ನಿಮ್ಮ ಮೊಬೈಲ್‌, ಲ್ಯಾಪ್‌ ಟಾಪ್‌ʼನಲ್ಲಿ ಸದ್ದಿಲ್ಲದೇ ನುಗ್ತಾರೆ ಹ್ಯಾಕರ್ಸ್‌ ; ಈ ಎಚ್ಚರಿಕೆಗಳನ್ನು ಪಾಲಿಸಿ, ಸುರಕ್ಷಿತವಾಗಿರಿ

ಪ್ರಸ್ತುತ ದಿನಮಾನಗಳಲ್ಲಿ ಗೂಗಲ್, ಇಂಟರ್‌ನೆಟ್‌ ಗಳ ಮೇಲೆ ನಮ್ ಜನ ಅದೆಷ್ಟು ಅವಲಂಬಿತರಾಗಿದ್ದಾರೆ ಎಂದರೆ ತಾವು ಭೇಟಿ ನೀಡುವ ವೆಬ್‌ಸೈಟ್‌, ಬಳಸುವ ಅಪ್ಲಿಕೇಶನ್‌ ಎಲ್ಲವೂ ಸಹ ಸುರಕ್ಷಿತ, ಪ್ರಮಾಣಿಕ ಎಂದೇ ಭಾವಿಸುವ ಮಟ್ಟಕ್ಕೆ ಅವರ ಮನಸ್ಥಿತಿ ಬಂದು ತಲುಪಿದೆ. ಅಷ್ಟೇ ಅಲ್ಲ. ಯಾವುದರ ಬಗ್ಗೆಯು ತಲೆ ಕಡೆಸಿಕೊಳ್ಳದೇ ಪ್ರಸ್ತುತ ಸಮಯಕ್ಕೆ ದಕ್ಕುವ ಪ್ರಯೋಜನಗಳನ್ನ ಮಾತ್ರ ಆಲೋಚಿಸುತ್ತಿದ್ದಾರೆ. ಆದರೆ ಈ ನಂಬಿಕೆಗಳೆಲ್ಲವನ್ನು ಅಲ್ಲಗಳೆಯುವ, ಸುಳ್ಳು ಮಾಡುವ ಆನ್‌ಲೈನ್‌ ಕ್ರಿಮಿನಲ್‌ಗಳು, ಹ್ಯಾಕರ್‌ಗಳು ಸಮಾಜದಲ್ಲಿ ಇದ್ದಾರೆ ಎಂಬುದನ್ನೇ ಮರೆತಿರುವುದು ದುರದೃಷ್ಟಕರ!

ಆನ್‌ಲೈನ್‌ ಮೂಲಕವೇ ನಿಮ್ಮನ್ನು ಲೂಟಿ ಮಾಡುವ ಸೈಬರ್‌ ಕ್ರಿಮಿನಲ್‌ಗಳು ಇರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಇವರೆಲ್ಲರಿಗೂ ಆನ್‌ಲೈನ್‌ ಮೋಸ ಮಾಡಲು, ಮಾಹಿತಿ ಕದಿಯಲು, ಬ್ಯಾಂಕ್‌ ಅಕೌಂಟ್‌ಗೆ ಖನ್ನಹಾಕಲು ಇರುವ ದಾರಿಗಳಲ್ಲಿ ಮೊದಲೆಂದರೆ ಮಾಲ್‌ವೇರ್‌ ಹರಡುವುದಾಗಿದೆ.

ಈ ಮಾಲ್‌ವೇರ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಮಾತ್ರವಲ್ಲದೇ ನಿಮ್ಮನ್ನು ಸುರಕ್ಷಿತಗೊಳಿಸಿಕೊಳ್ಳಬೇಕು ಎಂದರೆ ಮೊದಲು ಮಾಲ್‌ವೇರ್ ಎಂದರೇನು? ಅದು ಹೇಗೆ ನಿಮಗೆ ಹಂಚಲ್ಪಡುತ್ತದೆ? ಮಾಲ್‌ವೇರ್‌ ಹರಡುವುದನ್ನು ತಡೆಗಟ್ಟುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳಬೇಕು. ಇಂದಿನ ಸ್ಮಾರ್ಟ್‌ಫೋನ್‌ ಪ್ರಿಯರು, ಗ್ಯಾಜೆಟ್‌ ಪ್ರಿಯರು, ಲ್ಯಾಪ್‌ಟಾಪ್‌ ಪ್ರಿಯರಿಗಾಗಿಯೇ ಗೂಗಲ್‌ ಮಾಲ್‌ವೇರ್‌ನಿಂದ ಸುರಕ್ಷಿತವಾಗಿರಲು ಕೆಲವು ಎಫೆಕ್ಟಿವ್‌ ಟಿಪ್ಸ್‌ಗಳನ್ನು ನೀಡಿದೆ. ಅವುಗಳನ್ನು ಹಂತ ಹಂತವಾಗಿ ನಾವಿಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇವೆ.

ಮಾಲ್‌ವೇರ್‌ ಏಂದರೇನು?

ಮಾಲ್‌ವೇರ್‌ ಎಂಬುದು ಒಂದು ರೀತಿಯ ಸಾಫ್ಟ್‌ವೇರ್‌. ಇದನ್ನು ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಟ್ಯಾಬ್‌, ಹೀಗೆ ಹಲವು ರೀತಿಯ ಸಾಫ್ಟ್‌ವೇರ್‌ ಆಧಾರಿತ ಗ್ಯಾಜೆಟ್‌ಗಳಿಗೆ ಸಮಸ್ಯೆಯೊಡ್ಡಲು ಡೆವಲಪ್‌ ಮಾಡಲಾಗಿದೆ. ಮಾಲ್‌ವೇರ್‌ಗಳು ನಿಮ್ಮ ಯಾವುದೇ ಈ ಇಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌ಗಳಲ್ಲಿನ ಸೂಕ್ಷ್ಮ ವಿಚಾರಗಳನ್ನು ಕದಿಯಬಹುದು. ನಿಮ್ಮ ಕಂಪ್ಯೂಟರ್‌ ಅನ್ನು ಸ್ಲೋ ಮಾಡಬಹುದು. ಅಲ್ಲದೇ ನಿಮಗೆ ಗೊತ್ತಿಲ್ಲದಂತೆ ಫೇಕ್‌ ಇಮೇಲ್‌ ಅನ್ನು ನಿಮ್ಮ ಇಮೇಲ್‌ಗೆ ಕಳುಹಿಸಿ ಸಮಸ್ಯೆ ತಂದೊಡ್ಡಬಲ್ಲವು ಈ ಮಾಲ್‌ವೇರ್‌ಗಳು.

ನಿಮ್ಮ ಫೋನ್‌, ಕಂಪ್ಯೂಟರ್‌ಗೆ ಹರಡಬಹುದಾದ ಸಾಮಾನ್ಯ ಮಾದರಿಯ ಮಾಲ್‌ವೇರ್‌ಗಳೆಂದರೆ..​

1. ವೈರಸ್ – ಹಾನಿಕಾರಕ ಕಂಪ್ಯೂಟರ್ ಪ್ರೋಗ್ರಾಮ್. ಇದು ಸಿಸ್ಟಮ್‌ನಲ್ಲಿನ ಡಾಟಾ ಕಾಪಿ ಮಾಡಿಕೊಳ್ಳಬಲ್ಲದು, ಕಂಪ್ಯೂಟರ್‌ಗೆ ಹಾನಿ ಮಾಡಬಲ್ಲದು.
2. Worm – ದುರುದ್ದೇಶಪೂರಿತ ಕಂಪ್ಯೂಟರ್ ಪ್ರೋಗ್ರಾಮ್‌ ಆಗಿದ್ದು, ಇತರೆ ಕಂಪ್ಯೂಟರ್‌ಗಳಿಗೆ ಕಾಪಿಗಳನ್ನು ಕಳುಹಿಸಬಲ್ಲದು.
3. ಸ್ಪೈವೇರ್ – ಕಂಪ್ಯೂಟರ್‌ನಲ್ಲಿ ನಿಮಗೆ ಗೊತ್ತಿಲ್ಲದಂತೆ ಸೂಕ್ಷ್ಮ ಡಾಟಾ ಸಂಗ್ರಹಿಸಬಲ್ಲದು.
4. Adware – ಇದೊಂದು ಸಾಫ್ಟ್‌ವೇರ್‌ ಆಗಿದ್ದು, ಸ್ವಯಂಚಾಲಿತವಾಗಿ ವರ್ಕ್‌ ಆಗಲಿದ್ದು, ನಿಮ್ಮ ಕಂಪ್ಯೂಟರ್‌ಗೆ ಜಾಹೀರಾತುಗಳನ್ನು ಡೌನ್‌ಲೋಡ್‌ ಮಾಡಬಲ್ಲದು.
5. ಟ್ರೋಜನ್ ಹಾರ್ಸ್‌ – ಇದು ನಿಮ್ಮ ಪಿಸಿಯಲ್ಲಿ ಇನ್‌ಸ್ಟಾಲ್‌ ಆದ ನಂತರ ಹಾನಿ ಮಾಡುವುದಲ್ಲದೇ ಮಾಹಿತಿಗಳನ್ನು ಕದಿಯಬಲ್ಲದು.

Hackers coming silently in your mobile, laptop; Follow these warnings and stay safe

ಮೊಬೈಲ್, ಕಂಪ್ಯೂಟರ್‌ಗೆ ಮಾಲ್‌ವೇರ್‌ಗಳು ಹೇಗೆ ಹರಡುತ್ತವೆ?

ಮಾಲ್‌ವೇರ್‌ಗಳು ವಿವಿಧ ಮಾದರಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗೆ ಬರಬಲ್ಲವು. ಅವುಗಳಲ್ಲಿ ಕೆಲವು ಸಾಮಾನ್ಯ ವಿಧಾನಗಳೆಂದರೆ..

1. ಇಂಟರ್‌ನೆಟ್‌ನಲ್ಲಿ ಉಚಿತ ಸಾಫ್ಟ್‌ವೇರ್‌ ಗಳ ಮೂಲಕ ಸೀಕ್ರೇಟ್‌ ಆಗಿ ಮಾಲ್‌ವೇರ್‌ ಬರಬಹುದು.
2. ಸಾಫ್ಟ್‌ವೇರ್‌ಗಳ ಗುಂಪುಗಳೊಂದಿಗೆ ಮಾಲ್‌ವೇರ್‌ ಬರಬಹುದು.
3. ಮಾಲ್‌ವೇರ್‌ನಿಂದ ಹಾನಿಗೊಳಗಾದ ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಮಾಲ್‌ವೇರ್‌ ಬರಬಹುದು.
4. ಫೇಕ್‌ ಎರರ್ ಮೆಸೇಜ್ ಅಥವಾ ಪಾಪಪ್ ವಿಂಡೋ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಲ್‌ವೇರ್‌ ಡೌನ್‌ಲೋಡ್‌ ಆಗಬಹುದು.
5. ಮಾಲ್‌ವೇರ್‌ ಇರುವ ಇಮೇಲ್‌ ಅಟ್ಯಾಚ್‌ಮೆಂಟ್‌ ಓಪನ್‌ ಮಾಡುವುದರಿಂದ ಮಾಲ್‌ವೇರ್‌ ಹರಡುತ್ತದೆ.

ಹೀಗೆ ಹಲವು ವಿಧಾನಗಳಲ್ಲಿ ಮಾಲ್‌ವೇರ್‌ ಹರಡಬಹುದು. ಆದರೆ ಇವುಗಳನ್ನು ತಡೆಗಟ್ಟಲು ಸಾಧ್ಯವಿದೆ.

ಮಾಲ್‌ವೇರ್‌ ಹರಡದಂತೆ ತಡೆಗಟ್ಟುವುದು ಹೇಗೆ?

ನಿಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್‌ ಅನ್ನು ಹಾಗೂ ಅವುಗಳಲ್ಲಿನ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್‌ ಮಾಡುತ್ತಿರಿ. ಕೆಲವು ಓಎಸ್‌ಗಳು ಮಲ್ಟಿಪಲ್ ಅಕೌಂಟ್‌ಗಳನ್ನು ಬಳಕೆ ಮಾಡಲು ಅವಕಾಶ ನೀಡುತ್ತವೆ. ಒಂದೊಂದು ಅಕೌಂಟ್‌ಗೆ ಒಂದೊಂದು ರೀತಿ ಸೆಟ್ಟಿಂಗ್ ಮಾಡಿಕೊಳ್ಳಬಹುದು. ಇದನ್ನು ಪ್ರಯತ್ನ ಮಾಡಿರಿ. ನಾನ್‌ ಅಡ್ಮಿನಿಸ್ಟ್ರೇಟರ್ ಅಕೌಂಟ್‌ ಬಳಕೆ ಮಾಡಿ.

ಲಿಂಕ್‌ಗಳನ್ನು ಕ್ಲಿಕ್ ಮಾಡುವ ಬಗ್ಗೆ ಎಚ್ಚರ ವಹಿಸಿ

1. ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು, ಸಾಫ್ಟ್‌ವೇರ್‌, ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಮೊದಲು ಪರಿಶೀಲಿಸಿ, ಯೋಚಿಸಿ.
2. ಇಮೇಲ್‌ ಹಾಗೂ ಇಮೇಜ್‌ ಅಟ್ಯಾಚ್‌ಮೆಂಟ್‌ಗಳನ್ನು ಓಪನ್‌ ಮಾಡುವ ಮೊದಲು ಎಚ್ಚರವಾಗಿರಿ.
3. ಪಾಪಪ್‌ ಆಗುವ ವಿಂಡೋಗಳು, ಸಾಫ್ಟ್‌ವೇರ್ ಡೌನ್‌ಲೋಡ್‌ ಮಾಡಲು ಕೇಳುವ ಲಿಂಕ್‌ಗಳನ್ನು ನಂಬಬೇಡಿ.
4. ಫೈಲ್‌ ಶೇರ್‌ ಮಾಡುವುದನ್ನು ಸೀಮಿತಗೊಳಿಸಿ.
5. ಆಂಟಿವೈರಸ್‌ ಸಾಫ್ಟ್‌ವೇರ್‌ಗಳನ್ನು ಬಳಸಿ.

You might also like
Leave A Reply

Your email address will not be published.