ಸ್ವಲ್ಪದರಲ್ಲೇ ತಪ್ಪಿದ ಹೆಲಿಕಾಪ್ಟರ್‌ – ಅದೃಷ್ಟವಶಾತ್‌ ಗೃಹ ಸಚಿವ ಅಮಿತ್‌ ಶಾ ಪಾರು

ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಅಮಿತ್ ಶಾ ವಿಡಿಯೋ ಹೇಳಿಕೆ ವಿವಾದ ಭಾರಿ ಸದ್ದುಮಾಡುತ್ತಿದ್ದ ಬೆನ್ನಲ್ಲೇ ಇದೀಗ ಆತಂಕ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ನಡೆದ ಆತಂಕಕಾರಿ ಘಟನೆಯಾದರು ಏನು? ಇಲ್ಲಿದೆ ಸ್ಟೋರಿ. ಬನ್ನಿ ನೋಡೋಣ.

ಹೌದು, ಅಮಿತ್ ಶಾ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿದ್ದಂತೆ ದಿಢೀರ್ ನಿಯಂತ್ರಣ ಕಳೆದುಕೊಂಡು ಭಾರೀ ಆತಂಕ ಮನೆಮಾಡಿತ್ತು. ಕೆಲ ಹೊತ್ತು ಹೆಲಿಕಾಪ್ಟರ್ ಆಗಸದಲ್ಲಿ ಗಿರ ಗಿರ ತಿರುಗಿ ಆತಂಕ ಸೃಷ್ಟಿಸಿತ್ತು. ಕೂದಲೆಳೆ ಅಂತರದಲ್ಲಿ ಅಮಿತ್ ಶಾ ಅಪಾಯದಿಂದ ಪಾರಾದ ಘಟನೆ ಬಿಹಾರದ ಬೆಗುಸರೈನಲ್ಲಿ ನಡೆದಿದೆ.

ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಬಿಹಾರದ ಬಿಗುಸೈರೆಗೆ ಅಮಿತ್ ಶಾ ಆಗಮಿಸಿದ್ದರು. ಬಿಗುಸರೈನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ಅಮಿತ್ ಶಾ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ ಮಾಡಿದ್ದರು. ಸಮಾವೇಶದ ಬಳಿಕ ಬಿಗುಸರೈನಿಂದ ಹೆಲಿಕಾಪ್ಟರ್ ಹತ್ತಿದ್ದರು. ಬಿಗುಸರೈ ಬಳಿಯ ಮೈದಾನದಲ್ಲಿನ ಹೆಲಿಪ್ಯಾಡ್‌ನಲ್ಲಿದ್ದ ಹೆಲಿಕಾಪ್ಟರ್, ಅಮಿತ್ ಶಾ ಕೂರಿಸಿಕೊಂಡು ಟೇಕ್ ಆಫ್ ಆಗಿದೆ.

ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಪೈಲೆಟ್ ನಿಯಂತ್ರಣ ಕಳೆದುಕೊಂಡಿದೆ. ಆಗಸದಲ್ಲಿ ಗಿರ ಗಿರ ತಿರುಗಿದ ಹೆಲಿಕಾಪ್ಟರ್ ಆಗಸದಿಂದ ದಿಡೀರ್ ಕುಸಿದಿತ್ತು. ಇದು ಆತಂಕ ಸೃಷ್ಟಿಸಿತ್ತು. ಕಾರಣ ಹೆಲಿಕಾಪ್ಟರ್ ನಿಯಂತ್ರಣ ಸಿಗದೆ ಆಗಸದಲ್ಲಿ ಗಿರ ಗಿರ ತಿರುಗಿ ಪಥ ಬದಲಿಸಿತ್ತು. ಇಷ್ಟೇ ಅಲ್ಲ ಮತ್ತೆ ಭೂಮಿಯತ್ತ ಕುಸಿಯ ತೊಡಗಿದ ಕಾರಣ ಮರಗಳ ಕೊಂಬೆಗಳು ಹೆಲಿಕಾಪ್ಟರ್ ತಾಗುವ ಅಪಾಯವೂ ಎದುರಾಗಿತ್ತು. ಇಷ್ಟೇ ಅಲ್ಲ ಹೆಲಿಕಾಪ್ಟರ್ ಭೂಮಿಗೆ ಅಪ್ಪಳಿಸುವ ಭೀತಿ ಕೂಡ ಎದುರಾಗಿತ್ತು.

A helicopter that narrowly missed - luckily Home Minister Amit Shah escaped

ಆದರೆ, ಸತತ ಪ್ರಯತ್ನದ ಫಲವಾಗಿ ಪೈಲೆಟ್ ಮತ್ತೆ ಹೆಲಿಕಾಪ್ಟರ್ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಅಮಿತ್ ಶಾ ಹೆಲಿಕಾಪ್ಟರ್ ಆಗಸದತ್ತ ಹಾರಿ ಪ್ರಯಾಣ ಮುಂದುವರಿಸಿದ್ದಾರೆ. ಆದರೆ ಈ ಘಟನೆ ಆತಂಕ ಸೃಷ್ಟಿಸಿತ್ತು. ಈ ವಿಡಿಯೋ ಕೂಡ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಬಿಹಾರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಿಹಾರದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇನ್ನು 16 ಸ್ಥಾನಗಳನ್ನು ಬಿಜೆಪಿಯ ಮೈತ್ರಿಯ ನೀತಿಶ್ ಕುಮಾರ್ ನೇತೃತ್ವದ ಜೆಡಿಯುಗೆ ಬಿಟ್ಟುಕೊಡಲಾಗಿದೆ. ಚಿರಾಗ್ ಪಾಸ್ವಾನ್ ಎಲ್‌ಜೆಪಿ 5 ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಇತ್ತ ಹಿಂದೂಸ್ಥಾನ ಅವಾ ಮೋರ್ಚಾ ಒಂದ ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ.

You might also like
Leave A Reply

Your email address will not be published.