ಪರಶುರಾಮ ಥೀಮ್ ಪಾರ್ಕ್ ಅನ್ನು ಹಳ್ಳ ಹಿಡಿಸುವ ಕುತಂತ್ರ – ಸಾರ್ವಜನಿಕ ಓಡಾಟದ ರಸ್ತೆಗೆ ಮಣ್ಣು ಸುರಿದ ಕಾರ್ಕಳ ಕಾಂಗ್ರೆಸ್ ಮುಖಂಡರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕರಾವಳಿಗರ ಹೆಮ್ಮೆಯ ಸಂಕೇತವಾಗಿದ್ದ ಪ್ರತಿಬಿಂಬಿತವಾಗಿದ್ದ ಪರಶುರಾಮ ಥೀಮ್ ಪಾರ್ಕ್ʼಗೆ ಬೀಗ ಜಡಿದಿದ್ದು, ಕಾರ್ಕಳದ ಪ್ರವಾಸೋದ್ಯಮವನ್ನು ಹಾಳು ಮಾಡಲು ಕಾಂಗ್ರೆಸ್ ʼಕೈʼ ಎತ್ತಿ ನಿಂತಿದೆ.

ಥೀಮ್ ಪಾರ್ಕ್ ನಿರ್ಮಾಣಕ್ಕೆ ಬಿಡುಗಡೆಯಾಗಬೇಕಿದ್ದ ಅನುದಾನಕ್ಕೆ ತಡೆ ನೀಡಿದ್ದು, ಇದುವರೆಗೂ ಒಂದು ರೂ. ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಸಿಐಡಿಗೆ ವಹಿಸಿದ್ದ ವಿಚಾರಣೆಯನ್ನೂ ಮುಗಿಸುತ್ತಿಲ್ಲ. ತನಿಖೆಯನ್ನೂ ಚುರುಕುಗೊಳಿಸುತ್ತಿಲ್ಲ. ವಿಚಾರಣೆಗೆ ಆದೇಶ ನೀಡಿ ಹಲವು ತಿಂಗಳುಗಳು ಕಳೆದರೂ, ವಿಚಾರಣೆಯ ಒಂದೇ ಒಂದು ಅಂಶ ಹೊರಗಡೆ ಬಂದಿಲ್ಲ.

ರಸ್ತೆಗೆ ಮಣ್ಣು ಸುರಿದ ಕಾರ್ಕಳ ಕಾಂಗ್ರೆಸ್ ಮುಖಂಡರು

ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿರುವ ಹೈಕೋರ್ಟ್ ಮುಂದಿನ 4 ತಿಂಗಳಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ನೀಡಿದರೂ, ಕಾಮಗಾರಿ ಆರಂಭಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಕಾರ್ಕಳದ ಕಾಂಗ್ರೆಸ್ ನಾಯಕರು ಪರಶುರಾಮ ಥೀಮ್ ಪಾರ್ಕ್ʼಗೆ ಜನರ ಭೇಟಿಯನ್ನು ನಿರ್ಬಂಧಿಸಿದ್ದಾರೆ. ಥೀಮ್ ಪಾರ್ಕ್ʼನ ಅಭಿವೃದ್ಧಿ ಕೆಲಸ ಮಾಡಬಾರದು ಎಂದು ಜನರ ಓಡಾಟದ ದಾರಿಗೆ ಮಣ್ಣು ಹಾಕಿಸಿದ್ದಾರೆ. ಕಾರ್ಕಳದ ಕಾಂಗ್ರೆಸ್ ಮುಖಂಡರ ದ್ವೇಷದ ರಾಜಕಾರಣ ಕರಾವಳಿಯ ಪ್ರವಾಸೋಧ್ಯಮವನ್ನು ಹಳ್ಳಹಿಡಿಸಿದೆ.

ಇಷ್ಟೆಲ್ಲಾ ಆದಾಗ್ಯೂ, ಜಿಲ್ಲಾಡಳಿತ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿವೆ.

You might also like
Leave A Reply

Your email address will not be published.