ಹೊಟ್ಟೆ ತುಂಬಾ ತಿನ್ನಿ, 50 ಸಾವಿರ ಗೆಲ್ಲಿ – ಆಹಾರ ಪ್ರಿಯರಿಗೊಂದು ಚಾಲೆಂಜ್

ಆಹಾರ ಪ್ರಿಯರೇ, ನಿಮಗೊಂದು ಓಪನ್ ಚ್ಯಾಲೆಂಜ್! ಈ 440 ರೂಪಾಯಿಯುಳ್ಳ ವಿಶೇಷ ಚೀಸ್ ಆಮ್ಲೇಟ್ ಅನ್ನು ಕೇವಲ ಹತ್ತು ನಿಮಿಷದಲ್ಲಿ ಯಾರಾದರೂ ತಿಂದು ಮುಗಿಸಿದ್ರೆ ಅವರಿಗೆ 50 ಸಾವಿರ ರೂಪಾಯಿಯನ್ನ ಬಹುಮಾನವಾಗಿ ನೀಡಲಾಗುತ್ತೆ. ಓ ವಾವ್ಹ್ ಅನ್ಕೊಬೇಡಿ.. ಇಲ್ಲಿವರೆಗೂ ಈ ಚ್ಯಾಲೆಂಜ್ ನ ಯಾರು ಕಂಪ್ಲೀಟ್ ಮಾಡಕ್ಕೆ ಆಗಿಲ್ಲ. ಕಡೆಪಕ್ಷ ನೀವಾದ್ರು ಈ ಚ್ಯಾಲೆಂಜ್ ಅಲ್ಲಿ ಗೆಲ್ತೀರಾ? ನೋಡೋಣ ಬನ್ನಿ..

ಗುರುಗ್ರಾಮದ ಫುಡ್ ಸ್ಟಾಲ್ ಮಾಲೀಕರೊಬ್ಬರು ಜನರಿಗೆ ವಿಚಿತ್ರ ಆಹಾರ ಸವಾಲನ್ನು ನೀಡಿದ್ದು, ತಾವು ತಯಾರಿಸಿದ ವಿಶೇಷ ಚೀಸ್ ಆಮ್ಲೆಟ್ ಅನ್ನು ಯಾರಾದರೂ ಹತ್ತು ನಿಮಿಷಗಳಲ್ಲಿ ತಿಂದು ಮುಗಿಸಿದರೆ, ಅವರಿಗೆ ಐವತ್ತು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುವುದು. ಇದರ ಬೆನ್ನಲ್ಲೇ ಈ ಚಾಲೆಂಜ್ ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ ಯಾರೂ ಕೂಡ ಈ ಚಾಲೆಂಜ್ ಪೂರ್ಣಗೊಳಿಸಿಲ್ಲ. ಇಲ್ಲಿವರೆಗೆ ಯಾರೂ ಅದನ್ನು ಹತ್ತು ನಿಮಿಷಗಳಲ್ಲಿ ಮುಗಿಸಲು ಸಾಧ್ಯವಾಗಿಲ್ಲ, ಆಗೋದು ಇಲ್ಲ ಬಿಡಿ ಎಂದು ಆಮ್ಲೆಟ್ ಮೇಕರ್ ತಿಳಿಸಿದ್ದಾರೆ.

 

View this post on Instagram

 

A post shared by Gaurav Wasan (@youtubeswadofficial)

ಈ ವಿಶೇಷ ಆಮ್ಲೆಟ್ ತಯಾರಿಸೋದು ಹೇಗೆ?

ಈ ಆಮ್ಲೆಟ್ ತಯಾರಿಸಲು 15 ಮೊಟ್ಟೆಗಳನ್ನು ಬಳಸಲಾಗುತ್ತದೆ. ಈ ಮೊಟ್ಟೆಯನ್ನು ಇಡೀ ಅಮುಲ್ ಬಟರ್ ಪ್ಯಾಕೆಟ್ ಹಾಕಿ ಬೇಯಿಸಲಾಗುತ್ತದೆ. ಇದಕ್ಕೆ ಸಾಕಷ್ಟು ಚೀಸ್, ಸಾಸ್ ಮತ್ತು ಅನೇಕ ತರಕಾರಿಗಳನ್ನು ಸೇರಿಸಲಾಗುತ್ತದೆ. ಆಮ್ಲೆಟ್ ಗೆ 04 ಬ್ರೆಡ್ ಗಳನ್ನು ಸಹ ಸೇರಿಸಲಾಗುತ್ತದೆ. ಆಮ್ಲೆಟ್ ಸಿದ್ಧವಾದ ನಂತರ, ಅದರ ಮೇಲೆ ಪನೀರ್ ನ ದೊಡ್ಡ ಸ್ಲೈಸ್ ಗಳನ್ನು ಹಾಕಿ, ಮತ್ತೊಂದು ಪ್ಯಾಕೆಟ್ ಬೆಣ್ಣೆಯನ್ನು ಕರಗಿಸಿ ಅದರ ಮೇಲೆ ಸುರಿಯಲಾಗುತ್ತದೆ. ಈ ರೆಸಿಪಿ ಓದ್ತಿದ್ರೆ ನಿಮ್ ಬಾಯಿ ಚಪ್ಪರಿಸ್ತಿದೆ ಅಲ್ವಾ?

ಇದರ ಬೆಲೆ ಎಷ್ಟು ಗೊತ್ತಾ?

ರಾಜೀವ್ ಆಮ್ಲೆಟ್ ಗುರುಗ್ರಾಮದ ಹುಡಾ ಮಾರುಕಟ್ಟೆಯಲ್ಲಿ ಈ ಚಾಲೆಂಜನ್ನು ಪ್ರಾರಂಭಿಸಿದೆ. ಅದರ ಬೆಲೆಯನ್ನು 440 ರೂಪಾಯಿ ಮಾತ್ರ. ಇಷ್ಟು ಕಡಿಮೆ ಬಜೆಟ್ ನ ಈ ವಿಶೇಷ ಆಮ್ಲೆಟ್ ತಿಂದ್ರೆ 50 ಸಾವಿರ ರೂಪಾಯಿ ಸಿಗುತ್ತೆ ಅಂದ್ರೆ ಬಾಯಿ ಬಾಯಿ ಬಿಟ್ಕೊಂಡು ಯೋಚಿಸ್ತಿದ್ದಿರಲ್ಲ.

challenge for food lovers

ಈ ಆಮ್ಲೇಟ್ ತಿಂದ್ರೆ 5 ದಿನ ಹಸಿವೆ ಆಗೋಲ್ಲ:

ಸಾಮಾಜಿಕ ಜಾಲತಾಣಗಳಲ್ಲಿ ಈ ಆಮ್ಲೆಟ್ ತಯಾರಿಕೆಯನ್ನು ನೋಡಿದ ನಂತರ ಎಲ್ಲರೂ ಶಾಕ್ ಆಗಿದ್ದಾರೆ. ಈ ವಿಶೇಷ ಆಮ್ಲೆಟ್ ಅನ್ನು ಸೇವಿಸಿದ ನಂತರ ಮುಂದಿನ ಐದು ದಿನಗಳವರೆಗೆ ನಿಮಗೆ ಹಸಿವಾಗುವುದಿಲ್ಲ ಎಂದು ಖುದ್ದಾಗಿ ಆಮ್ಲೇಟ್ ತಯಾರಕರೇ ಹೇಳಿದ್ದಾರೆ.

ಇನ್ನು ಈ ಚಾಲೆಂಜ್ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಂತು ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಂತರ, ಜನರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಐವತ್ತು ಹೃದಯಾಘಾತಗಳು ಸಹ ಈ ಆಮ್ಲೆಟ್ ನೊಂದಿಗೆ ಉಚಿತವಾಗಿ ಸಿಗಬಹುದು ಎಂದಿದ್ದಾರೆ ಒಬ್ಬರು. ಮತ್ತೊಬ್ಬರು ಇಂತಹ ಅನಾರೋಗ್ಯಕರ ಆಹಾರವನ್ನು ಉತ್ತೇಜಿಸಬಾರದು, ಇದರಿಂದ 50 ಸಾವಿರ ಗೆದ್ದರೆ ಅದನ್ನು ಆಸ್ಪತ್ರೆಗೆ ಕೊಡಬೇಕಾಗುತ್ತದೆ ಎಂದು ಕೆಲವರು ಟೀಕಿಸಿದ್ದಾರೆ. ನಿಮ್ಮ ಅಭಿಪ್ರಾಯವೇನು? ಎಂಬುದನ್ನು ಕಮೆಂಟ್ ಮಾಡಿ.

You might also like
Leave A Reply

Your email address will not be published.