಿದೆ. ಇದೀಗ, ಹಿಂದೂಗಳಿಗೆ ಸಂಭ್ರಮವಾಗುವ ಸುದ್ದಿಯೊಂದನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೀಡಿದೆ. ಕಳೆದ ಎರಡು ದಿನಗಳ ಹಿಂದೆ ದೇವಾಲಯ ನಿರ್ಮಾಣದ ಕೊನೆಯ ಹಂತದ ಪ್ರಗತಿಯ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಇದೀಗ, ಪ್ರಭು ಶ್ರೀರಾಮರು ಆಸೀನರಾಗುವ ಗರ್ಭಗುಡಿಯ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಶ್ರೀರಾಮ ಮಂದಿರದ ಗರ್ಭಗುಡಿ

ರಾಮಲಲ್ಲಾ ದೇವಸ್ಥಾನದ ಶೇ.90 ರಷ್ಟು ಕೆಲಸಗಳು ಪೂರ್ಣಗೊಂಡಿದ್ದು, ದೇಶದ ಜನತೆ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗಾಗಿ ಕಾದು ಕುಳಿತಿದ್ದಾರೆ. ಪ್ರತಿಮೆಯನ್ನು ನೆಲ ಮಹಡಿಯಲ್ಲಿರುವ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗುವುದು. ನೆಲಮಹಡಿಯ ಗರ್ಭಗೃಹ ಬಹುತೇಕ ಸಿದ್ಧಗೊಂಡಿದೆ. ಜನವರಿ 16ರಿಂದಲೇ ಪ್ರಾಣ ಪ್ರತಿಷ್ಠಾಪನೆಯ ವೈದಿಕ ವಿಧಿ ವಿಧಾನಗಳು ಆರಂಭವಾಗಲಿವೆ.

You might also like
Leave A Reply

Your email address will not be published.