ಪ್ರಧಾನಿ ಮೋದಿಯನ್ನು ಭೇಟಿಯಾಗಬೇಕೇ? ಇಷ್ಟು ಮಾಡಿ ಸಾಕು!

ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀಯವರನ್ನು ಜನ ಸಾಮಾನ್ಯರು ಭೇಟಿಯಾಗಲು ಹಾಗೂ ವಿಕಸಿತ ಭಾರತದ ರಾಯಭಾರಿಗಳಾಗಲು ಕೇಂದ್ರ ಸರ್ಕಾರ ಸುವರ್ಣಾವಕಾಶವನ್ನು ಒದಗಿಸಿಕೊಟ್ಟಿದೆ.

ವಿಕಸಿತ ಭಾರತದ ಅಭಿಯಾನದಡಿ 100 ದಿನಗಳ ಚಾಲೆಂಜ್ ನೀಡಿದ್ದು, ಈ ಚಾಲೆಂಜ್ʼನಲ್ಲಿ ಜಯಶಾಲಿಯಾದವರಿಗೆ ನರೇಂದ್ರ ಮೋದಿಯವರನ್ನು ಭೇಟಿಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ನಮೋ ಆ್ಯಪ್ :

ಗೂಗಲ್ ಪ್ಲೇಸ್ಟೋರ್ʼನಲ್ಲಿ ನಮೋ ಆ್ಯಪ್ ಡೌನ್ʼಲೋಡ್ ಮಾಡಿಕೊಂಡು 100 ದಿನಗಳ ವಿಕಸಿತ ಭಾರತ ಅಭಿಯಾನದ ಚಾಲೆಂಜ್ ಸ್ವೀಕರಿಸಬಹುದು. ಪ್ರತಿನಿತ್ಯ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಪ್ರಧಾನಿ ಮೋದಿಯವರನ್ನು ಮುಖತಃ ಭೇಟಿಯಾಗಬಹುದು. ಅಲ್ಲದೇ, ವಿಕಸಿತ ಭಾರತ ಅಭಿಯಾನದ ರಾಯಭಾರಿಯೂ ಆಗಬಹುದಾಗಿದೆ.

Namo App

ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಘಟಕಗಳು ಮಾಹಿತಿಯನ್ನು ಹಂಚಿಕೊಂಡಿದ್ದು, ಸಾರ್ವಜನಿಕರು ಈ 100 ದಿನಗಳ ಚಾಲೆಂಜ್ʼನಲ್ಲಿ ಪಾಲ್ಗೊಳಬಹುದು ಎಂದು ತಿಳಿಸಿದೆ.

ಕೇಂದ್ರದ ಬಿಜೆಪಿ ಸರ್ಕಾರವು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶದಾದ್ಯಂತ ಕೈಗೊಳ್ಳುತ್ತಿದ್ದು, ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದ ಯೋಜನೆಯ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವುದನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಯೋಚನೆಯನ್ನು ಹಾಕಿಕೊಂಡಿದೆ.

You might also like
Leave A Reply

Your email address will not be published.