ಜಮ್ಮು-ಕಾಶ್ಮೀರ: ಉಗ್ರರ ದಾಳಿಯಲ್ಲಿ ಹುತಾತ್ಮರಾದ 5 ಮಂದಿ ವೀರ ಯೋಧರು

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಹಾಗೂ ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ಕಾಳಗದಲ್ಲಿ ಶುಕ್ರವಾರ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ.

ಪೂಂಚ್ ವಲಯದ ರಜೌರಿಯಲ್ಲಿನ ದೇರಾ ಕಿ ಗಾಲಿ ಮೂಲಕ ಗುರುವಾರ ಮಧ್ಯಾಹ್ನ ಎರಡು ಸೇನಾ ವಾಹನಗಳು ಹಾದು ಹೋಗುವಾಗ ಭಯೋತ್ಪಾದಕರು ಸೇನಾ ಗಾಡಿಗಳನ್ನೇ ಗುರಿಯಾಗಿಸಿ ಗುಂಡು ಹಾರಿಸಿದ್ದರು. ಇದರ ಬಳಿಕ ಎರಡೂ ಕಡೆಗಳ ನಡುವೆ ಎನ್ಕೌಂಟರ್ ಆರಂಭವಾಗಿತ್ತು. ಘಟನೆ ನಡೆದ ಪ್ರಾರಂಭದಲ್ಲಿ ಯಾವದೇ ಸಾವು, ನೋವುಗಳಿಗೆ ಕುರಿತಾದ ಮಾಹಿತಿ ಸಿಕ್ಕಿರಲಿಲ್ಲ.

ರಕ್ಷಣಾ ವಕ್ತಾರರು ಹೇಳಿದ್ದೇನು?
ಖಚಿತ ಗುಪ್ತಚರ ಮೂಲಗಳ ಆಧಾರದಲ್ಲಿ ಕಳೆದ ರಾತ್ರಿ ಡಿಕೆಜಿ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಸಂಜೆ ಭಯೋತ್ಪಾದಕರ ಜಾಡು ಸಿಕ್ಕಿದ್ದು, ಎನ್ಕೌಂಟರ್ ಪ್ರಗತಿಯಲ್ಲಿದೆ.

ದಾಳಿ ನಡೆಸುವುದ್ದಕ್ಕೂ ಮುನ್ನ ಜಾಗದ ಪರಿಶೀಲನೆ ನಡೆಸಿದ ಉಗ್ರರು:

ಸೇನಾ ವಾಹನದ ಮೇಲೆ ದಾಳಿ ನಡೆಸಲು ಉಗ್ರರು ಡಿಕೆಜಿ ಮತ್ತು ಬಫ್ಲಿಯಾಜ್ ನಡುವಿನ ಧತ್ಯಾರ್ ಮೋರ್ಹ್ ಸ್ಥಳವನ್ನು ಆಯ್ದುಕೊಂಡಿದ್ದರು. ಇಲ್ಲಿ ಬಹಳ ಕಡಿದಾದ ತಿರುವು ಮತ್ತು ಏರು ತಗ್ಗಿನ ರಸ್ತೆಯ ಕಾರಣದಿಂದ ಸೇನಾ ವಾಹನಗಳು ಸಂಪೂರ್ಣ ನಿಧಾನವಾಗುತ್ತದೆ. ಧತ್ಯಾರ್ ಮೊರ್ಹ್ನ ಬೆಟ್ಟವೊಂದರಲ್ಲಿ ಸನ್ನದ್ಧರಾಗಿ ನಿಂತಿದ್ದ ಉಗ್ರರು, ಎರಡು ಸೇನಾ ವಾಹನಗಳ ಮೇಲೆ ಮಧ್ಯಾಹ್ನ 3.45ರ ವೇಳೆಗೆ ಗುಂಡಿನ ದಾಳಿ ನಡೆಸಿದ್ದಾರೆ.

ಉಗ್ರರ ದಾಳಿಗೆ ಪ್ರತಿಯಾಗಿ ಸೇನೆ ಗುಂಡಿನ ದಾಳಿ ನಡೆಸಿತು. ಆದರೆ, ಅವರು ಮುಂಚಿತವಾಗಿ ಸಜ್ಜಾಗಿ ಬಂದಿದ್ದರಿಂದ ಆ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ.

ಸೇನೆಯ ಟ್ರಕ್ ಮತ್ತು ಮಾರುತಿ ಜಿಪ್ಸಿ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಕ್ಕೂ ಮುನ್ನ ಉಗ್ರರು ಈ ಭಾಗದಲ್ಲಿ ಪರಿಶೀಲನೆ ನಡೆಸಿರುವ ಸಾಧ್ಯತೆ ಇದೆ. ಈ ದಾಳಿಯಲ್ಲಿ ಮೂವರು ಅಥವಾ ನಾಲ್ವರು ಉಗ್ರರು ಭಾಗಿಯಾಗಿರಬಹುದು ಎಂದು ಸೇನೆ ತಿಳಿಸಿದೆ.

ಇದೀಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾಕಿಸ್ತಾನದ ಮೂಲದ ಉಗ್ರ ಸಂಘಟನೆಯ ಲಷ್ಕರ್ ಎ ತೊಯ್ಬಾದ (ಎಲ್ಇಟಿ) ಘಟಕವಾದ ದಿ ಪೀಪಲ್ಸ್ ಆಂಟಿ- ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಈ ಘಟನೆಯ ಹೊಣೆ ಹೊತ್ತುಕೊಂಡಿದೆ ಎಂಬುದಾಗಿ ತಿಳಿದುಬಂದಿದೆ.

You might also like
Leave A Reply

Your email address will not be published.