ಪ್ರತಿಭಟನೆಗೆ ತಲೆಬಾಗಿದ ಸರ್ಕಾರ : ಅತಿಥಿ ಉಪನ್ಯಾಸಕರಿಗೆ ಸಿಗಲಿವೆ ಈ ಸೌಲಭ್ಯಗಳು

ಸತತ ಒಂದು ತಿಂಗಳುಗಳ ಕಾಲ ನಡೆದ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಅನಿರ್ಧಿಷಾವಧಿ ಧರಣಿಗೆ ಸಿದ್ದರಾಮಯ್ಯನವರ ಸರ್ಕಾರ ಮಣಿದಿದ್ದು, ಹಲವು ಪೂರಕ ಭರವಸೆಗಳನ್ನು ನೀಡಿದೆ.

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘವು ನವೆಂಬರ್ 24 ರಿಂದ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿತ್ತು. ಇಡೀ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಈ ಪ್ರತಿಭಟನೆಗೆ ಕೈ ಜೋಡಿಸಿದ್ದರು. ಇದರಿಂದಾಗಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನೆಗೆ ಉಪನ್ಯಾಸಕರೇ ಇಲ್ಲದಂತಾಗಿತ್ತು.

ಬರೋಬ್ಬರಿ ಒಂದು ತಿಂಗಳ ನಂತರ ಎಚ್ಚೆತ್ತು, ಇಂದು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು, ಪ್ರತಿಭಟನಾ ನಿರತ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘಕ್ಕೆ ಹಲವು ಭರವಸೆಗಳನ್ನು ನೀಡಿದ್ದಾರೆ. ಅಲ್ಲದೇ, ಮುಷ್ಕರ ವಾಪಾಸ್ ಪಡೆಯದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆಯೂ ಗುಟುರು ಹಾಕಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ದೊರೆತ ಸೌಲಭ್ಯಗಳೇನು?

1) ಅತಿಥಿ ಉಪನ್ಯಾಸಕರ ವೇತನವನ್ನು ಐದು ಸಾವಿರ ರೂ. ಹೆಚ್ಚಿಸಲಾಗುತ್ತದೆ.
2) 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರು ಕೆಲಸ ಬಿಡುವಾಗ 5 ಲಕ್ಷ ನೀಡಲು ತೀರ್ಮಾನಿಸಲಾಗಿದೆ.
3) ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಆದ್ಯತೆ. ನೇಮಕಾತಿಯಲ್ಲಿ ಕೃಪಾಂಕ ನೀಡುವ ಬಗ್ಗೆ ನಿರ್ಧಾರ.
4) ಮಾಸಿಕವಾಗಿ 1 ದಿನ ವೇತನ ಸಹಿತ ರಜೆ.

ಉನ್ನತ ಶಿಕ್ಷಣ ಇಲಾಖೆಯು 2023-24ನೇ ಸಾಲಿಗೆ ರಾಜ್ಯದ ಪದವಿ ಕಾಲೇಜುಗಳಲ್ಲಿನ 47 ವಿವಿಧ ವಿಷಯಗಳ ಬೋಧನೆಗಾಗಿ ಸರಿಸುಮಾರು 10 ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿದೆ.

You might also like
Leave A Reply

Your email address will not be published.