ಕಾಂಗ್ರೆಸ್ ಚೋಡೋ ಯಾತ್ರೆಯಾಗಿದೆಯೇ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೋ ಯಾತ್ರೆ ಆರಂಭಿಸಿದ ಮೇಲೆ ಕಾಂಗ್ರೆಸ್ ಆಡಳಿತವಿದ್ದ ಮೂರು ರಾಜ್ಯಗಳನ್ನು ಕಳೆದುಕೊಂಡಿತು. ಈಗ ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವಾಗ ಮಮತಾ ಬ್ಯಾನರ್ಜಿಯವರು ಇಂಡಿ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದರು. ಈ ಯಾತ್ರೆ ಇನ್ನೇನು ಬಿಹಾರ ಪ್ರವೇಶ ಮಾಡಲಿರುವ ಸಂಧರ್ಭದಲ್ಲಿ ನಿತೀಶ್ ಕುಮಾರ್ ಇಂಡಿ ಮೈತ್ರಿಕೂಟದಿಂದ ದೂರ ಸರಿದು ಬಿಜೆಪಿ NDA ಒಕ್ಕೂಟಕ್ಕೆ ಸೇರಿದ್ದಾರೆ. ಒಟ್ಟಿನಲ್ಲಿ ಭಾರತ್ ಜೋಡೋ ಯಾತ್ರೆಗಳಿಂದ ಕಾಂಗ್ರೆಸ್‌‌ಗೆ ಲಾಭಕ್ಕಿಂತ ಜಾಸ್ತಿ ನಷ್ಟಗಳೇ ಆದ ಹಾಗಿದೆ.

ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯ ಕುರಿತು ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಇದೊಂದು ರಾಜಕೀಯ ಪ್ರವಾಸೋದ್ಯಮವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದರೆ ಕಾಂಗ್ರೆಸ್‌ ಮಾತ್ರ ಪ್ರಯಾಣ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

Bharat Jodo Yatra
ಅಷ್ಟೇ ಅಲ್ಲದೆ, ಕಾಂಗ್ರೆಸ್ 2024 ರ ಚುನಾವಣೆಗೆ ತಯಾರಿ ನಡೆಸುತ್ತಿಲ್ಲ, ಬದಲಿಗೆ 2029ರ ಚುನಾವಣೆಗೆ ತಯಾರಿ ನಡೆಸುತ್ತಿರುವಂತಿದೆ.‌ ಬಹುಶಃ 2024 ರ ನಂತರವೇ 2024 ರ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎಂಬುದನ್ನು ಲೆಕ್ಕಾಚಾರ ಮಾಡುತ್ತೇವೆ, 2029 ರ ಚುನಾವಣೆಗೆ ಸಿದ್ಧಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. 2024 ರ ಚುನಾವಣೆಗೆ ನಮ್ಮನ್ನು ತಾವು ತಯಾರು ಮಾಡಿಕೊಂಡಿದ್ದರೆ ಇಂತಹ ಘಟನೆಗಳು ಸಂಭವಿಸುತ್ತರಲಿಲ್ಲ ಎಂದಿದ್ದಾರೆ.

ಇನ್ನು ಅಸ್ಸಾಂನಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು ಶಾಂತಿ ಸುವ್ಯವಸ್ಥೆ ಕದಡಿದೆ. ಚುನಾವಣೆಯ ನಂತರ ರಾಹುಲ್ ಗಾಂಧಿಯವರನ್ನು ಬಂಧಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಹೇಳಿದ್ದಾರೆ. ಅದಕ್ಕೆ ಕೌಂಟರ್ ಕೊಟ್ಟ ಪ್ರಿಯಾಂಕ್ ಖರ್ಗೆ, ರಾಹುಲ್ ತಪ್ಪು ಮಾಡಿದ್ದರೆ ಈಗಲೇ ಬಂಧಿಸಿ, ಚುನಾವಣೆಯವರೆಗೂ ಕಾಯುವುದು ಯಾಕೆ ಎಂದು ಕೇಳಿದ್ದಕ್ಕೆ ರಾಹುಲ್ ನಮ್ಮ(ಬಿಜೆಪಿಯ) ಸ್ಟಾರ್ ಪ್ರಚಾರಕ ನಾವು ಅವರನ್ನು ಈಗ ಬಂಧಿಸುವುದಿಲ್ಲ ಎಂದು ಹೇಳಿದ್ದು ಭಾರಿ ವೈರಲ್ ಆಗಿತ್ತು.

You might also like
Leave A Reply

Your email address will not be published.