ಕನ್ನಡಿಗರ ಕುತೂಹಲ ಕೆರಳಿಸಿದ ಜ್ಞಾನವ್ಯಾಪಿ ಸರ್ವೆ – ಮಂದಿರಕ್ಕೂ ಕನ್ನಡಕ್ಕೂ ಇರೋ ನಂಟೇನು?

ಇತ್ತೀಚೆಗಷ್ಟೇ ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ರಾಮನ ಮೂರ್ತಿಯಿಂದ ಹಿಡಿದು ಹಲವು ಬಗೆಯಲ್ಲಿ ಕರ್ನಾಟಕದ ನಂಟಿದ್ದರೆ, ಇತ್ತ ಜ್ಞಾನವಾಪಿಗೂ ಕರುನಾಡ ನಂಟು ಇರುವ ವಿಚಾರ ಕನ್ನಡಿಗರ ಹುಬ್ಬೇರುವಂತೆ ಮಾಡಿದೆ. ಹಾಗಾದರೆ ಆ ನಂಟು ಯಾವುದು ಅಂತೀರ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.

ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ ಇತ್ತು ಅಂತ ಪುರಾತತ್ವ ಸರ್ವೇಕ್ಷಣಾ ವರದಿ ಹೇಳಿದೆ. ಇದರೊಂದಿಗೆ ಅಲ್ಲಿನ ದೇವಾಲಯದ ಕುರುಹುಗಳಲ್ಲಿ ಕನ್ನಡ ಭಾಷೆಯ ಬರಹಗಳು ಸಿಕ್ಕಿರುವುದರ ಕುರಿತು ವೈಜ್ಞಾನಿಕ ಸಮೀಕ್ಷಾ ವರದಿ ಇದೀಗ ಬಹಿರಂಗಪಡಿಸಿದೆ.

ರಾಮನ ಜೊತೆ ಶಿವನಿಗೂ ಕರುನಾಡ ನಂಟು!

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿರುವ ಬಾಲಕ ಶ್ರೀರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ್ದು ನಮ್ಮ ಕರುನಾಡಿನ ಶಿಲ್ಪಿ ಅರುಣ್ ಯೋಗಿರಾಜ್. ಇದಕ್ಕೂ ಮುನ್ನ ಹಲವು ಕನ್ನಡಿಗರು ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ರಾಮಮಂದಿರ ನಿರ್ಮಾಣದ ವೇಳೆ ಅನೇಕ ಕನ್ನಡಿಗರು ಕೆಲಸ ಮಾಡಿದ್ದಾರೆ. ಇದೀಗ ಜ್ಞಾನವಾಪಿಯಲ್ಲೂ ಕನ್ನಡ ಬರಹ ಪತ್ತೆಯಾಗಿರುವುದು ಕನ್ನಡಿಗರಿಗೆ ಅಚ್ಚರಿಯೊಂದಿಗೆ ಸಂಭ್ರಮ ಮನೆಮಾಡಿದೆ.

Rama Shiva

ಪತ್ತೆಯಾದ ಕನ್ನಡ ಶಾಸನಕ್ಕೂ ಕೋಲಾರಕ್ಕೂ ನಂಟು:

ಜ್ಞಾನವಾಪಿಯಲ್ಲಿ ಪತ್ತೆಯಾದ ಕನ್ನಡ ಶಾಸನಕ್ಕೆ ಕೋಲಾರದ ನಂಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೌದು! 16 ನೇ ಶತಮಾನಕ್ಕೆ ಸೇರಿದ ಕನ್ನಡ ಶಾಸನದಲ್ಲಿ ದೊಡ್ಡರಸಯ್ಯನ ಮತ್ತು ನರಸಿಂಹಣ್ಣನ ಭಿಂನಹ ಎಂಬ ಬರಹಗಳು ಇರುವ ಬಗ್ಗೆ ದಾಖಲೆಯಲ್ಲಿ ಉಲ್ಲೇಖವಿರುವುದಲ್ಲದೆ, ಈ ಎರಡು ಹೆಸರುಗಳು ವಿಜಯನಗರ ಸಂಸ್ಥಾನದ ಆಳ್ವಿಕೆಗೆ ಸೇರಿದವರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಕೋಲಾರದ ಪ್ರಸಿದ್ದ ಕೋಲಾರಮ್ಮ ದೇಗುಲದಲ್ಲಿರುವ ಕನ್ನಡ ಶಾಸನ ಇದ್ದಾಗಿದ್ದು, ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಗ್ರಾಮದ ಪಾಳೇಗಾರರೆ ಅವರು ಇರಬಹುದು ಎಂದು ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

The discovered Kannada inscription is related to Kolar

ಜ್ಞಾನವಾಪಿ ಮಸೀದಿಯಲ್ಲ, ಮಂದಿರ!

ಜ್ಞಾನವಾಪಿಯು ಈ ಹಿಂದೆ ಶಿವ ದೇವಾಲಯವಾಗಿದ್ದು, 1669 ರಲ್ಲಿ ಮೊಘಲ್ ದೊರೆ ಔರಂಗಜೇಬ ಇದನ್ನು ಕೆಡವಿ ಈಗಿರುವ ಮಸೀದಿಯನ್ನು ನಿರ್ಮಿಸಿದ್ದ ಎಂದು ಮೂಲಗಳು ತಿಳಿಸುತ್ತಿವೆ. ಈ ಸ್ಥಳವು ಮೂಲತಃ ವಿಶ್ವೇಶ್ವರ ದೇವಸ್ಥಾನವಾಗಿದ್ದು, ಜೊತೆಯಲ್ಲಿ ಬನಾರಸ್‌ ನ ಅತ್ಯಂತ ಪ್ರಸಿದ್ಧ ಬ್ರಾಹ್ಮಣ ಕುಟುಂಬದ ನಾರಾಯಣ ಭಟ್ಟರು ಸ್ಥಾಪಿಸಿದರು ಎನ್ನಲಾಗಿದೆ.

Kannada script found inside Jnanavapi

ಜ್ಞಾನವಾಪಿಯೊಳಗೆ ಕನ್ನಡ ಲಿಪಿ ಪತ್ತೆ

ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸಿದ ಸಮೀಕ್ಷೆಯನ್ವಯ, ಜ್ಞಾನವಾಪಿಯೊಳಗೆ ಕನ್ನಡ ಬರಹಗಳು ಪತ್ತೆಯಾಗಿವೆ. ಹಲವು ಶಾಸನಗಳು, ಹಲವು ಪ್ರಮುಖ ಪತ್ರಗಳು ಸಿಕ್ಕಿವೆ. ಅವುಗಳಲ್ಲಿ ಕನ್ನಡ ಬರಹ ಪತ್ತೆಯಾಗಿದೆ. ಇದರ ಜೊತೆಗೆ ತೆಲುಗು ಹಾಗೂ ದೇವನಾಗರಿ ಲಿಪಿಗಳ ಬರಹಗಳೂ ಕಂಡು ಬಂದಿವೆ.

Kannada script found inside Jnanavapi

ಹಿಂದೂ ದೇವರುಗಳ ರಚನೆಗಳು ಪತ್ತೆ

ಹಿಂದಿನ ಶಾಸನಗಳ ಮರುಬಳಕೆಯು ಹಿಂದಿನ ರಚನೆಗಳನ್ನು ನಾಶಪಡಿಸಿದೆ ಎಂದು ಸೂಚಿಸುತ್ತದೆ. ಅವುಗಳ ಭಾಗಗಳನ್ನು ಅಸ್ತಿತ್ವದಲ್ಲಿರುವ ರಚನೆಯ ನಿರ್ಮಾಣ ದುರಸ್ತಿಯಲ್ಲಿ ಮರುಬಳಕೆ ಮಾಡಲಾಯಿತು. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಈ ಶಾಸನಗಳಲ್ಲಿ ಕಂಡುಬಂದಿದೆ.

Discover the creations of Hindu Gods

ಇನ್ನೂ ಹಿಂದೂ ಪರ ವಕೀಲ ಹೇಳಿದ್ದೇನು?

ಜ್ಞಾನವಾಪಿ ಕೇಸ್‌ನಲ್ಲಿ ಹಿಂದೂ ಸಂಘಟನೆಗಳ ಪರ ವಾದ ಮಂಡಿಸುತ್ತಿರುವ ವಿಷ್ಣು ಶಂಕರ್ ಜೈನ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಎಎಸ್‌.ಐ ಸಮೀಕ್ಷೆ ಸಮಯದಲ್ಲಿ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ಹಲವಾರು ಶಾಸನಗಳನ್ನು ಗುರುತಿಸಿ ಅಧ್ಯಯನ ನಡೆಸಲಾಗಿದೆ. ಪ್ರಸ್ತುತ ಸಮೀಕ್ಷೆಯಲ್ಲಿ ಒಟ್ಟು 34 ಶಾಸನಗಳನ್ನು ದಾಖಲಿಸಲಾಗಿದೆ ಮತ್ತು 32 ಮುದ್ರೆಯ ಪುಟಗಳನ್ನು ಅಧ್ಯಯನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

What the advocate for Hindu said

You might also like
Leave A Reply

Your email address will not be published.