ದೇವಸ್ಥಾನದಲ್ಲಿ ತೀರ್ಥ ಪ್ರಸಾದ ವಿತರಣೆ ಗೊಂದಲ – ಎರಡು ಕುಟುಂಬಗಳ ನಡುವೆ ವಾಗ್ವಾದ

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಗರ್ಭಗುಡಿಯ ನಂದಿ ಮಂಟಪ ಪೂಜೆ ಹಾಗೂ ತೀರ್ಥ-ಪ್ರಸಾದ ವಿತರಣೆ ವಿಷಯಕ್ಕೆ ಸಂಬಂಧಿಸಿ ಮತ್ತೆ ಉಪಾಧಿವಂತ ಎರಡು ಕುಟುಂಬಗಳ ನಡುವೆ ಗುರುವಾರ ವಾದ-ವಿವಾದ ನಡೆಯಿತು.

ಕೆಲ ವರ್ಷಗಳಿಂದ ಒಂದೇ ಕುಟುಂಬದವರು ವರ್ಷವಿಡೀ ಪೂಜೆ, ತೀರ್ಥ ಪ್ರಸಾದ ವಿತರಣೆ ಕರ್ತವ್ಯ ನಿರ್ವಹಿಸಿ ಇನ್ನೊಂದು ಮನೆತನಕ್ಕೆ ಅವಕಾಶ ನೀಡದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಸಮುಖದಲ್ಲೂ ಸಭೆ ನಡೆಯಿತು.

ಸಭೆಯಲ್ಲಿ ಈ ಎರಡೂ ಕುಟುಂಬದವರು ವಾಗ್ವಾದ ನಡೆಸಿದ್ದರಿಂದ ದಾಖಲೆ ಒದಗಿಸುವಂತೆ ಸೂಚಿಸಿದರು. ಪ್ರಸಾದ ಮಾರಾಟ ಮಾಡುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ನಿರ್ದೇಶಿಸಿದರು.

ಶಂಕರ ಗೋಪಿ ಮನೆತನ ಹಾಗೂ ಜಂಬೆ ಬಾಲಕೃಷ್ಣ ಮನೆತನದವರು ವರ್ಷದಲ್ಲಿ ಆರು ತಿಂಗಳು, ಆರು ತಿಂಗಳು ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ಕೈಗೊಳ್ಳುತ್ತಿದ್ದರು. ದೇವಸ್ಥಾನವನ್ನು ನ್ಯಾಯಾಲಯ ಸರಕಾರಕ್ಕೆ ವಹಿಸಿದಾಗ ಉಪವಿಭಾಗಾಧಿಕಾರಿಗಳು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಪಾಳಿ ಪ್ರಕಾರ ತಮ್ಮ ಮನೆತನದವರು ಪೂಜೆಗೆ ಮುಂದಾದಾಗ ಅವರಿಗೆ ಅವಕಾಶ ನೀಡದೆ ಈ ಹಿಂದಿನವರೇ ಮುಂದುವರಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಮನವಿ ಸಲ್ಲಿಸುತ್ತ ಬಂದರೂ ಸ್ಪಂದಿಸಿಲ್ಲ ಎಂದು ಶಂಕರ ಗೋಪಿ ಮನೆತನದವರು, ಸಾಮಾಜಿಕ ಕಾರ್ಯಕರ್ತರು, ಉಪಾಧಿವಂತರು ಸೇರಿ ದೇವಸ್ಥಾನದ ಒಳಗಡೆ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯ ಪೊಲೀಸರ ಮಾಹಿತಿ ಮೇರೆಗೆ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಬಂದು ಸಭೆ ನಡೆಸಿದರು.

ಶಂಕರ ಗೋಪಿ ಮನೆತನದವರು ದಾಖಲೆ ಸಮೇತ ತಮ್ಮ ಹಕ್ಕು ಮಂಡಿಸಿದ್ದು ಘರ್ಷಣೆಗೆ ಕಾರಣವಾಗಿ ಸಭೆಯಲ್ಲಿದ್ದ ಬಹುತೇಕರನ್ನು ಹೊರ ಹಾಕಲಾಯಿತು. ಜಂಬೆ ಮನೆತನ ಕಾರಿಯಾಗಿ ನೇಮಕಗೊಂಡಿದ್ದಾರೆ. ಪಾಳಿ ದವರು ದಾಖಲೆಗಳನ್ನು ತಕ್ಷಣ ಒದಗಿಸುವಂತೆ ಪ್ರಕಾರ ತಮ್ಮ ಮನೆತನದವರು ಪೂಜೆಗೆ ಉಪವಿಭಾಗಾಧಿಕಾರಿ ಸೂಚಿಸಿದರು.

Temple Teertha- Prasad: rumpus between 2 families.

ಯಾರೇನು ಹೇಳಿದರು?

ಈ ಬಗ್ಗೆ ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯಿಸಿರುವ ಶಂಕರ ಗೋಪಿ, ವರ್ಷ ಗುರುವಾರದಿಂದ ಆರು ತಿಂಗಳ ಸಂದರ್ಭಕ್ಕೆ ತಕ್ಕಂತೆ ಪೂಜೆಗೆ ನಮ್ಮ ಪಾಳಿ ಇತ್ತು. ಅದಕ್ಕೆ ಅವಕಾಶ ಕೊಡಲಿಲ್ಲ. ಅಲ್ಲದೆ, ಪ್ರಸಾದವನ್ನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮ ಕುಟುಂಬಕ್ಕೆ ಪೂಜೆ ಹಕ್ಕು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಾಲಕೃಷ್ಣ ಜಂಬೆ ಮಾತನಾಡಿ, ಅನಾದಿಕಾಲದಿಂದ ನಾವು ನಂದಿಮಂಟಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೆ ಇತ್ತೀಚೆಗೆ ಇದಕ್ಕೆ ಸಂಬಂಧಿಸದ ಕೆಲವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ವಿಚಾರಣೆಯಲ್ಲಿ ಇದ್ದು, ಅದು ಮುಗಿದ ಬಳಿಕ ಅಲ್ಲಿನ ನಿರ್ಧಾರದಂತೆ ಉಪವಿಭಾಗಾಧಿಕಾರಿ, ಮಂದಿರ ಮೇಲುಸ್ತುವಾರಿ ಸಮಿತಿ ಕ್ರಮ ತೆಗೆದುಕೊಳ್ಳಲಿ ಎಂದು ತಿಳಿಸಿದ್ದಾರೆ.

ಶ್ರೀ ಮಹಾಬಲೇಶ್ವರ ದೇವರ ಪ್ರಧಾನ ಅರ್ಚಕರು ಹಾಗೂ ಅನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷರಾಗಿರುವ ರಾಜಗೋಪಾಲ ಅಡಿ ಮಾತನಾಡಿ, ದೇಶದಲ್ಲಿಯೇ ಗೋಕರ್ಣ ಕ್ಷೇತ್ರಕ್ಕೆ ತನ್ನದೇ ಆದ ಕೀರ್ತಿ ಇದೆ. ಅಪಕೀರ್ತಿ ತರಬಾರದು. ಶಂಕರ ಗೋಪಿ ಮನೆತನದವರಿಗೆ ಈ ಹಿಂದೆ ಇದ್ದ ಹಕ್ಕು ಮತ್ತೆ ದೊರೆಯಬೇಕು. ಇಲ್ಲದಿದ್ದಲ್ಲಿ ಭಕ್ತರೇ ಬಂದು ಪ್ರತಿಭಟನೆ ಮಾಡುವ ಕಾಲ ದೂರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

You might also like
Leave A Reply

Your email address will not be published.