RCB ತಂಡಕ್ಕೆ ಬೆವರಿಳಿಸಿದ ಕನ್ನಡಿಗ – ಆರಂಭಿಕ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ

ಐಪಿಎಲ್ 2024ರ ಅಖಾಡಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿಯಾಗಿದ್ದು, ಮೊದಲ ಐಪಿಎಲ್ ಪಂದ್ಯದಲ್ಲೇ ಸಖತ್ ಆಗಿ ಮಿಂಚಿದ್ದಾರೆ. ಅಲ್ಲದೇ ರಾಜ್ಯದ ವೇಗದ ಬೌಲರ್ ಎಂದೇ ಖ್ಯಾತಿ ಪಡೆದಿರುವುದು ವಿಶಿಷ್ಟ. ಯಾರು ಈ ವ್ಯಕ್ತಿ? ಮೊದಲ ಪಂದ್ಯದಲೇ ರಾಜ್ಯಕ್ಕೆ ಮಾದರಿಯಾದ ಈ ವ್ಯಕ್ತಿಯ ವಿಶೇಷವೇನು? ಎಂಬುದಕ್ಕೆ ಈ ಸ್ಟೋರಿ ಓದಿ.

25 ವರ್ಷದ ಕನ್ನಡಿಗ ವಿಧ್ವತ್ ಕಾವೇರಪ್ಪ ಆರ್‌ಸಿಬಿ ವಿರುದ್ಧವೇ ಚೊಚ್ಚಲ ಪಂದ್ಯವನ್ನಾಡಿದ್ದು ವಿಶೇಷ. ತಮ್ಮ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಆಟಗಾರರು, ಅಭಿಮಾನಿಗಳು ಗಾಬರಿಯಾಗುವಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿ ಮೊದಲ ಓವರ್ ನಲ್ಲೇ ದಾಳಿಗಿಳಿದ ಅವರು, ತಮ್ಮ ಮೊದಲ ಓವರ್ ನಲ್ಲೇ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದರು. ಆದರೆ ಆಶುತೋಷ್ ಶರ್ಮಾ ಕ್ಯಾಚ್ ಬಿಟ್ಟ ಕಾರಣ ನಿರಾಸೆ ಅನುಭವಿಸಿದರು.

ತಮ್ಮ ಎರಡನೇ ಓವರ್ ನಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅದೇ ಓವರ್ ನಲ್ಲಿ ಪಂಜಾಬ್ ಕಿಂಗ್ಸ್ ಫಿಲ್ಡರ್ ಗಳು ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರ ಕ್ಯಾಚ್ ಬಿಟ್ಟರು. ಬಳಿಕ ಬಂದ ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಅವರ ವಿಕೆಟ್ ಪಡೆದುಕೊಂಡರು.

ರಜತ್ ಪಾಟಿದಾರ್ ಕೂಡ ಎರಡನೇ ಎಸೆತದಲ್ಲೇ ಕಾವೇರಪ್ಪ ಬೌಲಿಂಗ್‌ನಲ್ಲಿ ಸುಲಭ ಕ್ಯಾಚ್ ಕೊಟ್ಟರು ಹರ್ಷಲ್ ಪಟೇಲ್ ಕೈಚಲ್ಲಿದರು. ಬಳಿಕ ಅಬ್ಬರಿಸಿದ ರಜತ್ ಪಟಿದಾರ್, ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

Kannadiga Vidwath Kaverappa, lethal arrow in Punjab Kings' quiver threatens RCB.

ಬರೋಬ್ಬರಿ ಮೂರು ಪ್ರಮುಖ ಕ್ಯಾಚ್ ಕೈಬಿಟ್ಟರು ವಿದ್ವತ್ ಕಾವೇರಪ್ಪ ಎರಡು ಪ್ರಮುಖ ವಿಕೆಟ್ ಪಡೆದುಕೊಂಡರು. ಒಂದು ಹಂತದಲ್ಲಿ ಆರ್ ಸಿಬಿ ಪಾಳಯದಲ್ಲಿ ಆತಂಕ ಉಂಟಾಗಿತ್ತು, ಆದರೆ ರಜತ್ ಪಾಟಿದಾರ್ ಮತ್ತು ಕೊಹ್ಲಿ ವಿಕೆಟ್ ಬೀಳದಂತೆ ರನ್ ಕಲೆಹಾಕಿದರು.

ವಿಧ್ವತ್ ಕಾವೇರಪ್ಪ ಅವರು 2023ರ ಫೆಬ್ರವರಿಯಲ್ಲಿ 20 ಲಕ್ಷ ರೂಪಾಯಿಗಳಿಗಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಆರಿಸಿಕೊಂಡ ಅವರು, ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ತನ್ನ ಬೆಳವಣಿಗೆಯ ಮೂಲಕ ಪಿಬಿಕೆಎಸ್ ಅನ್ನು ಕಟ್ಟಿಕೊಂಡನು. ಟಿ-20ಯಲ್ಲಿ 13 ಇನಿಂಗ್‌ಗಳಿಂದ 23 ವಿಕೇಟ್ ಪಡೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಈ ಬಾರಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

2022-23ರಲ್ಲಿ ರಣಜಿ ಸೀಸನ್ ನಲ್ಲಿ ರಾಜ್ಯಕ್ಕೆ ಎರಡನೇ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಖ್ಯಾತಿ ಪಡೆದ ವಿಧ್ವತ್, 20 ಆಟಗಳಲ್ಲಿ ಒಟ್ಟು 80 ವಿಕೆಟ್ ಗಳನ್ನು ಪಡೆದಿದ್ದಾರೆ. ಅಲ್ಲದೇ ಎಕಾನಮಿ 5.89 ಹೊಂದಿದ್ದಾರೆ. 18 ಲಿಸ್ಟ್ ಎ ಪಂದ್ಯಗಳಲ್ಲಿ 38 ವಿಕೆಟ್ ಪಡೆದುಕೊಂಡಿರುವ ಅವರು, 20 ಪ್ರಥಮ ದರ್ಜೆ ಪಂದ್ಯಗಳಲ್ಲಿ ಬರೋಬ್ಬರಿ 80 ವಿಕೆಟ್ ಪಡೆದುಕೊಂಡಿದ್ದಾರೆ. ಭಾರತ ಎ ತಂಡಕ್ಕೂ ಆಡಿರುವ ಅವರು, ಈ ವರ್ಷ ಬಿಸಿಸಿಐ ಒಪ್ಪಂದ ಕೂಡ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ಗುರಿ ಹೊಂದಿದ್ದಾರೆ.

You might also like
Leave A Reply

Your email address will not be published.