ಭಾರತೀಯರ ಪವರ್ – ಮಾಲ್ಡೀವ್ಸ್ ಡಮಾರ್

ಮಾಲ್ಡೀವ್ಸ್ ಪ್ರವಾಸೋದ್ಯಮದ ಮೇಲೆ ಭಾರತೀಯ ಪ್ರವಾಸಿಗರ ‘ಬಾಯ್ಕಾಟ್‌ ಮಾಲ್ಡೀವ್ಸ್’ ಅಭಿಯಾನದ ಬಿಸಿ ತಟ್ಟಿದ್ದು, ಕಳೆದ ಮೂರು ವಾರಗಳಲ್ಲಿ ಮಾಲ್ಡೀವ್ಸ್ ಪ್ರವಾಸದಲ್ಲಿ ಗಮನಾರ್ಹ ಬದಲಾವಣೆಯನ್ನು ಎದುರಿಸಿದೆ. ಕಳೆದ ವರ್ಷ ಮಾಲ್ಡೀವ್ಸ್‌ ಪ್ರವಾಸದಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ ವಿವಾದದ ಬಳಿಕ ಈಗ 5ನೇ ಸ್ಥಾನಕ್ಕೆ ಕುಸಿದಿದೆ.

ರಾಷ್ಟ್ರದ ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ ವರ್ಷ ಡಿ.31 ರ ಹೊತ್ತಿಗೆ ಭಾರತವು ಪ್ರವಾಸಿಗರ ಸಂಖ್ಯೆಯಲ್ಲಿ ಅಗ್ರಸ್ಥಾನವನ್ನು ಹೊಂದಿತ್ತು. 2,09,198 ಪ್ರವಾಸಿಗರ ಆಗಮನದೊಂದಿಗೆ ಆ ವರ್ಷದ ಮಾಲ್ಡೀವ್ಸ್ನ ಪ್ರವಾಸೋದ್ಯಮ ಮಾರುಕಟ್ಟೆಯ ಸುಮಾರು ಶೇ.11 ರಷ್ಟನ್ನು ಹೊಂದಿತ್ತು.

ಜನವರಿ 28 ರಲ್ಲಿ ಪಡೆದ ಅಂಕಿ-ಅಂಶಗಳು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಿಕ್ಕಟ್ಟನ್ನು ಪ್ರತಿಬಿಂಬಿಸುವಂತಿವೆ. ಈ ನಿಟ್ಟಿನಲ್ಲಿ ಭಾರತೀಯರ ಪ್ರವಾಸಿಗರ ಸಂಖ್ಯೆಯು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

Maldives Damar

2023 ರಲ್ಲಿ ಯಾವ ದೇಶ ಯಾವ ಸ್ಥಾನದಲ್ಲಿತ್ತು?

1. ರಷ್ಯಾ: 18,561 ಪ್ರವಾಸಿಗರ ಆಗಮನ (10.6% ಮಾರುಕಟ್ಟೆ ಪಾಲು, 2023 ರಲ್ಲಿ 2 ನೇ ಸ್ಥಾನ)
2. ಇಟಲಿ: 18,111 ಆಗಮನ (10.4% ಮಾರುಕಟ್ಟೆ ಪಾಲು, 2023 ರಲ್ಲಿ 6 ನೇ ಸ್ಥಾನ)
3. ಚೀನಾ: 16,529 ಆಗಮನ (9.5% ಮಾರುಕಟ್ಟೆ ಪಾಲು, 2023 ರಲ್ಲಿ 3 ನೇ ಸ್ಥಾನ)
4. ಯುಕೆ: 14,588 ಆಗಮನ (8.4% ಮಾರುಕಟ್ಟೆ ಪಾಲು, 2023 ರಲ್ಲಿ 4 ನೇ ಸ್ಥಾನ)
5. ಭಾರತ: 13,989 ಆಗಮನ (8.0% ಮಾರುಕಟ್ಟೆ ಪಾಲು, 2023 ರಲ್ಲಿ 1 ನೇ ಸ್ಥಾನ)
6. ಜರ್ಮನಿ: 10,652 ಆಗಮನ (6.1% ಮಾರುಕಟ್ಟೆ ಪಾಲು)
7. USA: 6,299 ಆಗಮನ (3.6% ಮಾರುಕಟ್ಟೆ ಪಾಲು, 2023 ರಲ್ಲಿ 7 ನೇ ಸ್ಥಾನ)
8. ಫ್ರಾನ್ಸ್: 6,168 ಆಗಮನ (3.5% ಮಾರುಕಟ್ಟೆ ಪಾಲು, 2023 ರಲ್ಲಿ 8 ನೇ ಸ್ಥಾನ)
9. ಪೋಲೆಂಡ್: 5,109 ಆಗಮನ (2.9% ಮಾರುಕಟ್ಟೆ ಪಾಲು, 2023 ರಲ್ಲಿ 14 ನೇ ಸ್ಥಾನ)
10. ಸ್ವಿಟ್ಜರ್ಲೆಂಡ್: 3,330 ಆಗಮನ (1.9% ಮಾರುಕಟ್ಟೆ ಪಾಲು, 2023 ರಲ್ಲಿ 10 ನೇ ಸ್ಥಾನ)

You might also like
Leave A Reply

Your email address will not be published.