ಕಾಂಪೌಂಡ್ ಗೋಡೆಯ ಮೇಲೆ ತಾಲಿಬಾನ್‌ ಪರ ಘೋಷಣೆ‌ ಬರೆದು ಪೊಲೀಸ್‌ ಕಾನ್‌ʼಸ್ಟೇಬಲ್‌ ಹುಚ್ಚಾಟ – ಬಂಧನ

ಪ್ರೀತಿ, ಪ್ರೇಮ, ದ್ವೇಷ, ಅಸೂಯೆ ಹೀಗೆ ನಾನಾ ರೀತಿಗಳಲ್ಲಿ ಗೋಡೆಬರಹಗಳನ್ನ ನಾವು ದಿನನಿತ್ಯ ಬಸ್ ಸ್ಟ್ಯಾಂಡ್, ಕಚೇರಿಗಳ‌ ಮುಂಭಾಗವಿರುವ ಗೋಡೆ, ಹಲಗೆಗಳು ಸೇರಿದಂತೆ ನಾನಾ ಕಡೆಗಳಲ್ಲಿ ನೋಡುತ್ತಲೇ ಇರುತ್ತೇವೆ. ಇದನ್ನೆಲ್ಲ ಸರ್ವಸಾಮಾನ್ಯರು ಗೀಚುವುದು ಕಾಮನ್. ಆದರೆ ಇಲ್ಲಿ ಪ್ರಚೋದನಾತ್ಮಕ ಕೃತ್ಯಗಳನ್ನು ಖಂಡಿಸಬೇಕಾದ ಪೊಲೀಸ್ ಪೇದೆಯೊಬ್ಬನೇ “ಇಸ್ಲಾಂ, ಥರ್ಡ್ ವರ್ಲ್ಡ್ ವಾರ್, ತಾಲಿಬಾನ್ ಇಂಡಿಯಾ ಹೆಡ್ ಬಿ ಕೇರ್ ಫುಲ್ (Taliban india head be careful) ಸಲಾಂ ಇಸ್ಲಾಂ” ಎಂಬಿತ್ಯಾದಿ ವಿವಾದಾತ್ಮಕ ಹೇಳಿಕೆಗಳನ್ನ ಬರೆದಿದ್ದು ಸ್ಥಳೀಯ ವಾತಾವರಣವನ್ನು ಕದಡಿದೆ. ಅಷ್ಟಕ್ಕೂ ಆತ ಈ ಹೇಳಿಕೆ ಬರೆದಿದ್ದರ ಹಿಂದೆ ಅಡಗಿದ ಸತ್ಯಸತ್ಯತೆಯನ್ನ ನೀವು ಓದಿದ್ರೆ ಶಾಕ್ ಆಗದಂತು ಗ್ಯಾರೆಂಟಿ. ಏನದು ಅಂತೀರ? ಈ ಸ್ಟೋರಿ ಓದಿ.

ಹೌದು, ಪೊಲೀಸ್‌ ಪೇದೆಯೊಬ್ಬ ತನ್ನ ಮನೆಯ ಕಾಂಪೌಂಡ್ ಮೇಲೆ ದೇಶದ್ರೋಹಿ, ಪ್ರಚೋದನಾತ್ಮಕ ಬರಹ ಬರೆದುಕೊಂಡು ಈಗ ಜೈಲುಪಾಲಾದ ಘಟನೆ ಸೂರ್ಯಸಿಟಿ ಠಾಣಾ ವ್ಯಾಪ್ತಿಯ ಬಂಡಾಪುರದಲ್ಲಿ ನಡೆದಿದೆ.

ತಾಲಿಬಾನ್ ಪರ ಗೋಡೆಬರಹ – ಇದಕ್ಕೆ ಕಾರಣ ಹರಕೆಯಂತೆ :

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲಸಕ್ಕೆ ಸೇರುವ ಮುನ್ನಾ ಒಂದು ದರ್ಗಾಕ್ಕೆ ಹೋಗಿ ಹರಕೆ ಮಾಡಿಕೊಂಡಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.

ನನಗೆ ಪೊಲೀಸ್ ಉದ್ಯೋಗ ಸಿಕ್ಕರೆ ಅಂದಿನಿಂದಲೇ ನಾನು ಮುಸ್ಲಿಂ ಧರ್ಮದ ಅನುಯಾಯಿಯಾಗುತ್ತೇನೆ ಎಂದು ಹರಕೆ ಹೊತ್ತಿದ್ದು, ಅದರನ್ವಯ ನಾನಿಂದು ಅನುಯಾಯಿಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

ಇದರ ಹೊರತಾಗಿ, ತಾನೇ ತನ್ನ ಕೈಯಿಂದ ಮನೆ ಗೋಡೆ, ಕಾಂಪೌಂಡ್ ಹಾಗೂ ಗೇಟ್ ಮತ್ತು ಸುತ್ತಲಿನ ಗೋಡೆ ಮೇಲೆ “ಇಸ್ಲಾಂ, ಥರ್ಡ್ ವರ್ಲ್ಡ್ ವಾರ್, ತಾಲಿಬಾನ್ ಇಂಡಿಯಾ ಹೆಡ್ ಬಿ ಕೇರ್ ಫುಲ್ (Taliban india head be careful) ಸಲಾಂ ಇಸ್ಲಾಂ” ಸೇರಿದಂತೆ ಆತಂಕ ಸೃಷ್ಟಿಸುವ ಹಲವು ರೀತಿಯ ಬರಹಗಳನ್ನು ಬರೆದಿರುವುದಾಗಿ ತಿಳಿಸಿದ್ದಾನೆ.

ಈ ರೀತಿಯ ಬರಹಗಳು ಸಮಾಜದ ಶಾಂತಿ ಕದಡುವುದಿಲ್ಲವೇ? ಜವಾಬ್ದಾರಿಯುತ ಪೊಲೀಸನಾಗಿ ಹೀಗೆ ಬರೆಯಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಆರೋಪಿ ತಾನು ಮಾಡಿರುವುದು ಸರಿಯಿದೆ. ಇದರಲ್ಲಿ ನನಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ ಎಂದು ತಿಳಿಸಿದ್ದಾನೆ

ದೇಶವಿರೋಧಿ ಬರಹಗಳ ನಡುವೆ ರಾಜೀವ್ ಗಾಂಧಿ ಹೆಸರು ಉಲ್ಲೇಖ:

ಇಡೀ ಮನೆಯ ಗೋಡೆ ತುಂಬೆಲ್ಲಾ ದೇಶ ವಿರೋಧಿ ಬರಹಗಳಿದ್ದರೂ ಗೇಟ್‌ನ ಒಂದು ಬದಿಯಲ್ಲಿ ಮಾತ್ರ ರಾಜೀವ್ ಗಾಂಧಿ ಎಂಬ ಹೆಸರನ್ನು ಬರೆದಿದ್ದು, ಇದರ ಹಿಂದೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಪ್ರಚೋದನಾತ್ಮಕ ಬರಹಗಳು ದೇಶದ್ರೋಹಿ ಕೃತ್ಯಗಳೆಂದು ಅಲ್ಲಿಯ ಗ್ರಾಮಸ್ಥರು ಹೇಳಿದ್ದಾರೆ.

ಅಷ್ಟಕ್ಕೂ ಈ ಆರೋಪಿ ಯಾರು?

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುನಿರಾಜು ಮೂಲತಃ ಬೆಂಗಳೂರಿಗನಾಗಿದ್ದ. ಈತ ಬೆಂಗಳೂರಿನ ವಿಲ್ಸನ್ ಗಾರ್ಡನ್ ಮತ್ತು ಬಾಣಸವಾಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ.

Police constable arrested for writing pro-Taliban slogan on compound wall

ಬಂಧಿಸಲು ಮುಂದಾದ ಪೊಲೀಸರಿಗೆ ಅವಾಜ್ ಹಾಕಿದ ಆರೋಪಿ:

ಗ್ರಾಮಸ್ಥರಿಂದ ವಿಷಯ ತಿಳಿದು ಆರೋಪಿ ಮುನಿರಾಜುನನ್ನು ಬಂಧಿಸಲು ಮುಂದಾದರು. ಒಳ್ಳೆಯ ಮಾತಿಗೆ ಶರಣಾಗದ ಆರೋಪಿಯನ್ನು ಬಲವಂತವಾಗಿ ವಶಕ್ಕೆ ಪಡೆಯಲಾಯಿತು.

ಬಂಧಿಸಲು ಬಂದ ಪೊಲೀಸರಿಗೆ ‘ನನ್ನನ್ನು ಕರೆದೊಯ್ಯಲು ಬಂದು ದೊಡ್ಡ ತಪ್ಪು ಮಾಡುತ್ತಿದ್ದೀರಿ. ನನ್ನ ಕೈಯನ್ನು ಮುಟ್ಟಬೇಡಿ. ಬಿಡಿ’ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾನೆ.

ವಿಚಾರಣೆ ವೇಳೆ ಆತನ ಸಂಬಂಧಿಕರು, ಅರೆ ಹುಚ್ಚನಂತೆ ಅಲೆಯುತ್ತಿರುವ ಕಾನ್‌ಸ್ಟೇಬಲ್‌ ಮುನಿರಾಜು ನಶೆಯಲ್ಲಿ ಇಂತಹ ಕೃತ್ಯವೆಸಗಿದ್ದಾನೆ ಎಂದು ತಿಳಿಸಿದ್ದಾರೆ.

ಮನೆಯ ಮೇಲೆ ಪಾಕಿಸ್ತಾನ ಬಾವುಟ ಹಾರಿಸಿದ ಭೂಪ:

ಈತ ಬೆಂಗಳೂರಿನ ವಿಲ್ಸನ್ ಗಾರ್ಡನ್ ಮತ್ತು ಬಾಣಸವಾಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕಳೆದ ಮೂರು ತಿಂಗಳಿಂದ ಕರ್ತವ್ಯಕ್ಕೆ ಚಕ್ಕರ್ ಹೊಡೆದಿದ್ದಾನೆ. ಸದಾ ಕುಡಿದು ಹುಚ್ಚನಂತೆ ವರ್ತಿಸುವ ಈತ ಮೂರು ತಿಂಗಳ ಹಿಂದೆ ಮನೆಯ ಮೇಲೆ ಪಾಕಿಸ್ತಾನ ಬಾವುಟ ಹಾರಿಸಿದ್ದ ಎನ್ನಲಾಗಿದೆ.

ಇತ್ತೀಚೆಗೆ ಗ್ರಾಮದಲ್ಲಿ ಗೂಂಡಾ ರೀತಿ ವರ್ತನೆ ಮಾಡುತ್ತಾ ಲಾಂಗು ಮಚ್ಚು ಹಿಡಿದು ಜನರನ್ನು ಹೆದರಿಸುತ್ತಿದ್ದ. ಈ ಹಿಂದೆಯೂ ಇದೇ ರೀತಿ ಬರಹಗಳನ್ನು ಬರೆದಿದ್ದು, ಗ್ರಾಮಸ್ಥರು ಗಲಾಟೆ ಮಾಡಿ ತೆರವುಗೊಳಿಸಿದ್ದರು. ಪುನಃ ಎರಡು ತಿಂಗಳ ಹಿಂದೆ ಮತ್ತೆ ಇಂತಹ ದೇಶದ್ರೋಹಿ ಬರಹಗಳನ್ನು ಬರೆದಿದ್ದಾನೆ. ಈ ಬಗ್ಗೆ ಸಂಬಂಧಿಕರು ಕೇಳಿದರೆ ಕ್ಯಾರೆ ಎನ್ನುವುದಿಲ್ಲ ಎಂದು ತಿಳಿದು ಬಂದಿದೆ.

ಮದ್ಯದ ಅಮಲಿನಲ್ಲಿ ಬರಹ:

ಮನೆಯಲ್ಲಿ ತಂದೆ ತಾಯಿ ಮತ್ತು ಪತ್ನಿಯ ಮಾತನ್ನೂ ಕೇಳದೆ ಅವರ ಮೇಲೆಯೇ ಹಲ್ಲೆ ಮಾಡುತ್ತಿದ್ದ. ಕುಡಿತದ ಚಟಕ್ಕೆ ಬಿದ್ದ ಮತ್ತಿನಲ್ಲಿ ದೇಶ ವಿರೋಧಿ ಬರಹಗಳನ್ನು ಬರೆದಿದ್ದ ಎನ್ನಲಾಗಿದೆ. ಮದುವೆ ಆದ ಬಳಿಕ ತಾನು ತಾಲಿಬಾನ್‌ಗೆ ಸೇರಿಕೊಂಡಿದ್ದಾಗಿ ತಿಳಿಸಿ ಅಲ್ಲಾ ಎಂದು ಕೂಗುತ್ತಿದ್ದ ಎಂದು ಸಂಬಂಧಿ ಹನುಮಂತು ತಿಳಿಸಿದ್ದಾರೆ.

ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.

You might also like
Leave A Reply

Your email address will not be published.