ಮನುಷ್ಯನ ಮೆದುಳಿಗೆ ಚಿಪ್ – ಹೊಸ ಇತಿಹಾಸವೋ? ಮಾನವಕುಲಕ್ಕೆ ಮಾರಕವೋ?

3 ಲಕ್ಷ ವರ್ಷಗಳ ಮಾನವನ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಂತಾದ ಅಭೂತಪೂರ್ವ ಘಟನೆಯೊಂದು ನಡೆದಿದೆ. ಈ‌ ಕುರಿತು ಕಳೆದ ಎರಡು ವರ್ಷಗಳ ಹಿಂದಷ್ಟೇ ನೀವು ಕೇಳಿರಬಹುದು. ಅರೇ ಏನಪ್ಪ ಆ ಸುದ್ದಿ ಅಂತೀರ!?

ಚಿತ್ರ ವಿಚಿತ್ರ ಕಂಪನಿಗಳ ಜನಕ, ಹುಟ್ಟು ಅನ್ವೇಷಕ, ವಿಶ್ವದ ಅಗರ್ಭ ಶ್ರೀಮಂತ ಎಲಾನ್‌ ಮಸ್ಕ್‌ ತನ್ನ ಮಹತ್ವಾಕಾಂಕ್ಷೆಯ ನಿರ್ಧಾರಗಳ ಮೂಲಕವೇ ಗಮನ ಸೆಳೆದಿರುವ ಎಲಾನ್‌ ಮಸ್ಕ್‌ ಮಾನವನ ಮೆದುಳಿಗೆ ಚಿಪ್‌ ಹಾಕುವ ಕ್ಲಿನಿಕಲ್‌ ಪ್ರಯೋಗವನ್ನು ಇನ್ನು 6 ತಿಂಗಳಲ್ಲಿ ಆರಂಭ ಮಾಡುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದರು. ಇಲಿ, ಮಂಗಗಳ ಮೇಲಿನ ಅವರ ಪ್ರಯೋಗ ಯಶಸ್ವಿಯಾದಂತೆ ಇದೀಗ ಮಾನವನ ಮೆದುಳಿಗೆ ಚಿಪ್‌ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಬಾರಿಗೆ ಮನುಷ್ಯರಿಗೂ ಕಂಪ್ಯೂಟರ್‌ಗಳಿಗೂ ನೇರ ಸಂಬಂಧ ಬೆಸೆಯುವ ಈ ವಿಚಾರವನ್ನ ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಮೊದಲ ಬಾರಿಗೆ ಮಾನವನೊಬ್ಬನಿಗೆ ನ್ಯೂರಾಲಿಂಕ್‌ ಚಿಪ್‌ ಅಳವಡಿಸಿದ್ದು, ಅವರು ಚೆನ್ನಾಗಿ ರಿಕವರ್‌ ಆಗ್ತಿದ್ದಾರೆ ಎಂದು ತಮ್ಮ ಖಾತೆಯಲ್ಲಿ ಹೇಳಿದ್ದಾರೆ.

ಏನಿದು ಯೋಜನೆ?:

ನ್ಯೂರಾಲಿಂಕ್‌ ಸಂಸ್ಥೆ, ಸರ್ಜಿಕಲ್‌ ರೋಬೋಟ್‌ (ಆರ್‌1) ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್‌ ಚಿಪ್‌ ಅಭಿವೃದ್ಧಿಪಡಿಸಿದೆ. ಅದನ್ನು ಮೆದುಳಿನಲ್ಲಿ ಅಳವಡಿಸಲಾಗುವುದು. ಈ ಚಿಪ್‌ ನ ಹೊರಭಾಗದಲ್ಲಿ ತಲೆಕೂದಲಿಗಿಂತಲೂ 20 ಪಟ್ಟು ಚಿಕ್ಕದಾದ ವೈರ್‌ಗಳು (ಎಲೆಕ್ಟ್ರೋಡ್‌ಗಳು) ಇರಲಿದ್ದು, ಅವು ಎಲ್ಲೆಡೆ ಹರಡಿಕೊಂಡು ಮೆದುಳಿನ ಭಾಗದೊಂದಿಗೆ ಸಂಪರ್ಕ ಬೆಳೆಸಲಿವೆ. ಇದು ಮೆದುಳಿಗೆ ಬರುವ ಸಂದೇಶ ಸಂಗ್ರಹ ಹಾಗೂ ಮೆದುಳನ್ನು ಉತ್ತೇಜಿಸುವ ಕಾರ್ಯ ಮಾಡುತ್ತದೆ. ಈ ಮೂಲಕ ವ್ಯಕ್ತಿಯು ಮನಸ್ಸಿನಲ್ಲಿ ಅಂದುಕೊಂಡ ವಿಷಯವನ್ನು ಮಾಡುವುದು ಸಾಧ್ಯವಾಗುತ್ತದೆ.

A human brain chip

ಅಂದರೆ ಚಿಪ್‌ ಅಳವಡಿಸಿದ ವ್ಯಕ್ತಿಯೊಬ್ಬ ತನ್ನ ತಲೆಯಲ್ಲಿ ಮೊಬೈಲ್‌ ಆನ್‌ ಮಾಡಬೇಕು ಅಥವಾ ಕರೆ ಮಾಡಬೇಕೆಂದು ಬಯಸಿದರೆ ಆ ಸಂದೇಶ ಚಿಪ್‌ ಮೂಲಕ ನೇರವಾಗಿ ಮೊಬೈಲ್‌ಗೆ ರವಾನೆಯಾಗಿ ಮೊಬೈಲ್‌ ಆನ್‌ ಆಗುತ್ತದೆ.

ಏನಿದು ನ್ಯೂರನ್ ಸ್ಟ್ರೈಕ್?

ಆರಂಭಿಕ ರಿಸಲ್ಟ್ಸ್‌ ನಲ್ಲಿ ನ್ಯೂರಾನ್‌ ಸ್ಪೈಕ್‌ ಪತ್ತೆಯಾಗಿದೆ. ಅಂದ್ರೆ ನಮ್ಮ ಮೆದುಳಿನಲ್ಲಿರೋ ನರಕೋಶಗಳು ಒಂದಕ್ಕೊಂದು ಎಲೆಕ್ಟ್ರಿಕ್‌ ಸಿಗ್ನಲ್‌ಗಳ ಮೂಲಕ ಮಾತಾಡ್ಕೊಳ್ತಾವೆ (ಸಂವಹನ ನಡೆಸ್ತಾವೆ). ಈ ಎಲೆಕ್ಟ್ರಿಕ್‌ ಸಿಗ್ನಲ್‌ ಅನ್ನೇ ನ್ಯೂರಾನ್‌ ಸ್ಪೈಕ್‌ ಅಂತ ಹೇಳ್ತಾರೆ. ಈಗ ಚಿಪ್‌ ಅಳವಡಿಸಿದ ಮೇಲೆ ಆ ನ್ಯೂರಾನ್‌ ಸ್ಪೈಕ್‌ ಕಾಣಿಸಿಕೊಂಡಿದೆ, ಅಂದ್ರೆ ಮೆದುಳು ರೆಸ್ಪಾಂಡ್‌ ಮಾಡಿದೆ.

ಪ್ರಯೋಗಕ್ಕೆ ಒಳಪಟ್ಟಿರೋ ಆ ವ್ಯಕ್ತಿಗೆ ಲಿಂಕ್ ಎಂಬ ಹೆಸರನ್ನೆ ಯಾಕಿಟ್ರು?

ಈ ಐತಿಹಾಸಿಕ ಪ್ರಯೋಗಕ್ಕೆ ಒಳಗೊಂಡಿರೋ ಆ ವ್ಯಕ್ತಿಯನ್ನ ʻಲಿಂಕ್‌ʼ ಅಂತ ಕರೆಯಲಾಗಿದೆ. ಈಗವರು ಈ ಪ್ರಕ್ರಿಯೆಯಿಂದ ಚೇತರಿಸಿಕೊಳ್ತಿದ್ದಾರೆ ಎನ್ನಲಾಗಿದೆ. ನ್ಯೂರಾಲಿಂಕ್‌ ಅಳವಡಿಸ್ತಿರೋ ಚಿಪ್‌ ಹೆಸರು ಕೂಡ ʻಲಿಂಕ್‌ʼ. ಇದು ಸುಮಾರು 5 ಕಾಯ್ನ್‌ ಗಳಷ್ಟು ದಪ್ಪ ಇರೋ ಈ ಚಿಪ್‌ ಅನ್ನ ಸರ್ಜರಿ ಮೂಲಕ ಮೆದುಳಲ್ಲಿ ಅಳವಡಿಸಲಾಗುತ್ತೆ.

A human brain chip

4 ತಿಂಗಳಲ್ಲೇ ಚಿಪ್ ಅಳವಡಿಸುವಲ್ಲಿ ಯಶಸ್ವಿ!?

ಅಂದ ಹಾಗೆ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಅಮೆರಿಕ ಸರ್ಕಾರ ನ್ಯೂರಾಲಿಂಕ್‌ನ ಮಾನವ ಪ್ರಯೋಗಕ್ಕೆ ಅನುಮತಿ ನೀಡಿತ್ತು. ಅನುಮತಿ ಸಿಕ್ಕ 4 ತಿಂಗಳಲ್ಲೇ ಮಸ್ಕ್‌ ಕಂಪನಿ ಚಿಪ್‌ ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ನ್ಯೂರೋ ಟೆಕ್ನಾಲಜಿಯಲ್ಲಿ ಕ್ರಾಂತಿಯ ಆರಂಭವಾಗಿದೆ.

ನ್ಯೂರಾಲಿಂಕ್‌ ಈ ಮಹತ್ವಾಕಾಂಕ್ಷೆಯ ಯೋಜನೆ ಮೂಲಕ ಪಾರ್ಕಿನ್ಸನ್‌ ಖಾಯಿಲೆ, ALS ಅಂದ್ರೆ ಸ್ಟೀಫನ್‌ ಹಾಕಿಂಗ್‌ ಅವರಿಗೆ ಬಂದಂತಹ ನರರೋಗ ಸಮಸ್ಯೆಗಳನ್ನ ಗುಣಪಡಿಸಬೇಕು ಅಂದುಕೊಂಡಿದೆ. 2016ರಲ್ಲಿ ಸ್ಥಾಪನೆಯಾದ ಈ ಕಂಪನಿಯಲ್ಲಿ 400 ಜನ ಕೆಲಸ ಮಾಡುತ್ತಿದ್ದು, 8 ವ‌ರ್ಷದಲ್ಲಿ ಸುಮಾರು 363 ಮಿಲಿಯನ್‌ ಡಾಲರ್‌ ಹೂಡಿಕೆ ಪಡೆದಿದೆ.

ಚಿಪ್‌ ಅಳವಡಿಕೆ ಏಕೆ?

  • ಮೆದುಳಿನಿಂದ ಸಂದೇಶ ರವಾನಿಸುವ ಸಮಸ್ಯೆ ಇರುವವರಿಗೆ ಚಿಪ್‌ ಅಳವಡಿಕೆ
  • ಚಿಪ್‌ ಮೂಲಕ ಕೃತಕವಾಗಿ ದೇಹದ ಅಂಗಗಳಿಗೆ ವಿವಿಧ ಸಂದೇಶಗಳ ರವಾನೆ
  • ಮೆದುಳಿಗೆ ಅಳವಡಿಸುವ ಚಿಪ್‌ ಹೊರಗಿನಿಂದ ನಿಯಂತ್ರಣ ಮಾಡಲು ಸಾಧ್ಯ
  • ಆಗ ದೃಷ್ಟಿದೋಷ, ನರದೋಷ, ಪಾಶ್ರ್ವವಾಯು ಸಮಸ್ಯೆಗಳಿಗೆ ಪರಿಹಾರ
  • ಕೈಯನ್ನು ಬಳಸದೆ ಮನಸ್ಸಿನಲ್ಲಿ ಅಂದುಕೊಂಡರೂ ಮೊಬೈಲ್‌ ಬಳಸಬಹುದು
  • ಬಾಯಿ ತೆರೆಯದೆಯೇ ಯಂತ್ರಗಳ ಜೊತೆ ಮಾತನಾಡಲು ಕೂಡ ಸಾಧ್ಯವಿದೆ
  • ಈ ಪ್ರಯೋಗ ಯಶಸ್ವಿಯಾದರೆ ಮನುಷ್ಯನ ಅನೇಕ ಸಮಸ್ಯೆಗಳಿಗೆ ಪರಿಹಾರ
You might also like
Leave A Reply

Your email address will not be published.