ಶಿಲ್ಪಿ ಗಣೇಶ್ ಭಟ್ ಅವರು ಕೆತ್ತಿದ ಬಾಲ‌ರಾಮನ ವಿಗ್ರಹ ನಮಗೆ ಕೊಡಿ – ಶ್ರೀ ರಾಮಚಂದ್ರಪುರ ಮಠದ ಬೇಡಿಕೆ

ಅಯೋಧ್ಯೆ ರಾಮ ಮಂದಿರದಲ್ಲಿ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ‌ಬಾಲರಾಮ ಪ್ರತಿಷ್ಠಾಪನೆಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.‌ ಹನುಮನ ನಾಡಿಗೂ ರಾಮನ ಬೀಡಿಗೂ ನಂಟು ಎಂದೂ ಮಾಸದು ಎಂಬುದು ಮತ್ತೆ ಮತ್ತೆ‌ ನಿಜವಾದಂತಿದೆ.‌ ಈಗ ಕರ್ನಾಟಕದವರೇ ಆದ ಇನ್ನೋರ್ವ ಶಿಲ್ಪಿ ಗಣೇಶ್ ಭಟ್ ಅವರು ಕೆತ್ತಿದ ಬಾಲ‌ರಾಮನ ವಿಗ್ರಹವನ್ನು ತಮಗೆ ಕೊಡುವಂತೆ ಶ್ರೀ ರಾಮಚಂದ್ರಪುರ ಮಠದಿಂದ ಅಧಿಕೃತವಾಗಿ ಬೇಡಿಕೆ ಅಯೋಧ್ಯೆಗೆ ಹೋಗಿದೆ.

ಗರ್ಭಗುಡಿಯಲ್ಲಿ ಸ್ಥಾಪನೆಯಾಗಲು ಆಯ್ಕೆಯಾದ ಕೊನೆಯ ಮೂರು ಮೂರ್ತಿಗಳಲ್ಲಿ ಹೊನ್ನಾವರದ ಗಣೇಶ್ ಭಟ್ ಕೆತ್ತನೆಯ ವಿಗ್ರಹವೂ ಒಂದಾಗಿತ್ತು. ‌ಈಗ ಆ ವಿಗ್ರಹ ಅಲ್ಲಿ ಸ್ಥಾಪನೆಯಾಗಿಲ್ಲವಾದ್ದರಿಂದ ಶ್ರೀ ರಾಮಚಂದ್ರಪುರ ಮಠದಿಂದ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ಗೆ ಅಧಿಕೃತ ಬೇಡಿಕೆ ಹೋಗಿದೆ‌.‌

Give us the idol of Balarama sculpted by Sculptor Ganesh Bhatt

ಅಯೋಧ್ಯೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ‌ ಭಾಗವಹಿಸಿದ ಶ್ರೀ ರಾಮಚಂದ್ರಪುರ ಮಠದ‌ ಪೀಠಾಧ್ಯಕ್ಷರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಠದ ಶಿಷ್ಯರೂ ಆದ ಗಣೇಶ್ ಭಟ್ ಅವರ ಕೆತ್ತನೆಯ ವಿಗ್ರಹವನ್ನು ನೋಡಿ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದರೆಂದು ತಿಳಿದು‌ಬಂದಿದೆ. ಒಂದು ವೇಳೆ ಅಯೋಧ್ಯೆ ಟ್ರಸ್ಟ್ ಒಪ್ಪಿದ್ದೇ ಆದಲ್ಲಿ ರಾಜ್ಯಕ್ಕೆ ತಂದು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ನೆರವೇರಿಸಿ ನಿತ್ಯ ಪೂಜೆಗೆ ಒಳಪಡಿಸುವ ಇರಾದೆ ಶ್ರೀ ಮಠದ್ದಾಗಿದೆ.

ಮಠದ ಹಿನ್ನೆಲೆ ನೋಡುವುದಾದರೆ ಸುಮಾರು 1200 ವರ್ಷಗಳ ಹಿಂದೆ ಶಂಕರಾಚಾರ್ಯರರಿಂದ ಸ್ಥಾಪಿತಗೊಂಡ ಈ ಮಠದಲ್ಲಿ ಶ್ರೀ ರಾಮನೇ ಪ್ರಾಣದೇವರು ಅಲ್ಲದೇ ಈ ವಿಗ್ರಹವು ಅಗಸ್ತ್ಯ ಮುನಿಗಳಿಂದ ಪೂಜಿತಗೊಂಡದ್ದಾಗಿದೆ.‌ ಹಾಗಾಗಿ ಅಯೋಧ್ಯೆ ಟ್ರಸ್ಟ್ ಏನು ಉತ್ತರಿಸಬಹುದು ಎಂಬುದು ಈಗ ಕುತೂಹಲಕಾರಿಯಾಗಿದೆ‌.

You might also like
Leave A Reply

Your email address will not be published.