ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಸಿರು ಬಾವುಟ ಹಾರಾಟ – ಏನಿದು ವಿವಾದ?

ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿರುವ ಬಿಬಿಎಂಪಿ ಸ್ತಂಭದಲ್ಲಿ ಹಸಿರು ಬಾವುಟ ಹಾರಾಟ ಮಾಡಲಾಗಿರುವ ಫೋಟೋವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ‌ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಶಿವಾಜಿನಗರ ಪೊಲೀಸರು ಹಸಿರು ಬಾವುಟ ತೆಗೆಸಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯತ್ನಾಳ್ ಅವರು ಶಿವಾಜಿನಗರದಲ್ಲಿ ಹಾರಿಸಿದ ಹಸಿರು ಬಾವುಟದ ಫೋಟೋವನ್ನು ಹಂಚಿಕೊಂಡ ಕೆಲವೇ ಕ್ಷಣದಲ್ಲೇ ರಾಮಚಂದ್ರ ಯರ್ಗಾಲ್ ಎಂಬವರು ತಮ್ಮ ಎಕ್ಸ್​ ಖಾತೆಯಲ್ಲಿ ಇದೇ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದೇ ಪೋಸ್ಟ್​ ಅನ್ನು ಯತ್ನಾಳ್ ಅವರು ರೀ ಟ್ವೀಟ್ ಮಾಡುವ ಮೂಲಕ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಬೆಂಗಳೂರು ಪೂರ್ವ ಡಿಸಿಪಿ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು.

ಟ್ವಿಟ್ ಅಲ್ಲಿ ಏನಿದೆ?

ಮಾನ್ಯ ಕಮಿಷನರ್ ಅವರೇ, ಈ ರೀತಿ ಶತ್ರು ದೇಶದ ಬಣ್ಣವನ್ನು ಹೋಲುವ ಹಸಿರು ಧ್ವಜವನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾರಿಸುವುದು ನಮ್ಮ ಧ್ವಜಸಂಹಿತೆಗೆ ವಿರುದ್ದವಾದದ್ದಲ್ಲವೇ? ಈ ಕೂಡಲೇ, ಇದನ್ನು ತೆಗೆದು ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ. ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಲ್ಲ ಎಂದು ಯತ್ನಾಳ್ ಬರೆದುಕೊಂಡಿದ್ದರು.

ಯತ್ನಾಳ್ ಅವರ ಟ್ವೀಟ್​ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಿವಾಜಿನಗರ ಪೊಲೀಸರು, ಹಸಿರು ಬಾವುಟ ತೆಗೆಸಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಬಿಎಂಪಿ ಸ್ತಂಭದಲ್ಲಿ ಹಸಿರು ಬಾವುಟ ಹಾರಾಟ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಹಿಂದೂ ಸಂಘಟನೆ ವಿರೋಧ ವ್ಯಕ್ತಪಡಿಸಿ, ಬಾವುಟ ತೆರವು ಮಾಡಲು ಆಗ್ರಹಿಸಿತ್ತು.

You might also like
Leave A Reply

Your email address will not be published.