RCB ಅಭಿಮಾನಿಗಳಲ್ಲಿ ಕಳೆಗಟ್ಟಿದ ಸಂತೋಷ – ‌GT ವಿರುದ್ಧ ಹಲವು ದಾಖಲೆ ಗೀಚಿದ ವಿಲ್‌ ಜಾಕ್ಸ್

ಸೋತು ಸುಣ್ಣವಾಗಿದ್ದ ಆರ್​ಸಿಬಿ ಕಳೆದ ಎರಡು ಪಂದ್ಯಗಳ ನಂತರ ಅದ್ಭುತ ಕಮ್​ಬ್ಯಾಕ್ ಆಗಿದ್ದು, ಸಪ್ಪೆ ಮೊರೆಯಾಕಿದ್ದ ಕ್ರಿಕೆಟ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಿದ್ದಾರೆ.

ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಸದ್ದಡಗಿಸಿದ್ದ ಬೆಂಗಳೂರು ಅಹ್ಮದಾಬಾದ್​ನಲ್ಲಿ ಗುಜರಾತ್​ ಟೈಟನ್ಸ್ ವಿರುದ್ಧ 201ರನ್​ಗಳ ಟಾರ್ಗೆಟ್ ಅನ್ನ ಸುಲಭವಾಗಿ ಚೇಸ್​ ಮಾಡಿ ಗೆದ್ದುಕೊಂಡಿದೆ.

201ರನ್​ಗಳ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ 16 ಓವರ್​ಗಳಲ್ಲಿ ಗುರಿ ತಲುಪಿತು. ಇದಕ್ಕೆ ವಿಲ್​ ಜಾಕ್ಸ್ ಅಬ್ಬರ ಬ್ಯಾಟಿಂಗ್ ಕಾರಣ. ಕೇವಲ 41 ಎಸೆತಗಳಲ್ಲಿ ಜಾಕ್ಸ್ 5 ಬೌಂಡರಿ ಹಾಗೂ 10 ಸಿಕ್ಸರ್​ ಸಿಡಿಸಿದರು. ರಶೀದ್ ಖಾನ್​ ಬೌಲಿಂಗ್​ನಲ್ಲಿ 4 ಸಿಕ್ಸರ್​ ಸಹಿತ 29ರನ್​ ಸಿಡಿಸಿ ಶತಕ ಪೂರೈಸಿದರು.

ವಿಲ್‌ ಜಾಕ್ಸ್‌ ಅಬ್ಬರಕ್ಕೆ ಆರ್‌ಸಿಬಿ ಫ್ಯಾನ್ಸ್‌ ಫುಲ್‌ ಥ್ರಿಲ್‌ ಆಗಿದ್ದಾರೆ. ವಿಲ್‌ ಜ್ಯಾಕ್ಸ್‌‌ಗೆ ಈಗ 25 ವರ್ಷ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಇವರನ್ನು ರಿಟೈನ್‌ ಮಾಡಿಕೊಳ್ಳಬೇಕು. ಅದೂ 10 ವರ್ಷದವರೆಗೂ ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಮೊದಲ ಅರ್ಧಶತಕ ಕೊಂಚ ಸ್ಲೋ ಆಗಿ ಬಾರಿಸಿದ್ದ ವಿಲ್‌ ಜ್ಯಾಕ್ಸ್‌‌ 2ನೇ ಅರ್ಧಶತಕವನ್ನು ಗಾಳಿಗಿಂತ ವೇಗವಾಗಿ ಭಾರಿಸಿದ್ದಾರೆ ಅಂದರೆ ತಪ್ಪಾಗಲ್ಲ. ಕೇವಲ 06 ನಿಮಿಷದಲ್ಲಿ ವಿಲ್‌ ಜ್ಯಾಕ್ಸ್‌‌ 50 ರನ್‌ಗಳಿಸಿದ್ದಾರೆ.

Joy among RCB fans - Will Jacks who made many records against GT

6:41ಕ್ಕೆ 50 ರನ್‌ಗಳಿಸಿದ್ದ ವಿಲ್‌ ಜ್ಯಾಕ್ಸ್‌‌, 6:47 ರಷ್ಟರಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ದಾಖಲೆ ಸೃಷ್ಟಿಸಿದ್ದಾರೆ ಆರ್‌‌ಸಿಬಿ ಬ್ಯಾಟರ್‌. 16ನೇ ಓವರ್​ನಲ್ಲಿ ರಶೀದ್​ ಖಾನ್ ಬೌಲಿಂಗ್​ನಲ್ಲಿ ಮೊದಲ ಎಸೆತವನ್ನು ಕೊಹ್ಲಿ ಸಿಂಗಲ್ ತೆಗೆದುಕೊಂಡರು.

ನಂತರ 5 ಎಸೆತಗಳಲ್ಲಿ ವಿಲ್​ ಜಾಕ್ಸ್ 6,6,4,6,6 ರನ್​ ಸಿಡಿಸಿದರು. ವಿಶೇಷವೆಂದರೆ ಇದೇ ಓವರ್​ನ ಕೊನೆ ಎಸೆತದಲ್ಲಿ ಆರ್​ಸಿಬಿ ಗೆಲ್ಲಲು ಒಂದು ರನ್​ ಅಗತ್ಯವಿತ್ತು. ಇತ್ತ ಶತಕಕ್ಕಾಗಿ ವಿಲ್​ ಜಾಕ್ಸ್​ಗೆ 6 ರನ್​ ಅಗತ್ಯವಿತ್ತು. ಸಿಕ್ಸರ್ ಬಾರಿ ಶತಕ ಪೂರೈಸಿಕೊಂಡು ಆರ್​ಸಿಬಿಗೆ ಗೆಲುವನ್ನು ತಂದುಕೊಟ್ಟಿದ್ದರು.

ಈ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ 29 ರನ್​ ರನ್​ ಬಿಟ್ಟುಕೊಡುವ ಮೂಲಕ ರಶೀದ್ ಖಾನ್ ಟಿ20 ಕರಿಯರ್​ನಲ್ಲೇ ಅತ್ಯಂತ ದುಬಾರಿ ಓವರ್​ ಎಸೆದರು. ವಿಲ್​ ಜಾಕ್ಸ್​ ವಿಶ್ವದ ಶ್ರೇಷ್ಠ ಸ್ಪಿನ್ನರ್​ಗೆ 4 ಸಿಕ್ಸರ್ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡರು.

2018ರಲ್ಲಿ ಕ್ರಿಸ್​ ಗೇಲ್ ಕೂಡ ರಶೀದ್​ ಖಾನ್​ಗೆ ಸತತ 4 ಸಿಕ್ಸರ್ ಬಾರಿಸಿದ್ದರು. ಈ ಓವರ್​ನಲ್ಲಿ ರಶೀದ್ 27 ರನ್​ ಬಿಟ್ಟುಕೊಟ್ಟಿದ್ದರು. ಒಟ್ಟಾರೆ ಪಂದ್ಯದಲ್ಲಿ 55ರನ್ ಬಿಟ್ಟುಕೊಟ್ಟಿದ್ದರು. ಇದು ಅವರ ಹಿಂದಿನ ಐಪಿಎಲ್​ನ ಕೆಟ್ಟ ಬೌಲಿಂಗ್ ಪ್ರದರ್ಶನವಾಗಿತ್ತು. ಇದೀಗ ವಿಲ್​ ಜಾಕ್ಸ್ 29 ರನ್​ ಸಿಡಿಸಿದರು.

You might also like
Leave A Reply

Your email address will not be published.