ಬೊಜ್ಜು ಕರಗಿಸದಿದ್ದರೆ ಕಠಿಣ ಕ್ರಮ – ಭಾರತೀಯ ಸೇನೆಯ ಹೊಸ ನಿಯಮ

ನಮಲ್ಲಿ ಅನೇಕರು ಬಹಳ ಬೇಗ ದಪ್ಪಗಾಗುತ್ತಾರೆ. ಆದರೆ ಅದೇ ಬೊಜ್ಜನ್ನ ಕರಗಿಸುವುದಿದೆಯಲ್ಲ, ಯಬ್ಬೋ ಯಮಯಾತ್ರೆ. ಹೊಟ್ಟೆಯ ಸುತ್ತ ಸಂಗ್ರಹವಾಗುವ ಕೊಬ್ಬು ಬರೀ ಸೌಂದರ್ಯಕ್ಕೆ ಮಾತ್ರ ಅಡ್ಡಿಯಲ್ಲ. ಬದಲಾಗಿ ಆರೋಗ್ಯದ ಮೇಲೂ ಅಂದರೆ ಅಧಿಕ ರಕ್ತದ ಸಕ್ಕರೆ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳಂತಹ ಕೆಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತಿರುವುದರಿಂದ ಭಾರತೀಯ ಸೇನೆಯು ಹೊಸ ನೀತಿಯೊಂದನ್ನು ಜಾರಿ ಮಾಡಿದೆ. ಏನದು ನೀತಿ?

ಭಾರತೀಯ ಸೇನೆಯ ಅಧಿಕಾರಿಗಳಲ್ಲಿ ದೈಹಿಕ ಗುಣಮಟ್ಟ ಕುಸಿಯುತ್ತಿರುವುದು ಮತ್ತು ಜೀವನ ಶೈಲಿಯಿಂದಾಗಿ ಬೊಜ್ಜು ಮತ್ತಿತರ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡುಬರುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸೇನೆಯು ಅತಿಕಾಯ (ಬೊಜ್ಜು) ಹೊಂದಿರುವ ಸೇನಾಧಿಕಾರಿಗಳು 30 ದಿನಗಳೊಳಗಾಗಿ ಬೊಜ್ಜು ಇಳಿಸಿ ಕೊಳ್ಳದಿದ್ದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ.

Indian Army

ಸೇನಾಧಿಕಾರಿಗಳಿಗೆ ಭಾರತೀಯ ಸೇನೆ ತಂದಿರುವ ಹೊಸ ನೀತಿ ಅನುಷ್ಠಾನಗಳೇನು?

1. ಪ್ರಸ್ತುತ ಇರುವಂಥ ದೈಹಿಕ ಫಿಟ್ನೆಸ್ ಪರೀಕ್ಷೆಗಳಿಗೆ ಮತ್ತಷ್ಟು ಪರೀಕ್ಷೆಗಳನ್ನು ಸೇರ್ಪಡೆಗೊಳಿಸಲಾಗಿದೆ.
2. ಸೇನೆಯಲ್ಲಿರುವ ಪ್ರತಿಯೊಬ್ಬರೂ ಸೇನಾ ದೈಹಿಕ ಕ್ಷಮತೆ ಮೌಲ್ಯಮಾಪನಾ ಕಾರ್ಡ್(ಎಪಿಎಸಿ) ಹೊಂದಿರಬೇಕಾದ್ದನ್ನು ಕಡ್ಡಾಯಗೊಳಿಸಲಾಗಿದೆ.
3. ಈವರೆಗೆ ತ್ರೈಮಾಸಿಕ ದೈಹಿಕ ಪರೀಕ್ಷೆಗಳನ್ನು ಕಮಾಂಡಿಂಗ್ ಅಧಿಕಾರಿ ನಡೆಸುತ್ತಿದ್ದರು. ಇನ್ನು ಮುಂದೆ ಇದನ್ನು ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿ ನಡೆಸಲಿದ್ದಾರೆ.
4. ಪ್ರಸ್ತುತ ಇರುವ ತ್ರೈಮಾಸಿಕ, ಬಿಪಿಇಟಿ ಮತ್ತು ಪಿಪಿಟಿ ಪರೀಕ್ಷೆಯ ಜೊತೆಗೆ ಪ್ರತಿ 6 ತಿಂಗಳಿಗೊಮ್ಮೆ 10ಕಿ.ಮೀ. ವೇಗದ ನಡಿಗೆ, 10ಕಿ.ಮೀ. ರೂಟ್ ಮಾರ್ಚ್ ಅನ್ನು ಸೇರ್ಪಡೆ ಗೊಳಿಸಲಾಗಿದೆ. ಪರೀಕ್ಷೆಯ ಫಲಿತಾಂಶವನ್ನು 24 ಗಂಟೆಗಳೊಳಗಾಗಿ ಪ್ರಕಟಿಸಬೇಕು ಎಂದೂ ಸೂಚಿಸಲಾಗಿದೆ.

ಪರೀಕ್ಷಾ ಪ್ರಕ್ರಿಯೆಯಲ್ಲಿ ಸಮಾನತೆ ತರುವ ಉದ್ದೇಶದಿಂದ ಹೊಸ ನೀತಿ ಅನುಷ್ಠಾನ ಮಾಡಲಾಗಿದೆ ಎಂದು ಎಲ್ಲ ಕಮಾಂಡ್‌ಗಳಿಗೂ ಪತ್ರ ರವಾನಿಸಲಾಗಿದೆ.

You might also like
Leave A Reply

Your email address will not be published.