ಮುಖದ ಸೌಂಧರ್ಯಕ್ಕೆ ಸುಲಭ ವಿಧಾನ – ಈ ಟಿಪ್ಸ್ ಪಡೆಯಿರಿ

ಬೇಸಿಗೆಯಲ್ಲಿ ಹಾಕಿದ ಮೇಕಪ್ ನಿಲ್ಲಲ್ವಾ? ಮೊಡವೆ, ರಾಶಸ್, ಟ್ಯಾನಿಂಗ್ ನಂತಹ ಸಮಸ್ಯೆಗಳಿಂದ ಸಾಕಾಗಿದ್ಯ? ನಿಮ್ಮ ಸೌಂದರ್ಯವನ್ನ ಕಾಪಾಡಲು ಪಾರ್ಲರ್ ಗೆ ಸಾವಿರಾರು ರೂಪಾಯಿಗಟ್ಟಲೆ ವ್ಯಯ ಮಾಡ್ತಿದ್ದಿರ? ನಿಮ್ ಮುಖದ ಕಾಂತಿ ಹೆಚ್ಚಿಸಲು ನಾವಿಲ್ಲಿ ಸಿಂಪಲ್ ಅಂಡ್ ಎಫೆಕ್ಟಿವ್ ಆಗಿರೋ ಫೇಸ್’ಪ್ಯಾಕ್ ಹೇಳ್ತಿವಿ. ಸಾವಿರಾರು ರೂಪಾಯಿಗಟ್ಟಲೇ ವ್ಯಯ ಮಾಡೋ ಬದ್ಲು ಈ ಸಿಂಪಲ್ ಟ್ರಿಕ್ಸ್ ನ ಜಸ್ಟ್ ಫಾಲೋ ಮಾಡಿ.

ಯಾವುದ್ದಪ್ಪ ಆ ಫೇಸ್’ಪ್ಯಾಕ್?

ಇದು ರವೆ ಮತ್ತು ಕಾಫಿಪುಡಿಯ ಫೇಸ್‌ಪ್ಯಾಕ್. ಈ ಫೇಸ್‌ಪ್ಯಾಕ್ ಎಫ್ಫೋಲಿಯೇಶನ್, ಹೊಳಪು ಮತ್ತು ಸುಧಾರಿತ ರಕ್ತ ಪರಿಚಲನೆಯಂತಹ ಪ್ರಯೋಜನಗಳನ್ನು ನೀಡುತ್ತದೆ. ರವೆ ಮತ್ತು ಕಾಫಿ ಫೇಸ್ ಪ್ಯಾಕ್ ಅನ್ನು ಹೇಗೆ ತಯಾರಿಸುವುದು ಮತ್ತು ಬಳಸುವುದು ಎಂಬುದರ ಕುರಿತು ಹಂತ-ಹಂತವಾಗಿ ತಿಳಿಸ್ತಾ ಹೋಗ್ತಿವಿ. ನೀವು ಹಾಗೆ ಫಾಲೋ ಮಾಡಿ.

Sesame and Coffee Powder Facepack

ಬೇಕಾಗುವ ಪದಾರ್ಥಗಳು:

• 2 ಚಮಚ ರವೆ
• 1 ಚಮಚ ನುಣ್ಣನೆ ಕಾಫಿಪುಡಿ
• ಸಾಮಾನ್ಯ ಮತ್ತು ಎಣ್ಣೆಯುಕ್ತ ಚರ್ಮವಾದರೆ – 1-2 ಸ್ಪೂನ್ ಮೊಸರು
• ಒಣ ಚರ್ಮವಾದರೆ – 1-2 ಸ್ಪೂನ್ ಹಾಲು
• 1 ಟೀ ಚಮಚ ಜೇನುತುಪ್ಪ (ಐಚ್ಛಿಕ, ಹೆಚ್ಚುವರಿ ತೇವಾಂಶಕ್ಕಾಗಿ)

(ವಿಶೇಷ ಸೂಚನೆ: ಮೇಲೆ ಹೇಳಿರೋದನ್ನೆಲ್ಲ ಮಿಕ್ಸ್ ಮಾಡ್ಬೇಕು ಅಂದ್ರೆ ಮೊದ್ಲು ಒಂದು ಸಣ್ಣ ಬೌಲ್ ತಗೋಬೇಕು)

face pack mixing items

ತಯಾರಿ ವಿಧಾನ:

ಒಂದು ಕೈಯಲ್ಲಿ ಹಾಲು ಮತ್ತೊಂದು ಕೈಯಲ್ಲಿ ಬ್ರೂ ಎಂಬಂತೆ, ಒಂದು ಕೈಯಲ್ಲಿ ಸಣ್ಣ ಬೌಲ್ ತೆಗೆದುಕೊಳ್ಳಿ. 2 ಚಮಚ ರವೆ, 1 ಚಮಚ ನುಣ್ಣನೆಯ ಕಾಫಿಪುಡಿ ಸೇರಿಸಿ. ನಿಮ್ಮ ತ್ವಚೆಗೆ ತಕ್ಕಂತೆ ಮೊಸರು ಅಥವಾ ಹಾಲು ಸೇರಿಸಿ. ಅಂದರೆ, ಸಾಮಾನ್ಯ ಮತ್ತು ಎಣ್ಣೆಯುಕ್ತ ಚರ್ಮಕ್ಕಾಗಿ 1-2 ಚಮಚ ಮೊಸರು, ಒಣ ಚರ್ಮಕ್ಕಾಗಿ 1 ರಿಂದ 2 ಚಮಚ ಹಾಲು ಸೇರಿಸಿ. ಈಗ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ.
ರವೆ ದ್ರವವನ್ನು ಹೀರಿಕೊಳ್ಳಲು ಮತ್ತು ಪೇಸ್ಟ್ ತರಹದ ಸ್ಥಿರತೆಯನ್ನು ಪಡೆಯಲು ಮಿಶ್ರಣವನ್ನು ಕೆಲವು ನಿಮಿಷಗಳ ಕಾಲ ಹಾಗೇ ಬಿಡಿ.

ಹೀಗೆ ಅನ್ವಯಿಸಿ:

ಫೇಸ್ ಪ್ಯಾಕ್ ಅಪ್ಲೆ ಮಾಡುವ ಮುನ್ನ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ನಂತರ
ನಿಮ್ಮ ಬೆರಳುಗಳು ಅಥವಾ ಬ್ರಷ್ ಬಳಸಿ ರವೆ ಮತ್ತು ಕಾಫಿ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ. ಕಣ್ಣಿನ ಸುತ್ತಲು ಹಚ್ಚಬಾರದು.

Facepackವೃತ್ತಾಕಾರದ ಚಲನೆಯಲ್ಲಿ ಫೇಸ್ ಪ್ಯಾಕ್ ಅನ್ನು ಸುಮಾರು 15-20 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ನಂತರ ಒಣಗಲು ಬಿಡಿ. ಅದು ಒಣಗುತ್ತಿದ್ದಂತೆ ನಿಮ್ಮ ಮುಖ ಬಿಗಿಯಲಾರಂಭಿಸುತ್ತದೆ. ಕಂಪ್ಲೀಟ್ ಆಗಿ ಈ ಪ್ಯಾಕ್ ಒಣಗಿದ ನಂತರ ನಿಮ್ಮ ಮುಖವನ್ನು ನೀರಿನಿಂದ ತೇವಗೊಳಿಸಿ ಮತ್ತು ಚೆನ್ನಾಗಿ ತೊಳೆಯುವ ಮೊದಲು ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಸ್ಕ್ರಬ್ ಮಾಡಿ. ಸ್ವಚ್ಛವಾದ ಟವೆಲ್ ನಿಂದ ನಿಮ್ಮ ಮುಖವನ್ನು ಒಣಗಿಸಿ.
ಮಾಯಶ್ಚರೈಸರ್ ಹಚ್ಚಿಕೊಳ್ಳಿ.

You might also like
Leave A Reply

Your email address will not be published.