ಕಳೆದ ಸಾಲಿಗಿಂತ ಕುಸಿತ ಕಂಡ SSLC ಫಲಿತಾಂಶ – ಯಾವ ಜಿಲ್ಲೆಗೆ ಯಾವ ಸ್ಥಾನ?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ ಕಂಡಿದೆ.

2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49 ರಷ್ಟು ಫಲಿತಾಂಶ ಕುಸಿತವಾಗಿದೆ. ಇದು ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟು ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲಾಗಿದೆ.

ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್‌ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಗಮನಿಸಿದಾಗ ಅಪಾರ ಸಂಖ್ಯೆಯಲ್ಲಿ ಅಂದರೆ ಕಳೆದ ಬಾರಿಗಿಂತ ಶೇಕಡಾ 30ರಷ್ಟು ಕುಸಿತವನ್ನು ಕಾಣಲಾಗಿತ್ತು. ಇದರಿಂದ ಚಿಂತೆಗೊಳಗಾದ ಶಿಕ್ಷಣ ಇಲಾಖೆಯು ಕೊನೆಗೆ ಪಾಸಿಂಗ್‌ ಮಾರ್ಕ್ಸ್‌ ಅನ್ನೇ ಕಡಿಮೆ ಮಾಡಿದೆ.

ಅಂದರೆ ಈ ವರೆಗೆ ಇದ್ದ ಪಾಸಿಂಗ್‌ ಮಾರ್ಕ್ಸ್‌ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್‌ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10 ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು ಶೇಕಡಾ 73.40ರಷ್ಟಾಗಿದೆ. ಇಲ್ಲದಿದ್ದರೆ ಭಾರಿ ಪ್ರಮಾಣದಲ್ಲಿ ಮಕ್ಕಳು ಅನುತ್ತೀರ್ಣರಾಗುತ್ತಿದ್ದರು.

ವೆಬ್‌ ಕಾಸ್ಟಿಂಗ್‌ನಲ್ಲಿ ನಡೆದ ಪರೀಕ್ಷೆ

ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್ ವಿಧಾನವನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫಲಿತಾಂಶವನ್ನು ಉತ್ತಮ ಪಡಿಸಲು ಸರ್ಕಾರ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ, ಒಂದು ಬಾರಿಯ ಕ್ರಮವಾಗಿ, 2024ರ ಎಲ್ಲ 3 ಎಸ್ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಎಲ್ಲ ವಿಷಯಗಳಲ್ಲಿ ನೀಡುವ ಕೃಪಾಂಕಗಳನ್ನು ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇ. 35 ರಿಂದ ಶೇ. 25ಕ್ಕೆ ಇಳಿಸಲಾಗಿದೆ ಮತ್ತು ಕೃಪಾಂಕದ ಪ್ರಮಾಣವನ್ನು ಶೇ. 10 ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು, ಮೇಲಿನ ಕೋಷ್ಟಕದಲ್ಲಿನಂತೆ, 73.40% ಆಗಿದೆ. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.

SSLC Pass Percentage Sees Sharp Decline: Check District-Wise Rankings Here.

ಫಸ್ಟ್‌ ಬೆಂಚ್‌ಗೆ ಬಂದ ಉಡುಪಿ; ಲಾಸ್ಟ್‌ ಬೆಂಚ್‌ನಲ್ಲೇ ಉಳಿದ ಯಾದಗಿರಿ!

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49% ರಷ್ಟು ಫಲಿತಾಂಶ ಕುಸಿತವಾಗಿದೆ. ಕಳೆದ ವರ್ಷ ಮೊದಲ ಸ್ಥಾನವನ್ನು ಚಿತ್ರದುರ್ಗ, ಎರಡನೇ ಸ್ಥಾನವನ್ನು ಮಂಡ್ಯ , ಮೂರನೇ ಸ್ಥಾನವನ್ನು ಹಾಸನ ಹಾಗೂ ಕೊನೆ ಸ್ಥಾನವನ್ನು ಯಾದಗಿರಿ ಪಡೆದಿತ್ತು. ಈ ವರ್ಷವೂ ಫಲಿತಾಂಶದಲ್ಲಿ ಯಾದಗಿರಿಯು ಕೊನೆ ಸ್ಥಾನವನ್ನೇ ಗಳಿಸಿದ್ದು, ಶೇಕಡಾವಾರು 50.59ರಷ್ಟು ಫಲಿತಾಂಶ ಬಂದಿದೆ. ಇನ್ನೂ ಉಡುಪಿ ಜಿಲ್ಲೆ ಕಳೆದ ಬಾರಿ 14ಕ್ಕೆ ಸ್ಥಾನದಲ್ಲಿತ್ತು, ಆದರೆ, ಈ ಬಾರಿ ಶೇ.94ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನವನ್ನು ಗಳಿಸಿದೆ. ದಕ್ಷಿಣ ಕನ್ನಡ ಎರಡನೇ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಗಳಿಸಿದೆ.

ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಇಂತಿದೆ

1) ಉಡುಪಿ- 94%
2) ದಕ್ಷಿಣ ಕನ್ನಡ-92.12%
3) ಶಿವಮೊಗ್ಗ -88.67%
4) ಕೊಡಗು- 88.67%
5) ಉತ್ತರ ಕನ್ನಡ-86.54%
6) ಹಾಸನ-86.28%
7) ಮೈಸೂರು-85.5%
8) ಶಿರಸಿ-84.64%
9)ಬೆಂಗಳೂರು ಗ್ರಾಮಾಂತರ-83.67%
10) ಚಿಕ್ಕಮಗಳೂರು-83.39%
11) ವಿಜಯಪುರ- 79.82%
12) ಬೆಂಗಳೂರು ದಕ್ಷಿಣ-79%
13) ಬಾಗಲಕೋಟೆ-77.92%
14)ಬೆಂಗಳೂರು ಉತ್ತರ- 77.09%
15) ಹಾವೇರಿ-75.85%
16) ತುಮಕೂರು-75.16%
17)ಗದಗ- 74.76%
18)ಚಿಕ್ಕಬಳ್ಳಾಪುರ- 73.61%
19)ಮಂಡ್ಯ-73.59%
20) ಕೋಲಾರ-73.57%
21)ಚಿತ್ರದುರ್ಗ-72.85%
22) ಧಾರವಾಡ-72.67%
23) ದಾವಣಗೆರೆ- 72.48%
24) ಚಾಮರಾಜನಗರ-71.59%
25) ಚಿಕ್ಕೋಡಿ-69.82%
26) ರಾಮನಗರ-69.53%
27) ವಿಜಯನಗರ-65.61%
28) ಬಳ್ಳಾರಿ-64.99%
29) ಬೆಳಗಾವಿ-64.93%
30) ಮಧುಗಿರಿ-62.44%
31) ರಾಯಚೂರು- 61.2%
32) ಕೊಪ್ಪಳ- 61.16%
33) ಬೀದರ್‌- 57.52%
34) ಕಲಬುರಗಿ- 53.04%
35) ಯಾದಗಿರಿ- 50.59%

ಮಾಧ್ಯಮವಾರು ಫಲಿತಾಂಶ

ಕನ್ನಡ – 69.34%
ಆಂಗ್ಲ – 88.29%
ಉರ್ದು – 63.49%
ಮರಾಠಿ – 69.32%
ತೆಲುಗು – 75.59%

You might also like
Leave A Reply

Your email address will not be published.