ಬಜೆಟ್ ಮಂಡನೆಗೂ ಮುಂಚೆಯೇ ಬಜೆಟ್ ಗಾತ್ರ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಫೆಬ್ರವರಿ 16 ರಂದು ಬಜೆಟ್ (Karnataka Budget) ಮಂಡನೆ ಮಾಡುತ್ತೇನೆ ಎಂದು ಈ ಮೊದಲೇ ಹೇಳಿದ್ದರು. ಇದೀಗ, ಕಾರ್ಯಕ್ರಮವೊಂದರಲ್ಲಿ ಬಜೆಟ್ ಗಾತ್ರವನ್ನು ಬಹಿರಂಗಗೊಳಿಸಿದ್ದಾರೆ.

ತುಮಕೂರಿನ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಬಾರಿ 3.27 ಲಕ್ಷ ಕೋಟಿ ರೂ. ಬಜೆಟ್ (Karnataka Budget) ಮಂಡನೆ ಮಾಡಿದ್ದೆ, ಈ ವರ್ಷ 2024-25ನೇ ಸಾಲಿನಲ್ಲಿ 3.80 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

siddaramaiah

ಇಷ್ಟೊಂದು ದೊಡ್ಡ ಗಾತ್ರದ ಬಜೆಟ್ ಮಂಡನೆ ಮಾಡುತ್ತಿದ್ದೇನೆ ಎಂದರೆ ರಾಜ್ಯದ ಪ್ರಗತಿಯಾಗುತ್ತಿದೆ, ಅಭಿವೃದ್ಧಿಯಾಗುತ್ತಿದೆ ಎಂದೇ ಅರ್ಥ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಳವಾಗಿದೆ. ಈ ಅಭಿವೃದ್ಧಿಗೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ, ಅನ್ನಭಾಗ್ಯ ಯೋಜನೆಗಳು ದೊಡ್ಡ ಪ್ರಮಾಣದ ಕೊಡುಗೆ ನೀಡಿವೆ. ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಳವಾಗಿದೆ ಎಂದು ಸಿದ್ದರಾಮಯ್ಯನವರು (CM Siddaramaiah) ಹೇಳಿದ್ದಾರೆ.

ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್ ಅನ್ನು ಫೆಬ್ರವರಿ 16 ರಂದು ಮಂಡನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಫೆಬ್ರವರಿ 01 ರಂದು ತನ್ನ ಬಜೆಟ್ ಮಂಡನೆ ಮಾಡಲಿದೆ. ರಾಜ್ಯ ಬಜೆಟ್ (Karnataka Budget) ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ 53 ಸಾವಿರ ಕೋಟಿಯಷ್ಟು ಹೆಚ್ಚಳವಾಗಿದೆ. ಪೂರ್ಣ ಪ್ರಮಾಣದ ಮಾಹಿತಿ ಬಜೆಟ್ ಮಂಡನೆಯ ಬಳಿಕವಷ್ಟೇ ತಿಳಿದು ಬರಲಿದೆ.

You might also like
Leave A Reply

Your email address will not be published.