8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಕೊಂದದ್ದು ಇದೇ ಒಂಟಿಸಲಗ – ವಿಡಿಯೋ ನೋಡಿ

ಸೋಮವಾರ ಮಧ್ಯಾಹ್ನ ಒಂಟಿ ಸಲಗ ಸೆರೆಯಿಡಿಯುವ ಕಾರ್ಯಾಚರಣೆಯ ವೇಳೆ ಮೈಸೂರು ದಸರಾದಲ್ಲಿ 8 ಬಾರಿ ಅಂಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾದಾಟದಲ್ಲಿ ದುರ್ಮರಣಕ್ಕೀಡಾಗಿತ್ತು. ಇದೀಗ, ಅರ್ಜುನ ಆನೆಯ ಕೊಂದ ಒಂಟಿ ಸಲಗದ ವಿಡಿಯೋ ವೈರಲ್‌ ಆಗಿದೆ.

ಅರಣ್ಯಾಧಿಕಾರಿಗಳು ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಎಂಬಲ್ಲಿ ರೈತರ ಬೆಳೆ ನಾಶ ಮಾಡುತ್ತಿರುವ ಆನೆಗಳ ಸೆರೆಯಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. 5 ಆನೆಗಳನ್ನು ಸೆರೆಯಿಯಿಡಿದು 6ನೇ ಒಂಟಿಸಲಗವನ್ನು ಸೆರೆಯಿಡಿಯುವ ವೇಳೆ ಅರ್ಜುನ ಆನೆ ಅಸುನೀಗಿದೆ.

Arjuna Elephant of Dasara fame, died in Sakaleshpur.
Arjuna Elephant of Dasara fame, died in Sakaleshpur.

 

60 ವರ್ಷ ಪೂರ್ಣಗೊಂಡದ್ದರಿಂದ ಕಳೆದ 4 ವರ್ಷದ ಹಿಂದೆಯಷ್ಟೇ ದಸರಾ ಅಂಬಾರಿ ಹೊರುವುದರಿಂದ ನಿವೃತ್ತಿ ನೀಡಲಾಗಿತ್ತು. 64 ವರ್ಷದ ಅರ್ಜುನನು 5,800 ಕೆಜಿ ತೂಕ ಹೊಂದಿದ್ದು, ಆನೆ ಶಾಂತ ಸ್ವಭಾವದವನಾಗಿದ್ದ. ಹಲವು ಬಾರಿ ಕಾಡಾನೆ, ಹುಲಿ ಸೆರೆಯಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದ.

ವೈರಲ್‌ ಆದ ವಿಡಿಯೋದಲ್ಲಿ ಅರ್ಜುನನನ್ನು ಕೊಂದ ಒಂಟಿ ಸಲಗವು ಅತ್ಯಂತ ಶಕ್ತಿಶಾಲಿ, ಬಲಿಷ್ಠವಾಗಿರುವುದನ್ನು ಕಾಣಬಹುದು.

You might also like
Leave A Reply

Your email address will not be published.