ಸ್ವಾಮಿ ವೀವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಮೋದಿ ಧ್ಯಾನ – ಹೀಗಿದೆ ಕನ್ಯಾಕುಮಾರಿಯ ಸ್ಥಳ ಮಹಾತ್ಮೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮೇ 30 ರಿಂದ ಜೂನ್ 1 ರವರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಜಗತ್ಪ್ರಸಿದ್ಧ ‘ವಿವೇಕಾನಂದ ರಾಕ್’ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.

ಪ್ರಧಾನಮಂತ್ರಿಯವರು ರಾಕ್ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಮೇ 30 ರಿಂದ ಜೂನ್ 1 ರ ಸಂಜೆಯವರೆಗೆ ಧ್ಯಾನ ಮಂಟಪದಲ್ಲಿ ಹಗಲು ರಾತ್ರಿ ಧ್ಯಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು, ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ಹೇಗೆ ವಿಶೇಷ ಸ್ಥಾನವಿದೆ ಎಂದು ಜನರು ನಂಬುತ್ತಾರೆಯೋ, ಹಾಗೆಯೇ ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ. ದೇಶಾದ್ಯಂತ ಸುತ್ತಾಡಿ ಇಲ್ಲಿಗೆ ಆಗಮಿಸಿ 3 ದಿನಗಳ ಕಾಲ ಧ್ಯಾನಿಸಿ ಅಭಿವೃದ್ಧಿ ಹೊಂದಿದ ಭಾರತದ ದರ್ಶನ ಪಡೆದಿದ್ದರು.

ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ಭಗವಾನ್ ಶಿವನಿಗಾಗಿ ಕಾಯುತ್ತಿರುವಾಗ ಅದೇ ಸ್ಥಳದಲ್ಲಿ ಒಂದೇ ಪಾದದ ಮೇಲೆ ಧ್ಯಾನ ಮಾಡುತ್ತಾಳೆ ಎಂದು ಕೂಡಾ ಪ್ರತೀತಿಯಿದೆ.

Modi meditation at the same place where Swami Vivekananda meditated

ಇದು ಭಾರತದ ದಕ್ಷಿಣದ ತುದಿಯಾಗಿದೆ ಅಷ್ಟೇ ಅಲ್ಲದೆ, ಇದು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಹಾಗೂ ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ. ಈ ಬಾರಿ ಪ್ರಧಾನಿ ಮೋದಿಯವರು ಕನ್ಯಾಕುಮಾರಿಗೆ ಹೋಗುವ ಮೂಲಕ ರಾಷ್ಟ್ರೀಯ ಏಕತೆಯ ಸಂಕೇತವನ್ನು ರವಾನಿಸುತ್ತಿದ್ದಾರೆ.

ಪ್ರಧಾನಿಯವರು ಪ್ರತಿಬಾರಿಯೂ ಚುನಾವಣಾ ಪ್ರಚಾರದ ಕೊನೆಯಲ್ಲಿ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಳ್ಳುತ್ತಾರೆ. ಇದಕ್ಕೆ ಅನುಗುಣವಾಗಿ ಮೇ 30ರಂದು ಕನ್ಯಾಕುಮಾರಿ ತಲುಪಿ ಜೂನ್ 1ರವರೆಗೆ ಅಲ್ಲಿಯೇ ಇರಲಿದ್ದಾರೆ. 2019ರ ಚುನಾವಣೆಯ ಬಳಿಕ ಕೇದಾರನಾಥಕ್ಕೆ ಭೇಟಿ ನೀಡಿದ್ದ ಅವರು, 2014ರಲ್ಲಿ ಶಿವಾಜಿ‌ ಮಹರಾಜರ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು.

543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

You might also like
Leave A Reply

Your email address will not be published.