ನೀವು ಪೊರಕೆ ಚಿಹ್ನೆಗೆ ಮತ ಹಾಕಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ : ಸುಪ್ರಿಂ ಕೋರ್ಟ್‌‌ನ ಎಚ್ಚರಿಕೆಯ ಹೊರತಾಗಿಯೂ ನಾಲಿಗೆ ಹರಿಬಿಟ್ಟ ಕೇಜ್ರಿವಾಲ್.

ನೀವು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದರೆ ನಿಮ್ಮ‌ಮತಗಳು ನಾನು ಜೈಲಿಗೆ ಹೋಗುವುದರಿಂದ ರಕ್ಷಣೆ ಮಾಡುತ್ತವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮತದಾರರಿಗೆ ರೋಡ್ ಶೋ ಒಂದರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೋತಿ ನಗರದಲ್ಲಿ ನಡೆದ ರೋಡ್ ಶೋ‌ ಒಂದರಲ್ಲಿ ಮಾತನಾಡಿದ ಕೇಜ್ರಿವಾಲ್, 20 ದಿನಗಳ ನಂತರ ನಾನು ಮತ್ತೆ ಜೈಲಿಗೆ ಹೋಗಬೇಕು ಎಂದು ವಿರೋಧಿಗಳು ಮಾತನಾಡುತ್ತಿದ್ದಾರೆ ಆದರೆ ನೀವೆಲ್ಲರೂ ಪೊರಕೆ ಚಿಹ್ನೆಗೆ ಮತ ನೀಡಿ ಗೆಲ್ಲಿಸಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂದರು.‌

ಇನ್ನು 2024 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರದ ಸಲುವಾಗಿ ಷರತ್ತು ಬದ್ಧ ಮಧ್ಯಂತರ ಜಾಮೀನಿನ ಮೂಲಕ ಸುಪ್ರಿಂ ಕೋರ್ಟಿನ ಆದೇಶದ ಮೇರೆಗೆ ಹೊರಗೆ ಬಂದ ಕೇಜ್ರಿವಾಲ್‌ಗೆ ಸರಿ ಸುಮಾರು ಮೂರು ವಾರಗಳ ಕಾಲ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ. ಆದರೆ ಜೂನ್ 2 ನೇ ತಾರೀಖಿಗೆ ಮತ್ತೆ ಶರಣಾಗುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದೆ.

ಇನ್ನು ಕೇಜ್ರಿವಾಲ್‌ಗೆ ಜೈಲಿಗೆ ಮರಳುವಂತೆ ಆದೇಶ ನೀಡಿದ ಎರಡು ದಿನಗಳ ನಂತರ ಅಂದರೆ ಜೂನ್ 4 ನೇ ತಾರೀಖಿನಂದು ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಂತರದ ಕಾನೂನು‌ ಮೊಕದ್ದಮೆಗಳನ್ನು ರಾಜಕೀಯ ಫಲಿತಾಂಶಗಳೊಂದಿಗೆ ಜೋಡಿಸಲು ಯತ್ನಿಸುತ್ತಿರುವ ಕೇಜ್ರಿವಾಲ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.‌

ಇನ್ನು ಮದ್ಯ ನೀತಿ ಪ್ರಕರಣದ ಕುರಿತು ಯಾವುದೇ ಹೇಳಿಕೆ ನೀಡದಂತೆ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡುವ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿ ಕಳುಹಿಸಿತ್ತು.

You might also like
Leave A Reply

Your email address will not be published.