ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್‌ : ಲವ್‌ ಬರ್ಡ್ಸ್‌ʼಗೆ 444 ರೂ. ಟಿಕೆಟ್ ಕೊಟ್ಟ ಕಂಡಕ್ಟರ್‌

ಕೆ.ಎಸ್​.ಆರ್​.ಟಿ.ಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್ ವಿತರಿಸಿದ ಕಂಡಕ್ಟರ್ ಅವರೊಂದಿಗೆ ಜೊತೆಯಾದ ಲವ್ ಬರ್ಡ್ಸ್ ಗೆ ಬರೋಬ್ಬರಿ 444 ರೂ. ಟಿಕೇಟ್ ನೀಡಿದ ಅಪರೂಪದ ಘಟನೆ ನಡೆದಿದೆ.

ಹೌದು! ಇಂದು ಬೆಳಗ್ಗೆ 08.18ಕ್ಕೆ ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ ಮೊಮ್ಮಗಳು ಕೆ.ಎಸ್​.ಆರ್​.ಟಿ.ಸಿ ಬಸ್​ ಹತ್ತಿ ಕುಳಿತಿದ್ದು, ಕಂಡಕ್ಟರ್ ಬಂದೊಡನೆ ಆಧಾರ್ ಕಾರ್ಡ್ ತೋರಿಸಿ ಉಚಿತ ಟಿಕೆಟ್ ಪಡೆದಿದ್ದರು.

Rs 444 Tiket for Lovebirds

ನಂತರ ಅಜ್ಜಿ ಮೊಮ್ಮಗಳೊಂದಿಗೆ ಜೊತೆಯಾದ ನಾಲ್ಕು ಲವ್ ಬರ್ಡ್ಸ್​ಗಳನ್ನು ನೋಡಿದ ಕಂಡಕ್ಟರ್ ಗೆ ಅದೇನ್ ಆಯ್ತೋ ಏನೋ, ಬರೋಬ್ಬರಿ 444 ರೂಪಾಯಿ ಟಿಕೆಟ್ ಹರಿದಿದ್ದಾನೆ.

Rs 444 Tiket for Lovebirds

ಸರ್ಕಾರಿ ಬಸ್ ಅಲ್ಲಿ ಪ್ರಯಾಣ ಮಾಡುವ ಒಂದು ಪಕ್ಷಿಗೆ 111ರೂ. ಟಿಕೆಟ್:

ಸರ್ಕಾರದ ಉಚಿತ ಯೋಜನೆಯಿಂದಾಗಿ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್‌ ಸಿಕ್ಕರೆ, ನಾಲ್ಕು ಲವ್ ಬರ್ಡ್ಸ್ ಪಕ್ಷಿಗಳಿಗೆ ಟಿಕೆಟ್ ಹಣ ಕೊಡುವಂತಾಗಿದೆ. ಒಂದು ಪಕ್ಷಿಗೆ 111ರೂ. ನಂತೆ ನಾಲ್ಕು ಪಕ್ಷಿಗಳಿಗೆ 444ರೂ. ನೀಡಿ ಅಜ್ಜಿ-ಮೊಮ್ಮಗಳು ಮೈಸೂರಿಗೆ ಪ್ರಯಾಣಿಸಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್​ನಲ್ಲಿ ನಮೂದಿಸಲಾಗಿದೆ.

Rs 444 Tiket for Lovebirds

You might also like
Leave A Reply

Your email address will not be published.