ಮೋದಿಯನ್ನು ಆಯ್ಕೆ ಮಾಡೋಣ – ಲೋಕಸಭಾ ಚುನಾವಣೆಗೆ ಬಿಜೆಪಿ ಅಭಿಯಾನ

2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಪಕ್ಷವು “ಮೋದಿ ಕೋ ಚುನ್ತೇ ಹೈ” (ಮೋದಿಯನ್ನು ಆಯ್ಕೆ ಮಾಡೋಣ) ಎಂಬ ಅಭಿಯಾನ ಪ್ರಾರಂಭಿಸಿದ್ದು, ಈ ನಿಟ್ಟಿನಲ್ಲಿ ನೂತನ ಪ್ರಚಾರ ಗೀತೆಯನ್ನು ಆರಂಭಿಸಿದೆ. ಆ ಪ್ರಚಾರ ಗೀತೆ ನೀವಿನ್ನು ಕೇಳಿಲ್ವಾ!? ಹಾಗಾದರೆ ಈ ವರದಿಯನ್ನು ಓದಿ.

“ಸಪ್ನೆ ನಹೀ ಹಕೀಕತ್ ಬುನ್ತೇ ಹೈ, ತಬೀ ತೋ ಸಬ್ ಮೋದಿ ಕೋ ಚುನ್ತೇ ಹೈ (ಬರೀ ಕನಸುಗಳಲ್ಲ ಇದರೊಂದಿಗೆ ವಾಸ್ತವವನ್ನು ಹೆಣೆಯುವುದರಿಂದ ಎಲ್ಲರೂ ಮೋದಿಯನ್ನು ಆಯ್ಕೆ ಮಾಡುತ್ತಾರೆ) ಎಂಬ ಸಾಲಿನೊಂದಿಗೆ ನೂತನ ಪ್ರಚಾರ ಗೀತೆಯು ಆರಂಭವಾಗುತ್ತದೆ.

ಹಾಡಿನ ಅರ್ಥವೇನು?

ಭಾರತದ ಪರಿಸ್ಥಿತಿ ಶೋಚನೀಯವಾಗಿದ್ದು, ದೇಶದ ಜನತೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದರು. ಜನರ ನಂಬಿಕೆ, ವಿಶ್ವಾಸವನ್ನು ಮೋದಿ ಉಳಿಸಿದರು. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂಬ ಕನಸನ್ನು ಕೇವಲ ಕನಸಾಗಿ ಉಳಿಸದೆ, ಅದಕ್ಕೆ ಬೇಕಾದ ಮಾರ್ಗವನ್ನು ಸರಿಯಾದ ರೀತಿಯಲ್ಲಿ ಆರಿಸಿಕೊಂಡರು. ಮೋದಿ ತಮ್ಮ ಕನಸನ್ನು ವಾಸ್ತವವಾಗಿ ಹೆಣೆದರೇ ಹೊರತು, ಕನಸಾಗಿ ಉಳಿಸಲಿಲ್ಲ. ಆದ್ದರಿಂದಲೇ ಎಲ್ಲರೂ ಮೋದಿಯನ್ನು ಆಯ್ಕೆ ಮಾಡುತ್ತಾರೆ.

ಮೋದಿ ಅವರು ಭಾರತವನ್ನು ತನ್ನ ತಾಯಿಗೆ ಮತ್ತು ದೇಶವಾಸಿಗಳನ್ನು ಸಾಕ್ಷತ್ ದೇವರೆಂದು ಪರಿಗಣಿಸುತ್ತಾರೆ. ಅವರು ಮಾಡುವ ಯಾವುದೇ ಕೆಲಸವನ್ನು ಕೀರ್ತಿಗಾಗಿಯೋ ಅಥವಾ ಅವರ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದ್ದಕ್ಕಾಗಿಯೋ ಕಾರ್ಯನಿರ್ವಹಿಸುವುದಿಲ್ಲ. ಈ ಕಾರಣದಿಂದಲೇ ಇಡೀ ದೇಶದ ಜನತೆ ಮೋದಿ ಅವರ ಮಾತನ್ನು ಕೇಳುತ್ತಾರೆ. ಭ್ರಷ್ಟರು ಭಯಭೀತರಾಗಿರುವಾಗ ಭಾರತೀಯ ಮಹಿಳೆಯರು ನಾಯಕರಾಗಿ ಹೊರಹೊಮ್ಮಿದರು. ಅವರು ವಿನೀತರಾಗಿದ್ದುಕೊಂಡೇ ಆಕಾಶವನ್ನು ತಲುಪಿದರು (ಚಂದ್ರಯಾನ) ಹಾಗೂ ಮೋದಿ ಸರ್ಕಾರದ ವಿದೇಶಾಂಗ ನೀತಿಯ ಯಶಸ್ಸು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಪ್ರಧಾನಿ ಮೋದಿಯವರ ಯೋಜನೆಗಳನ್ನು, ಅವರ ಅಧಿಕಾರವಧಿಯ ಸಾಧನೆಗಳನ್ನು ಈ ಪ್ರಚಾರ ಗೀತೆಯು ವಿವರಿಸುತ್ತ ಹೋಗುತ್ತದೆ.

You might also like
Leave A Reply

Your email address will not be published.