ಇಂಡಿಯಾ ಮೈತ್ರಿಕೂಟಕ್ಕೆ ಶಾಕ್- ಬಿಜೆಪಿ ರಾಕ್

ಕಾಂಗ್ರೆಸ್ ಬೆಂಬಲಿತ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾ‌ರ್ ಅವರನ್ನು ಬಿಜೆಪಿಯ ಕೌನ್ಸಿಲರ್ ಮನೋಜ್ ಸೋಂಕರ್ ಸೋಲಿಸುವ ಮೂಲಕ ಚಂಡೀಗಢ ಮೇಯರ್ ಆಗಿ ಇಂದು ಆಯ್ಕೆಯಾಗಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿದೆ.

BJP councilor Manoj Sonkar

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ತವರು ಕ್ಷೇತ್ರಕ್ಕೆ ಬರುತ್ತಿದ್ದಂತೆ, ಈ ಬೆಳವಣಿಗೆ ಕಂಡುಬಂದಿದೆ. 35 ಸದಸ್ಯ ಬಲದ ಮುನ್ಸಿಪಲ್ ಕಾರ್ಪೊರೇಷನ್ ಹೌಸ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ಎರಡು ಸೇರಿ ಒಟ್ಟು 20 ಮತಗಳನ್ನು ಹೊಂದಿತ್ತು. ಬಿಜೆಪಿ ಸಂಸದೆ ಕಿರಣ್ ಖೇರ್ ಸಹಿತ 16 ಸದಸ್ಯರ ಮತಗಳನ್ನು ಹೊಂದಿತ್ತು. ಎಂಟು ಮತಗಳು ಅಸಿಂಧುವಾಗಿವೆ.

ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ (MC) ಸೆಕ್ಟ‌ರ್ 17 ರ ಅಸೆಂಬ್ಲಿ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಅರೆ ಸೇನಾ ಪಡೆಗಳ ಜತೆಗೆ ಸುಮಾರು 700 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಎಂಟು ಮತಗಳು ಅಸಿಂಧು ಎಂದು ಘೋಷಿಸಿದ್ದರಿಂದ, ಮತ ಎಣಿಕೆ ವೇಳೆ ಚಲಾವಣೆಯಾದ ಮತಗಳ ಮೇಲೆ ಟಿಕ್ ಮಾರ್ಕ್ ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಅನಿಲ್ ಮಸಿಹ್ ಅವರು ಆರೋಪಿಸಿದ್ದು, ಪ್ರತಿಭಟನೆಯನ್ನು ನಡೆಸಿದರು.

You might also like
Leave A Reply

Your email address will not be published.