ಪಾಕ್ ಮೀನುಗಾರರನ್ನು ಕಾಪಾಡಿದ ಭಾರತದ ನೌಕಾಪಡೆ – ಈ ವರದಿ ಓದಿ

ಕೇರಳದ ಕೊಚ್ಚಿ ಕರಾವಳಿಯಿಂದ ಸುಮಾರು 800 ಮೈಲುಗಳಷ್ಟು ದೂರದಲ್ಲಿ 11 ಜನ ಸೋಮಾಲಿಯ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಪಾಕಿಸ್ತಾನದ ಮೀನುಗಾರಿಕಾ ಹಡಗು ಅಲ್ ನಯೀಮಿ‌ ಮತ್ತು ಹಡಗಿನಲ್ಲಿದ್ದ ಎಲ್ಲಾ 19 ಜನ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ INS ಸುಮಿತ್ರಾ ಯಶಸ್ವಿಯಾಗಿ ರಕ್ಷಣೆಮಾಡಿದೆ.

ಕಡಲುಗಳ್ಳತನ ವಿರೋಧಿ ಕಾರ್ಯಾಚರಣೆಗೆಂದೇ ನೇಮಕವಾದ INS ಸುಮಿತ್ರಾ ಪಾಕಿಸ್ತಾನದ ಹಡಗನ್ನು ರಕ್ಷಿಸಿದ 36 ಗಂಟೆಗಳ ಒಳಗಾಗಿ ಒಟ್ಟು 36 ಸಿಬ್ಬಂದಿಗಳನ್ನು ಹೊಂದಿದ್ದ (17 ಇರಾನ್‌ಮತ್ತು 19 ಪಾಕಿಸ್ತಾನಿ ಪ್ರಜೆಗಳು) ಇರಾನಿನ ಮೀನುಗಾರಿಕಾ ಹಡಗು FV ಇಮಾನ್ ಅನ್ನು ರಕ್ಷಣೆ ಮಾಡಿದೆ.

Indian Navy

ಇನ್ನು, ಕೆಲ ದಿನಗಳ ಹಿಂದೆ ಭಾರತದಿಂದ ಯುನೈಟೆಡ್ ಕಿಂಗ್‌ಡಮ್ ‌ಗೆ ರಷ್ಯಾದ ತೈಲ ಹೊತ್ತು ಸಾಗುತ್ತಿದ್ದ ಮರ್ಲಿನ್ ಲುವಾಂಡಾ ಹಡಗಿನ ಮೇಲೆ ಇರಾನ್‌ನ ಸಹಕಾರ ಇರುವ ಹೌಥಿ ರೆಬೆಲ್‌ಗಳು ಆಕ್ರಮಣ ಮಾಡಿದ್ದನ್ನು INS ವಿಶಾಖಪಟ್ಟಣಂ ಹೌಥಿಗಳನ್ನು ಸದೆಬಡಿಯುವ ಮೂಲಕ ರಕ್ಷಣೆ ಮಾಡಿತ್ತು. ‌

ಇದು ಭಾರತೀಯ ನೌಕಾಪಡೆಯು ನಡೆಸುತ್ತಿರುವ ಒಂದು ವಾರದಲ್ಲೇ ಮೂರನೇ ಯಶಸ್ವಿ ಕಾರ್ಯಾಚರಣೆಯಾಗಿದೆ‌.

You might also like
Leave A Reply

Your email address will not be published.