ಎಂಟು ಬಾರಿಯ ಅಂಬಾರಿ ವೀರ ಗಜರಾಜ ಇನ್ನಿಲ್ಲ.

ಮೈಸೂರು ದಸರಾದಲ್ಲಿ 750 ಕೆ.ಜಿ ತೂಕದ ಅಂಬಾರಿಯನ್ನು 8 ಬಾರಿ ಹೊತ್ತು ದೇವಿ ಚಾಮುಂಡೇಶ್ವರಿಯ ಕೃಪೆಗೆ ಪಾತ್ರನಾಗಿದ್ದ ಅರ್ಜುನ  ಆನೆಯು (Arjuna Elephant) ಕಾಡಾನೆ ಸೆರೆಗಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ದುರ್ಮರಣಕ್ಕೀಡಾಗಿದ್ದಾನೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. 64 ವರ್ಷದ ಅರ್ಜುನ ಆನೆಯು ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿತ್ತು. ಅಂಬಾರಿ ಹೊರುವುದರಿಂಧ ನಾಲ್ಕು ವರ್ಷಗಳ ಹಿಂದೆಯೇ ನಿವೃತ್ತಿ ನೀಡಲಾಗಿತ್ತು. ಆದಾಗ್ಯೂ ದಸರೆಯಲ್ಲಿ ನಿಶಾನೆ ಆನೆಯಾಗಿ ಕಾರ್ಯನಿರ್ವಹಿಸಿತ್ತು. ಅನಂತರ ಸಾಕಾನೆ ಅರ್ಜುನನನ್ನು ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು.

Arjuna elephant of Dasara fame
Arjuna, a 63-year-old elephant of Dasara fame

 

ಪುಂಡಾನೆ ಸೆರೆ ಕಾರ್ಯಾಚರಣೆ :

ಯಸಳೂರು ಬಳಿಯ ಜಮೀನುಗಳಿಗೆ ನುಗಿ ಬೆಳೆ ನಾಶ ಮಾಡುತ್ತಿದ್ದ ಪುಂಡಾನೆಯ ಸೆರೆಗಾಗಿ ಇಂದು ಸೋಮವಾರ ಅರಣ್ಯ ಇಲಾಖೆಯು ಕಾರ್ಯಾಚರಣೆಗೆ ಇಳಿದಿತ್ತು. ಈಗಾಗಲೇ ನಿರಂತರ 10 ದಿನಗಳಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅರ್ಜುನ ಆನೆ ಸೇರಿದಂತೆ ಇತರೆ ಆನೆಗಳನ್ನು ಪುಂಡಾನೆಯ ಸೆರೆಗಾಗಿ ಬಳಸಿಕೊಳ್ಳಲಾಗಿತ್ತು. ಪುಂಡಾನೆಯ ಸೆರೆ ವೇಳೆ ಇತರೆ ಆನೆಗಳ ಪುಂಡಾನೆಗೆ ಹೆದರಿ ಹಿಂದೆ ಸರಿದಾಗ ಅರ್ಜುನನು (Arjuna Elephant) ವೀರೋಚಿತನಾಗಿ ಮುನ್ನುಗ್ಗಿ ಪುಂಡಾನೆಯ ಸೆರೆಯಿಡಿಯಲು ಹೋಗಿದ್ದ. ಆದರೆ, ಒಂಟಿ ಸಲಗವು ಅರ್ಜುನನ ಮೇಲೆ ಏಕಾಏಕಿ ದಾಳಿ ಮಾಡಿ ಹೊಟ್ಟೆ, ಪಕ್ಕೆಯ ಭಾಗಕ್ಕೆ ಇರಿದಿದೆ. ತೀವ್ರ ಜರ್ಜರಿತನಾದ ಅರ್ಜುನ ಆನೆಯ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

Arjuna Elephant of Dasara fame, died in Sakaleshpur.
Arjuna Elephant of Dasara fame, died in Sakaleshpur.

 

ಆನೆಗಳಿಂದ ಬಾಧಿತರಾದ ಹಾಸನದ ರೈತರು :

ಹಾಸನ-ಸಕಲೇಶಪುರದ ರೈತರು ಬೆಳೆದ ಬೆಳೆಗಳ ಮೇಲೆ ಆನೆಗಳ ದಾಳಿ ಮಾಡಿ, ಬೆಳೆ ನಾಶಮಾಡುವ ಪ್ರಕರಣಗಳು ಹಾಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತವೆ. ಈ ವರ್ಷ ಹೆಚ್ಚಿನ ಕಾಡಾನೆಗಳು ರೈತರ ಹೊಲಗಳಿಗೆ ನುಗಿ ಬೆಳೆ ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ಕಾಡಾನೆಗಳ ಸೆರೆಯಿಡಿದು ಮರಳಿ ಕಾಡಿಗೆ ಬಿಡುವ ಕಾರ್ಯದಲ್ಲಿ ನಿರತವಾಗಿದೆ. ಕಳೆದ 10 ದಿನಗಳಲ್ಲಿ ಹಾಸನದಲ್ಲಿಯೇ 5 ಆನೆಗಳನ್ನು ಸೆರೆಯಿಡಿದು ಕಾಡಿಗೆ ಬಿಡಲಾಗಿತ್ತು. ಈ 5 ಆನೆಗಳ ಸೆರೆಯಿಡುವ ಕಾರ್ಯದಲ್ಲಿಯೂ ಅರ್ಜುನ ಆನೆಯು ಯಶಸ್ವಿಯಾಗಿದ್ದ.

You might also like
Leave A Reply

Your email address will not be published.