ನಾನೇಕೆ ಗಾಂಧಿಯನ್ನು ಕೊಂದೆ?

ನಾಥೂರಾಮ್ ಗೋಡ್ಸೆ ಗಾಂಧಿಯವರನ್ನು ಹತ್ಯೆ ಮಾಡಿ 76 ವರ್ಷಗಳ ಬಳಿಕ ನಾನು ಏಕೆ ಗಾಂಧಿಯನ್ನು ಹತ್ಯೆ ಮಾಡಿದೆ ಎಂಬ ಥ್ರೆಡ್ ಒಂದನ್ನು ಸ್ಟಾರ್ ಬಾಯ್ ತರುಣ್ ಎಂಬ ಹೆಸರಿನ ಖಾತೆಯು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಆ ಥ್ರೆಡ್ ಹೀಗೆ ಆರಂಭವಾಗುತ್ತದೆ.
ನಮಸ್ತೆ ಸ್ನೇಹಿತರೇ, ನನ್ನ ಹೆಸರು ನಾಥೂರಾಂ ವಿನಾಯಕ ಗೋಡ್ಸೆ.‌ ನೀವು ನನ್ನನ್ನು ಗಾಂಧಿಯ ಕೊಲೆಗಾರ ಎಂದು ಪರಿಚಿತರಾಗಿದ್ದೀರಿ. ನಾನು ಮಾಡಿದ್ದನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ ಆ ದಿನದ ಅಂದರೆ 76 ವರ್ಷಗಳ ನಂತರ ಆ ಘಟನೆಯ ಕುರಿತು ಅಂದರೆ ನಾನು ಅದನ್ನು ಯಾಕೆ ಮಾಡಿದೆ ಎಂದು ಹೇಳಲು ಬಯಸುತ್ತೇನೆ‌.

ನೀವು 2024 ರಲ್ಲಿ ಅಂದರೆ ಮುಕ್ತವಾದ ಭಾರತದಲ್ಲಿ ವಾಸಿಸುತ್ತಿದ್ದೀರಿ. ಆದರೆ, ನಾನು 1948 ಕ್ಕೆ ಸೇರಿದವನು. ನೀವು ವ್ಯಕ್ತಿಯ ನಿರ್ಣಯ ಅಥವಾ ತೀರ್ಪೀನ ಬಗ್ಗೆ ತಿಳಿಯಬೇಕಾದರೆ ಅದು ರೂಪುಗೊಂಡ ಪರಿಸರದ ಬಗೆಗೆ ಅರಿವಿರಬೇಕು. ಅದರ ಅರಿವಿಲ್ಲದೆ ನೀವು ಯಾರೊಬ್ಬರ ತೀರ್ಪನ್ನು ತಿರಸ್ಕರಿಸಲು ಅಥವಾ ಸಮರ್ಥಿಸಲು ಸಾಧ್ಯವಿಲ್ಲ. ನಾನು ಅಂದು ಯಾಕೆ ಆ ನಿರ್ಧಾರ ಕೈಗೊಂಡೆ ಎಂಬುದನ್ನು ಹೇಳಲು ಬಯಸುತ್ತೇನೆ.

ನಾನು ಶ್ರದ್ಧಾಭಕ್ತಿಯುಳ್ಳ, ಸುಸಂಸ್ಕೃತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದೆ. ಹಿಂದೂಧರ್ಮದ ಬಗೆಗೆ ಗೌರವ, ಧರ್ಮದ ಇತಿಹಾಸದ ಮತ್ತು ಸಂಸ್ಕೃತಿಯ ಬಗೆಗಿನ ಅರಿವು ಸಹಜವಾಗಿಯೇ ಬಂದಿದೆ‌. ಆದ್ದರಿಂದ ನಮ್ಮ ಧರ್ಮದ ಬಗೆಗೆ ನಾನು ಯಾವಾಗಲೂ ತೀವ್ರವಾದ ಗೌರವ ಹೊಂದಿದ್ದು ಅಪಾರ ಹೆಮ್ಮೆ ಪಡುತ್ತಿದ್ದೆ. ನಾನು ಬೆಳೆದಂತೆ ಮುಕ್ತವಾಗಿ ಚಿಂತಿಸುವುದನ್ನು ರೂಢಿಸಿಕೊಂಡೆ. ಹಾಗಾಗಿ ನಾನು ಅಸ್ಪೃಶ್ಯತೆಯನ್ನು ತೊಡೆದುಹಾಕುವಲ್ಲಿ ಕೆಲಸ‌ಮಾಡಿದೆ‌. ಸ್ವಾತಂತ್ರ್ಯ ವೀರ ಸಾವರ್ಕರ್ ಹಾಗೂ ಮೋಹನ್‌ದಾಸ್ ಕರಮ‌ ಚಂದ್ ಗಾಂಧಿಯವರು ಬರೆದ ಹಾಗೂ ಮಾತನಾಡಿದ ವಿಷಯಗಳನ್ನು ತೀರಾ ಹತ್ತಿರದಿಂದ ಅಧ್ಯಯನ ಮಾಡಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಈ ಎರಡು ಸಿದ್ಧಾಂತಗಳು ಕಳೆದ ಮೂವತ್ತು ವರ್ಷಗಳಲ್ಲಿ ಭಾರತೀಯರ ಆಲೋಚನೆ ಮತ್ತು ಕ್ರಿಯೆಗಳನ್ನಯ ರೂಪಿಸುವಲ್ಲಿ ಇತರ ಯಾವುದೇ ಅಂಶಗಳಿಗಿಂತ ಹೆಚ್ಚಿನ ಕೊಡುಗೆ ನೀಡಿವೆ. ಈ ಎಲ್ಲಾ ಚಿಂತನೆಗಳು ಹಿಂದೂ ಧರ್ಮಕ್ಕೆ ಸೇವೆ ಸಲ್ಲಿಸುವುದೇ ನನ್ನ ಆದ್ಯ ಕರ್ತವ್ಯವೆಂದು ನಂಬುವಂತೆ ಮಾಡಿತು.

ಮೂವತ್ತು ಕೋಟಿ ಜನ ಹಿಂದೂಗಳ ಸ್ವಾತಂತ್ರ್ಯವನ್ನು ಭದ್ರಪಡಿಸುವುದು ಮತ್ತು ಅವರ ನ್ಯಾಯಯುತ ಹಿತಾಸಕ್ತಿಗಳನ್ನು ಕಾಪಾಡುವುದು ಸ್ವಯಂಚಾಲಿತವಾಗಿ, ಯಾವುದೇ ಅಡೆ ತಡೆಯಿಲ್ಲದೆ ಅಖಿಲ ಭಾರತದ ಸ್ವಾತಂತ್ರ್ಯ ಮತ್ತು ಯೋಗಕ್ಷೇಮವನ್ನು ರೂಪಿಸುತ್ತದೆ. 1920 ರಿಂದ ಬಹುಶಃ ತಿಲಕರ ನಿಧನದ ನಂತರ ಕಾಂಗ್ರೆಸ್‌ನಲ್ಲಿ ಗಾಂಧೀಜಿಯವರ ಪ್ರಭಾವ ಮೊದಲು ಹೆಚ್ಚಾಯಿತು ನಂತರ ಅದು ತಾರಕಕ್ಕೇರಿತು. ಸಾರ್ವಜನಿಕ ವಲಯದಲ್ಲಿ‌ ನಡೆದ ಅವರ ಜಾಗೃತಿ ಜಾಥಾಗಳು ಅಸಾಧಾರಣವಾಗಿದ್ದವು ಮತ್ತು ಸತ್ಯ ಹಾಗೂ ಅಹಿಂಸೆಯ ಘೋಷಣೆಯಿಂದ ಇನ್ನಷ್ಟು ಬಲಗೊಂಡಿದ್ದವು.

ಆದರೆ ಸ್ವಂತ ದೇಶದ ಮೇಲಿನ ಪ್ರೀತಿಯು ಅಹಿಂಸೆಯ ಬದಲಿಗೆ ನಮ್ಮ ಬಲ, ಶಕ್ತಿಯನ್ನು ಬಳಸಲು ನಮ್ಮನ್ನು ಒತ್ತಾಯಿಸಬಹುದು. ಯಾಕೆಂದರೆ ಆಕ್ರಮಣವಾದರೆ ಸಶಸ್ತ್ರವನ್ನು ಬಳಸಿ ಕಾಪಾಡಿಕೊಳ್ಳುವುದು ಅನ್ಯಾಯವೆಂಬುದನ್ನು ನಾನು ಅಂದುಕೊಳ್ಳಲು ಸಾಧ್ಯಾವಾಗಲೇ ಇಲ್ಲ. ವಿರೋಧ ಮಾಡುವುದು ನಮ್ಮ ನೈತಿಕ ಮತ್ತು ಧಾರ್ಮಿಕ ಕರ್ತವ್ಯವೆಂದು ನಾನು ಭಾವಿಸುತ್ತೇನೆ‌. ರಾಮನು ರಾವಣನನ್ನು ಕೊಂದನು, ಕೃಷ್ಣ ಕಂಸನನ್ನು ಕೊಂದನು.‌ ರಾಮ, ಕೃಷ್ಣ ಮತ್ತು ಅರ್ಜುನರ ಹಿಂಸಾಚಾರವನ್ನು ತಪ್ಪು ಎಂದು ಬಿಂಬಿಸುವಲ್ಲಿ ಮಹಾತ್ಮ ಎಡವಿದರೆಂಬುದು ನನ್ನ ದೃಢವಾದ ನಂಬಿಕೆ. ಛತ್ರಪತಿ ಶಿವಾಜಿ ನಡೆಸಿದ ದಿಟ್ಟ ಹೋರಾಟದಿಂದಾಗಿಯೇ ಮುಸ್ಲಿಂ ದಬ್ಬಾಳಿಕೆಯನ್ನು ಅಂತಿಮವಾಗಿ ನಾಶಪಡಿಸಲಾಗಿದೆ. ಆಕ್ರಮಣಕಾರಿ ಅಫ್ಜಲ್ ಖಾನ್‌ನನ್ನು ಸೋಲಿಸುವುದು ಮತ್ತು ಕೊಲ್ಲುವುದು ಶಿವಾಜಿಗೆ ಅನಿವಾರ್ಯವಾಗಿತ್ತು. ಇಲ್ಲವಾದರೇ ಶಿವಾಜಿಯೇ ತನ್ನ ಜೀವ ಕಳೆದುಕೊಳ್ಳಬೇಕಾಗಿತ್ತು. ಶಿವಾಜಿಯಂತಹ ಅಪ್ರತಿಮ ವೀರರನ್ನು ಖಂಡಿಸುವಲ್ಲಿ, ರಾಣಾ ಪ್ರತಾಪ್‌ ಮತ್ತು ಗುರು ಗೋವಿಂದ ಸಿಂಗ್ ಅವರು ಹಾಗಾದರೆ ದಾರಿ ದಪ್ಪಿದ ದೇಶ ಪ್ರೇಮಿಗಳೇ? ಗಾಂಧೀಜಿ ಕೇವಲ ತಮ್ಮ ಸ್ವಾಭಿಮಾನವನ್ನು ಬಹಿರಂಗಗೊಳಿಸಿದ್ದಾರೆ. ಅವರು ಹಿಂಸಾತ್ಮಕ ಶಾಂತಿಪ್ರಿಯತೆ ಮತ್ತು ವಿರೋಧಭಾಸ ಮನೋಭಾವದಿಂದ ಸತ್ಯ ಮತ್ತು ಶಾಂತಿಯ ಹೆಸರಿನಲ್ಲಿ ದೇಶದ ಮೇಲೆ ವಿವರಿಸಲಾಗದ ವಿಪತ್ತುಗಳನ್ನು ತಂದರು.

Mahatma Gandhi

ಮೂವತ್ತೆರಡು ವರ್ಷಗಳ ಅವರ ಹೋರಾಟ, ಸಂಚಿತ ಪ್ರಚೋದನೆಯು ಮುಸ್ಲಿಂ ಪರವಾದ ಉಪವಾಸದಲ್ಲಿ ಕೊನೆಗೊಂಡಿತು ಕೊನೆಗೆ ನನಗೆ ಮನವರಿಕೆಯಾಗಿ ಒಂದು ತೀರ್ಮಾನಕ್ಕೆ ಬಂದೆನು. ಆ ತೀರ್ಮಾನವೇ ಗಾಂಧಿಯ ಅಸ್ತಿತ್ವವನ್ನು ಕೂಡಲೇ ಅಂತ್ಯಗೊಳಿಸಬೇಕು ಎಂಬುದಾಗಿತ್ತು. ಗಾಂಧಿ ಒಬ್ಬ ವ್ಯಕ್ತಿನಿಷ್ಠ ಮನಸ್ಥಿತಿಯನ್ನು ಬೆಳೆಸಿಕೊಂಡರು. ಅದರ ಅಡಿಯಲ್ಲಿ ತಪ್ಪು ಸರಿಗಳ ಅಂತಿಮ ತೀರ್ಪುಗಾರರು ಅವರೇ ಆಗಿದ್ದರು. ದೇಶವು ಒಂದು ವೇಳೆ ಅವರ ನಾಯಕತ್ವವನ್ನು ಬಯಸಿದ್ದಿದ್ದರೆ ಅವರ ಅಹಿಂಸೆಯನ್ನು ಅಥವಾ ದೋಷ ರಹಿತತೆಯನ್ನು ಒಪ್ಪಿಕೊಳ್ಳಬೇಕಾಗಿತ್ತು. ಒಂದು ವೇಳೆ ಒಪ್ಪದಿದ್ದರೆ ಅವರು ಕಾಂಗ್ರೆಸ್ ನಿಂದ ದೂರ ನಿಂತು ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದರು. ಗಾಂಧೀಜಿಯವರು ತಮ್ಮದೇ ಆದ ಕೆಲವು ಕಾರಣಗಳಿಂದಾಗಿ ಅವರೇ ನ್ಯಾಯಾಧೀಶ ಮತ್ತು ಅವರೇ ತೀರ್ಪುಗಾರರಾದರು.‌ ಕೆಲವು ಬಾಲಿಷ ಹುಚ್ಚುತನಗಳು ಮತ್ತು ಹಠಮಾರಿತನಗಳಿಂದಾಗಿ ಮತ್ತು ಕೆಲವು ಜೀವನದ ಅತ್ಯಂತ ಕಠಿಣ ಕಠಿಣತೆ ಹಾಗೂ ನಿರಂತರ ಕೆಲಸ ಉದಾತ್ತ ಸ್ವಭಾವ ಎಲ್ಲವೂ ಸೇರಿಕೊಂಡು ಗಾಂಧಿಯನ್ನು ಅಸಾಧಾರಣವಾಗಿ ಸಿಟ್ಟು ಮತ್ತು ಎದುರಿಸಲಾಗದಂತಾಗಿಸಿತ್ತು ಗಾಂಧೀಜಿಯವರು ತಪ್ಪುಗಳ ಮೇಲೆ ತಪ್ಪುಗಳು ವೈಫಲ್ಯದ ನಂತರ ವೈಫಲ್ಯ ವಿಪತ್ತಿನ ನಂತರ ವಿಪತ್ತುಗಳು ಪ್ರಮಾದಗಳ ನಂತರ ಪ್ರಮಾದ ಇವುಗಳೆಲ್ಲವೂ ಸೇರಿ ತಪ್ಪಿತಸ್ಥರಾಗಿದ್ದರು. ಭಾರತದ ರಾಷ್ಟ್ರೀಯ ಭಾಷೆ ಪ್ರಶ್ನೆಯಲ್ಲಿಯೂ ಕೂಡ ಗಾಂಧಿಯವರು ಮುಸ್ಲಿಂ ಪರವಾದ ನೀತಿಯು ಸ್ಪಷ್ಟವಾಗಿ ಕಾಣುತ್ತಿತ್ತು. ಮುಸಲ್ಮಾನರನ್ನು ಮೆಚ್ಚಿಸುವವರ ಬಯಕೆ ಹಿಂದುಸ್ತಾನಿ ಮಾತ್ರವೇ ರಾಷ್ಟ್ರೀಯ ಭಾಷೆ ಆಗಬೇಕೆಂದು ಒತ್ತಾಯಿಸಿದರು. ಅವರ ಕುರುಡು ಅನುಯಾಯಿಗಳು ಸಹಜವಾಗಿಯೇ ಬೆಂಬಲಿಸಿದರು ಅವರ ಎಲ್ಲ ಈ ಪ್ರಯೋಗಗಳು ಕೂಡ ಹಿಂದುಗಳ ವೆಚ್ಚದಲ್ಲಿತ್ತು.

1946 ಆಗಸ್ಟ್ ನಿಂದ ಮುಸ್ಲಿಂ ಲೀಗ್ ನ ತಂಡಗಳು ಅಥವಾ ಖಾಸಗಿ ಸೇನೆಗಳು ಹಿಂದುಗಳ ಹತ್ಯಾಕಾಂಡವನ್ನು ಈಗಾಗಲೇ ಪ್ರಾರಂಭಿಸಿದ್ದವು. ಹಿಂದುಗಳ ಕೆಲವು ಪ್ರತಿಕಾರದಿಂದ ಹಿಂದು ರಕ್ತ ಬಂಗಾಳದಿಂದ ಕರಾಚಿಗೆ ಸರಿಯಲು ಪ್ರಾರಂಭಿಸಿತು. ತನ್ನ ರಾಷ್ಟ್ರೀಯತೆ ಮತ್ತು ಸಮಾಜವಾದದ ಬಗ್ಗೆ ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತ ಕಾಂಗ್ರೆಸ್ ಪಾಕಿಸ್ತಾನವನ್ನು ರಹಸ್ಯವಾಗಿ ಒಪ್ಪಿಕೊಂಡು ಜಿನ್ನಾಗೆ ಹೀನಾಯವಾಗಿ ಶರಣಾಯ್ತು. 1947ರ ಆಗಸ್ಟ್ 15 ರಿಂದ ಭಾರತದ ಭೂಪ್ರದೇಶದ ಮೂರನೇ ಒಂದು ಭಾಗವು ನಮಗೆ ವಿದೇಶಿ ಭೂಮಿಯಾಗಿ ಪರಿವರ್ತನೆ ಆಯಿತು.

ಹಿಂದೂ ನಿರಾಶ್ರಿತರು ದೆಹಲಿಯಲ್ಲಿ ಮಸೀದಿಗಳನ್ನು ಆಕ್ರಮಿಸಿಕೊಂಡಿರುವ ವಿಷಯ ಕೂಡ ಆಮರಣಾಂತ ಉಪವಾಸವನ್ನು ಮುರಿಯಲು ಗಾಂಧಿ ಅವರ ವಿಧಿಸಿದ ಶರತ್ತುಗಳಲ್ಲಿ ಒಂದಾಗಿತ್ತು. ಆದರೆ ಪಾಕಿಸ್ತಾನದ ಹಿಂದುಗಳು, ಹಿಂಸಾತ್ಮಕ ಧಾಳಿ ಒಳಗಾದಾಗ ಅವರು ಪ್ರತಿಭಟನೆ ಮಾಡುವಾಗ ಒಂದೇ ಒಂದು ಮಾತನ್ನು ಕೂಡ ಹೇಳಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಗಾಂಧೀಜಿಯವರು ತಮ್ಮ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ. ಪಾಕಿಸ್ತಾನದ ಪಿತಾಮಹ ನಿಜವಾಗಿ ನೋಡುವುದಾದರೆ ಜಿನ್ನಾ ಅಲ್ಲ ಗಾಂಧೀಜಿ ಎಂಬುದನ್ನು ಅವರೇ ಸಾಬೀತುಪಡಿಸಿದ್ದಾರೆ.

ಗಾಂಧೀಜಿಯವರ ಅನುಪಸ್ಥಿತಿಯಲ್ಲಿ ಭಾರತೀಯ ರಾಜಕೀಯವಾಗಿಯೂ ಖಂಡಿತವಾಗಿಯೂ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳುತ್ತಿತ್ತು ಹಾಗೂ ಪ್ರತಿಕಾರಕ್ಕೆ ಸಮರ್ಥವು ಆಗಿತ್ತು ಇಂದು ನಾನು ಭಾವಿಸಿದ್ದೆ. ನನ್ನ ನಿರ್ಧಾರಗಳಿಂದ ನಿಸ್ಸಂದೇಹವಾಗಿ ನನ್ನ ಭವಿಷ್ಯ ಹಾಳಾಗುತ್ತದೆ. ಆದರೆ ರಾಷ್ಟ್ರವು ಪಾಕಿಸ್ತಾನದ ಆಕ್ರಮಣದಿಂದ ರಕ್ಷಿಸಲ್ಪಡುತ್ತದೆ ಉತ್ತಮ ರಾಷ್ಟ್ರಕ್ಕೆ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವೆಂದು ನಾನು ಪರಿಗಣಿಸುವ ಕಾರಣದಿಂದಾಗಿ ಇದರ ಬಗ್ಗೆ ಸಂಪೂರ್ಣವಾಗಿ ಆಲೋಚಿಸಿದ ನಂತರವೇ ಈ ವಿಷಯದ ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡೆ. ಹಾಗೂ ಅದರ ಬಗ್ಗೆ ನಾನು ಯಾರೊಂದಿಗೂ ಮಾತನಾಡಲಿಲ್ಲ. ಸಂಪೂರ್ಣವಾಗಿ ಧೈರ್ಯ ತೆಗೆದುಕೊಂಡ ಮೇಲೆ 1948ರ ಜನವರಿ 30ರಂದು ಬಿರ್ಲಾ ಹೌಸ್ ನ ಪ್ರಾರ್ಥನಾ ಮೈದಾನದಲ್ಲಿ ಗಾಂಧೀಜಿ ಮೇಲೆ ಗುಂಡು ಹಾರಿಸಿದೆ. ವ್ಯಕ್ತಿಯ ಕೆಲವು ನೀತಿ ಮತ್ತು ಕ್ರಮಗಳು ಲಕ್ಷಾಂತರ ಹಿಂದುಗಳಿಗೆ ವಿನಾಶ ಮತ್ತು ವಿನಾಶವನ್ನು ತಂದಂತಹ ವ್ಯಕ್ತಿಯ ಮೇಲೆ ನಾನು ಗುಂಡುಗಳನ್ನು ಆರಿಸಿದ್ದೇನೆ ಎಂದು ಹೇಳುತ್ತೇನೆ. ಅಂತಹ ಅಪರಾಧಿಯನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಕಾನೂನು ಯಂತ್ರಗಳಿಲ್ಲ ಅಥವಾ ಯಾವುದೇ ಕಾನೂನುಗಳಿಲ್ಲ. ಆ ಕಾರಣಗಳಿಂದಾಗಿಯೇ ನಾನು ವಿಕ್ರಮಗಳನ್ನು ಕೈಗೊಳ್ಳಬೇಕಾಯಿತು. ಮುಸ್ಲಿಮರಿಗೆ ಅನಾಯಾಸವಾಗಿ ಅನುಕೂಲಕರವಾಗಿರುವ ಅವರ ನೀತಿಗಳಿಂದಾಗಿ ಈಗಿನ ಸರ್ಕಾರದ ಬಗ್ಗೆ ನನಗೆ ಗೌರವವಿರಲಿಲ್ಲ ಅದೇ ಸಮಯದಲ್ಲಿ ಈ ಸಂಪೂರ್ಣ ನೀತಿಗಳು ಗಾಂಧಿಯವರ ಉಪಸ್ಥಿತಿಯಿಂದಾಗಿದ್ದು ಎಂಬುದನ್ನು ಸ್ಪಷ್ಟವಾಗಿ ನೋಡಿದೆ. ಪಾಕಿಸ್ತಾನದಂತಹ ರಾಷ್ಟ್ರವನ್ನು ಸ್ಥಾಪಿಸುವಲ್ಲಿ ನೆಹರು ಅವರ ಪಾತ್ರ ಪ್ರಮುಖವಾಗಿತ್ತು. ಆದರೆ ಮುಸ್ಲಿಮರ ಕಡೆಗಿನ ಗಾಂಧಿಯವರ ನಿರಂತರವಾದ ತುಷ್ಟಿಕರಣದ ನೀತಿಯಿಂದಾಗಿ ಅವರ ಕೆಲಸ ಸುಲಭವಾಗಿತ್ತು. ಹಾಗಾಗಿ ನಾನು ಮಾಡಿದ ಕೆಲಸದ ಬಗ್ಗೆ ನಾನು ಯಾವುದೇ ಕರುಣೆಯನ್ನು ತೋರಿಸಲು ಬಯಸುವುದಿಲ್ಲ, ಹಾಗೂ ನನಗೆ ಯಾವುದೇ ಪಶ್ಚತ್ತಾಪಗಳಿಲ್ಲ.
– ನಾಥೂರಾಂ ಗೋಡ್ಸೆ.

ಹೀಗೆ ಥ್ರೆಡ್ ಕೊನೆಗೊಳ್ಳುತ್ತದೆ. ಥ್ರೆಡ್ ಕೊನೆಯಲ್ಲಿ ಸ್ಟಾರ್ ಬಾಯ್ ತರುಣ್ ಸ್ಪಷ್ಟನೇ ನೀಡಿದ್ದು ನಾನು ಯಾಕೆ ಗಾಂಧಿಯನ್ನು ಹತ್ಯೆ ಮಾಡಿದ ಸಾಲುಗಳೇ ಹೊರತು ನಾನು ಗಾಂಧಿಯ ಕೊಲೆಯನ್ನು ಅನುಮೋದಿಸುವುದಿಲ್ಲ ಹಾಗೂ ಇವು ನನ್ನ ಸಾಲುಗಳಲ್ಲ‌ ಎಂಬುದಾಗಿಯೂ ಬರೆದು ಕೊಂಡಿದ್ದಾರೆ.

You might also like
Leave A Reply

Your email address will not be published.