ಕೇರಳ – ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷನ ಹತ್ಯೆಯ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ

ಡಿಸೆಂಬರ್ 21, 2021 ರಂದು ಕೇರಳದಲ್ಲಿ ನಡೆದ ಬಿಜೆಪಿ ಓಬಿಸಿ ರಾಜ್ಯ ಮೋರ್ಚಾದ ಅಧ್ಯಕ್ಷ ರಂಜಿತ್ ಶ್ರೀನಿವಾಸನ್ ಅವರ ಭೀಕರ ಕೊಲೆಯ ಹದಿನೈದು ಜನ ಆರೋಪಿಗಳನ್ನೂ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದೆ.

ಕೇರಳದ ಅಲಪ್ಪುಳದಲ್ಲಿ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರ ಕೊಲೆಗೆ ಸಂಬಂಧಿಸಿದಂತೆ SDPI ಮತ್ತು PFI ನ ಕಾರ್ಯಕರ್ತರನ್ನು ದೋಷಿಗಳು ಎಂದು ಹೆಚ್ಚುವರಿ ನ್ಯಾಯಾಲಯವು ತೀರ್ಪು ನೀಡಿದೆ.

ಹದಿನೈದು ಜನ ಅಪರಾಧಿಗಳಿಗೂ ಮರಣ ದಂಡನೆಯನ್ನು ವಿಧಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.

BJP leader Ranjith Srinivasan

ಇನ್ನು ಕೊಲೆಯಾದ ರಂಜಿತ್ ಶ್ರೀನಿವಾಸನ್ ಅವರನ್ನು ಅವರದೇ ಮನೆಯಲ್ಲಿ ಕುಟುಂಬಸ್ಥರ ಎದುರು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. PFI ಹಾಗೂ SDPI ಕಾರ್ಯಕರ್ತರ ಮೇಲೆ ಹೆಂಡತಿ ಮಕ್ಕಳ ಎದುರು ಅವರನ್ನು ಹತ್ಯೆ ಮಾಡಿದ ಪ್ರಕರಣ ದಾಖಲಾಗಿತ್ತು.

You might also like
Leave A Reply

Your email address will not be published.