ಮಣ್ಣಲ್ಲಿ ಮಣ್ಣಾದ ವೀರ ಅರ್ಜುನ – ಅಂತ್ಯಕ್ರಿಯೆಯ ವಿಡಿಯೋ ನೋಡಿ.

ಕಾರ್ಯಾಚರಣೆ ವೇಳೆ ಒಂಟಿ ಸಲಗದ ತಿವಿತಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದ ಅರ್ಜುನ ಆನೆಯ ಅಂತ್ಯಸಂಸ್ಕಾರ ಇಂದು ಗೌರವಯುತವಾಗಿ ನೆರವೇರಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಸಮೀಪದ ಕೆಎಫ್ʼಡಿಸಿ ನೆಡುತೋಪಿನಲ್ಲಿ ಅರ್ಜುನನ ಕಳೇಬರದ ಅಂತ್ಯಕ್ರಿಯೆ ನಡೆಯಿತು.

 

 ಅರ್ಜುನ ಆನೆಯ ಅಂತ್ಯಸಂಸ್ಕಾರ
ಅರ್ಜುನ ಆನೆಯ ಅಂತ್ಯಸಂಸ್ಕಾರ

 

ಸೋಮವಾರ ಮಧ್ಯಾಹ್ನ ಒಂಟಿ ಸಲಗವನ್ನು ಸೆರೆಯಿಡಿಯುವ ಕಾರ್ಯಾಚರಣೆ ವೇಳೆ ಒಂಟಿ ಸಲಗದ ತಿವಿತಕ್ಕೆ ಒಳಗಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಆನೆ ಸಾವನ್ನಪ್ಪಿತ್ತು. 8 ಬಾರಿ ಅಂಬಾರಿ ಹೊತ್ತು ಅರ್ಜುನನು ಚಾಮುಂಡೇಶ್ವರಿಯ ಕೃಪೆಗೆ ಪಾತ್ರನಾಗಿದ್ದ. ಗಜರಾಜನ ಸಾವಿನ ನಂತರ ರಾಜ್ಯದ ಸಾಕಷ್ಟು ಜನ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದರು.

ಸಾರ್ವಜನಿಕರ ಆಕ್ರೋಶ :

ಸಾಂಸ್ಕೃತಿಕ ರಾಯಭಾರಿಯಾಗಿದ್ದ ಅರ್ಜುನ ಆನೆಯ ಸಾವಿಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂಟಿ ಸಲಕ್ಕೆ ಹೊಡೆಯಬೇಕಾಗಿದ್ದ ಅರವಳಿಕೆ ಚುಚ್ಚುಮದ್ದನ್ನು ಅರ್ಜುನ ಆನೆಗೆ ಹೊಡೆದುದು ಹಾಗೂ ಅರ್ಜುನನ ಕಾಲಿಗೆ ಗುಂಡು ಹೊಡೆದುದೇ ಸಾವಿಗೆ ಕಾರಣ ಎಂದು ಕಿಡಿಕಾರಿದ್ದಾರೆ.

 

ಸಾರ್ವಜನಿಕರ ಆಕ್ರೋಶ

 

ಮುಗಿಲುಮುಟ್ಟಿದ ಮಾವುತ ವಿನುವಿನ ಆಕ್ರಂದನ :

ಅರ್ಜುನ ಆನೆಯ ಕಳೇಬರದ ಅಂತ್ಯಕ್ರಿಯ ವೇಳೆ ಅದರ ಮಾವುತ ವಿನುವಿನ ಆಕ್ರಂದನ ಮುಗಿಲು ಮುಟ್ಟಿತ್ತು. ಒಂಟಿ ಸಲಗ ಹಾಗೂ ಅರ್ಜಿನನ ಕಾದಾಟದ ನಡುವೆ ಮಾವುತ ವಿನುಗೂ ಸಹಿತ ಸಣ್ಣ ಪುಟ್ಟ ಗಾಯಗಳಾಗಿವೆ.

You might also like
Leave A Reply

Your email address will not be published.