ಗುಜರಾತ್ ಮಡಿಲು ಸೇರಲಿದೆಯಾ ಭಾರತದ ಮೊದಲ ಟೆಸ್ಲಾ ಫ್ಯಾಕ್ಟರಿ?

ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿರುವ Space X, Tesla, X (Formerly known as Twitter) ಸೇರಿದಂತೆ ಹಲವು ಕಂಪನಿಗಳ‌ ಮಾಲಿಕರಾಗಿರುವ ಎಲೋನ್ ಮಸ್ಕ್ ಈಗ ಭಾರತಕ್ಕೆ ಇನ್ನೊಂದು ಸಿಹಿಸುದ್ದಿ ಕೊಡಲು ಸಜ್ಜಾಗಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಶ್ರೀ‌ ನರೇಂದ್ರ ಮೋದಿಯವರ ಅಮೇರಿಕಾ ಪ್ರವಾಸದ ವೇಳೆ ಹಲವು ಗಣ್ಯರ ಜೊತೆ ಮಸ್ಕ್ ಕೂಡಾ ಪ್ರಧಾನಮಂತ್ರಿ ಮೋದಿಯವರನ್ನು ಬೇಟಿಯಾಗಿದ್ದರು. ಭೇಟಿಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಮಸ್ಕ್ ‘ಭಾರತದ ಭವಿಷ್ಯದ ಕುರಿತು ನಾನು ಉತ್ಸುಕನಾಗಿದ್ದೇನೆ, ನಾನು ಮೋದಿಯವರ ಅಭಿಮಾನಿ’ ಎಂದದ್ದು ದೊಡ್ಡ‌ ಸುದ್ದಿಯಾಗಿತ್ತು. ಹಾಗೂ ANI ಸುದ್ದಿ ಸಂಸ್ಥೆಯು ಹಂಚಿಕೊಂಡ ಇನ್ನೊಂದು ವಿಡಿಯೋದಲ್ಲಿ ಕೂಡಾ ಎಲೋನ್ ಮಸ್ಕ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾರೆ, ಹಾಗೂ ಭಾರತದಲ್ಲಿ ಹೂಡಿಕೆ‌ ಮಾಡುವಂತೆ ಕರೆ ಕೊಟ್ಟಿದ್ದಾರೆ ಅವರ ಜೊತೆಗಿನ ಮೀಟಿಂಗ್ ಅದ್ಭುತವಾಗಿತ್ತು ನಾನು ಅವರನ್ನು ಇಷ್ಟ ಪಡುತ್ತೇನೆ’ ಎಂದು ಹೇಳಿದ್ದು ಜಗತ್ತಿನ ಹಲವರ ಹುಬ್ಬೇರುವಂತೆ ಮಾಡಿತ್ತು.

ಇದಾಗಿ ಕೆಲವೇ ತಿಂಗಳು ಕಳೆದದ್ದಷ್ಟೇ ಈಗ ಮಸ್ಕ್ ಅವರ ಒಡೆತನದ ಟೆಸ್ಲಾ ಕಂಪೆನಿಯು ಭಾರತದಲ್ಲಿ ತನ್ನ ಮೊದಲ (EV maker) ಫ್ಯಾಕ್ಟರಿಯನ್ನು ಗುಜರಾತ್‌ನಲ್ಲಿ ಆರಂಭಿಸಲು ಚಿಂತನೆ ನಡೆಸಿದ ಕುರಿತು ಸುದ್ದಿಯಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಾಗಿದ್ದು 2024 ರ ಜನವರಿಯಲ್ಲಿ ನಡೆಯಲಿರುವ ‘ವೈಬ್ರೈಂಟ್ ಗುಜರಾತ್’ ಕಾರ್ಯಕ್ರಮದಲ್ಲಿ ಘೋಷಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಎಲೆಕ್ಟ್ರಾನಿಕ್ ವೆಹಿಕಲ್ಸ್ ತಯಾರಿಕೆಗೆ ಗುಜರಾತ್‌ನ ಸನಂದ್, ಬೆಚರಾಜಿ ಮತ್ತು ಧೊಲೇರಾ ಮೇಲೆ ಟೆಸ್ಲಾ ಕಣ್ಣಿಟ್ಟದ್ದರ ಹಿಂದೆ ಹಲವು ಕಾರಣಗಳಿದ್ದು, ಅದರಲ್ಲಿ ಬಂದರು ಹತ್ತಿರ ಇರುವ ಕಾರಣ ವಾಹನಗಳ ರಫ್ತು ಕಾರ್ಯಕ್ಕೂ ಅನುಕೂಲವಾಗುತ್ತದೆ ಎಂಬುದು ಟೆಸ್ಲಾದ ದೂರದೃಷ್ಟಿಯಾಗಿದೆ.

ಒಟ್ಟಿನಲ್ಲಿ ನರೇಂದ್ರ ಮೋದಿ ಮತ್ತು ಮಸ್ಕ್ ಅವರ ಅಮೆರಿಕ ಪ್ರವಾಸದ ಭೇಟಿಯ ಫಲ ಇಂದು ಟೆಸ್ಲಾದ ರೂಪದಲ್ಲಿ ಭಾರತಕ್ಕೆ ದೊರಕುತ್ತಿರುವುದು ಖುಷಿಯ ವಿಚಾರವಲ್ಲದೆ ಇನ್ನೇನು.

You might also like
Leave A Reply

Your email address will not be published.