ಮತ್ತೊಮ್ಮೆ ಇತಿಹಾಸ ಸೃಷ್ಚಿ ಮಾಡಲು ರವಿಚಂದ್ರನ್ ಸಿದ್ಧತೆ – ಪ್ರೇಮಲೋಕ 2 ಅದ್ದೂರಿ ಆರಂಭ

ಹಂಪಿ ಉತ್ಸವದ ಸಮಯದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ‘ಪ್ರೇಮಲೋಕ 2’ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದ್ದು, ಪುತ್ರ ಮನೋರಂಜನ್ ಹೀರೊ ಆಗಿ ನಟಿಸಲಿದ್ದಾರೆ ಎಂದು ಸುಳಿವು ನೀಡಿದ್ದರು. ಆದರೆ ನಟಿ ಯಾರು ಎಂಬುದು ಎಲ್ಲರ ಮನಸ್ಸಲ್ಲು ಪ್ರಶ್ನೆ ಇತ್ತು. ಇದೀಗ ನಟಿಯ ಕುರಿತಾಗಿ ಸುಳಿವು ಸಿಕ್ಕಿದ್ದು ನಟಿ ಯಾರು? ಎಂಬುದನ್ನು ಈ ಸ್ಟೋರಿಯಲ್ಲಿ ವಿವರಿಸಲಾಗಿದೆ.

‘ಪ್ರೇಮಲೋಕ’ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ ಮನೋರಂಜನ್ ಜತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಮೇ 30 ರವಿಚಂದ್ರನ್ ಅವರ ಬರ್ತ್-​ಡೇ. ಅಂದು ‘ಪ್ರೇಮಲೋಕ 2’ ಚಿತ್ರ ಲಾಂಚ್ ಆಗಲಿದೆ. ರವಿಚಂದ್ರನ್ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಅನ್ನೋ ಕುತೂಹಲ ಮೂಡಿದೆ. ಈ ಚಿತ್ರದಲ್ಲಿ 20-25 ಸಾಂಗ್​ಗಳು ಇರಲಿವೆ ಎಂದು ತಂಡ ಹೇಳಿಕೊಂಡಿದೆ.

Ravichandran all set to create history once again - Premloka 2

1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಅಂದಿನ ಕಾಲಕ್ಕೆ ಈ ಸಿನಿಮಾ ಬರೋಬ್ಬರಿ 11 ಹಾಡುಗಳನ್ನು ಹೊಂದಿತ್ತು. ಈ ಕಾರಣಗಳಿಂದಾಗಿ ಯಾರೊಬ್ಬ ನಿರ್ಮಾಪಕರು ಮುಂದೆ ಬರಲೇ ಇಲ್ಲ. ಹೀಗಾಗಿ ರವಿಚಂದ್ರನ್‌ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಇದಾದ ಬಳಿಕ ಸಿನಿಮಾ ಗೆಲುವು ಕಂಡಿತ್ತು.

ಈ ಮುಂಚೆ ರವಿಚಂದ್ರನ್‌ ಅವರು ದೊಡ್ಡ ಮಗ ಮನೋರಂಜನ್ ನಟಿಸುತ್ತಾನೆ. ಚಿಕ್ಕ ಮಗ ಚಿಕ್ಕ ಪಾತ್ರ ಮಾಡುತ್ತಾನೆ. ನಾನು ತಂದೆಯ ಪಾತ್ರ ಮಾಡುತ್ತೇನೆ. 20-25 ಹಾಡುಗಳು ಇರುತ್ತವೆ. ಎಲ್ಲಾ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗುತ್ತದೆ. ಇಲ್ಲಿ ಜಾತಿ, ರಾಜಕೀಯದ ವಿಚಾರ ಇರಲ್ಲ. ಕೇವಲ ಪ್ರೀತಿ ವಿಚಾರ ಇರಲಿದೆ. ಪ್ರತಿಯೊಬ್ಬರಿಗೂ ಸಿನಿಮಾದಲ್ಲಿ ನಟಿಸುವ ಅವಕಾಶ ಇದೆ. ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು ಎಂದಿದ್ದೀರೋ ಇನ್​ಸ್ಟಾಗ್ರಾಮ್‌ ಅಕೌಂಟ್​ಗೆ ಫ್ಯಾಮಿಲಿ ಫೋಟೊ ಹಾಕ್ಕೊಂಡು ಬನ್ನಿ ಎಂದಿದ್ದರು.

You might also like
Leave A Reply

Your email address will not be published.