ದರೋಡೆಕೋರ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

ಮಾಫಿಯಾ ಡಾನ್, ದರೋಡೆಕೋರನಾಗಿದ್ದು ನಂತರ ರಾಜಕಾರಣಿಯಾಗಿ ಬದಲಾದ ಮುಖ್ತಾರ್ ಅನ್ಸಾರಿಯ ಆರೋಗ್ಯ ಹದಗೆಟ್ಟು ಹೃದಯಾಘಾತದಿಂದ ಉತ್ತರ ಪ್ರದೇಶದ ಬಂದಾದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಆಸ್ಪತ್ರೆಗೆ ದಾಖಲಾದ ಅನ್ಸಾರಿಯನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಲಾಯಿತಾದರೂ ನಂತರ ಆರೋಗ್ಯ ತೀವ್ರ ಹದಗೆಟ್ಟ ಕಾರಣ 9 ಜನ ವೈದ್ಯರುಳ್ಳ ಸಿಸಿಯು ಘಟಕಕ್ಕೆ ಸ್ಥಳಾಂತರ ಮಾಡಲಾಯಿತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಮುಖ್ತಾರ್ ಅನ್ಸಾರಿ ಸಾವನ್ನಪ್ಪಿದ್ದಾರೆ.

ಜೈಲಿನಲ್ಲಿ ವಿಷಪೂರಿತ ಆಹಾರ ನೀಡಿದ ಪರಿಣಾಮ ಅವರು ಆಸ್ಪತ್ರೆಗೆ ಹೋಗುವಂತೆ ಆಗಿದ್ದು ನಲವತ್ತು ದಿನಗಳ ಹಿಂದೆಯೂ ವಿಷಮಿಶ್ರಿತ ಆಹಾರ ನೀಡಲಾಗಿತ್ತು, ಪದೇ ಪದೇ ವಿಷಪೂರಿತ ಆಹಾರ ನೀಡುವ ಪ್ರಕ್ರಿಯೆ ಇಲ್ಲಿ ನಡೆಯುತ್ತಿದೆ. ಹಾಗಾಗಿ ಅವರ ಆರೋಗ್ಯ ಸ್ಥಿತಿ‌ ಹದಗೆಡುತ್ತಿತ್ತು ಎಂದು ಗಾಜಿಪುರದ ಸಂಸದ ಹಾಗೂ ಅನ್ಸಾರಿ ಸಹೋದರ ಅಫ್ಜಲ್ ಹೇಳಿದ್ದಾರೆ.

Gangster Mukhtar Ansari dies of heart attack

ಇನ್ನು 60 ವರ್ಷದ ಈ ಡಾನ್ ಕಮ್ ರಾಜಕಾರಣಿಯು 2005 ರಿಂದಲೇ ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದು ಇವರ ಮೇಲೆ 60 ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳು ದಾಖಲಾಗಿದ್ದವು.‌ 2022 ರಿಂದ, ಉತ್ತರಪ್ರದೇಶದ ವಿವಿಧ ನ್ಯಾಯಾಲಯಗಳಿಂದ ಸುಮಾರು ಎಂಟು ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿದ್ದರು ಅಷ್ಟೇ ಅಲ್ಲದೇ ಕಳೆದ ವರ್ಷ ಉತ್ತರ ಪ್ರದೇಶ ಸರ್ಕಾರ ಬಿಡುಗಡೆಮಾಡಿದ 66 ಜನ ದರೋಡೆಕೋರರ ಲಿಸ್ಟ್‌ನಲ್ಲೂ ಅನ್ಸಾರಿಯವರ ಹೆಸರಿತ್ತು.

ಇನ್ನು ಅನ್ಸಾರಿಯವರ ಹಿನ್ನೆಲೆ ನೋಡುವುದಾದರೆ 70-80 ರ ದಶಕದಲ್ಲಿ ಉತ್ತರಪ್ರದೇಶದಲ್ಲಿ ಭಯೋತ್ಪಾದನೆಯ ಸಮಾನಾರ್ಥಕವೆಂದೇ ಗುರುತಿಸಿಕೊಂಡಿದ್ದ ಈ ಮಾಫಿಯಾ ಡಾನ್ ಕಾಲಾನಂತರದಲ್ಲಿ ರಾಜಕೀಯಕ್ಕೆ ಪ್ರವೇಶ ನೀಡಿ ಮೌ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಸ್ಪರ್ಧಿಸಿ, ವಿಜಯ ಸಾಧಿಸಿದ್ದರು. ಜೈಲಿನಲ್ಲಿದ್ದೇ ಚುನಾವಣೆ ಸ್ಪರ್ಧೆ ಮಾಡಿ ಗೆದ್ದು ಬೀಗಿದ ಕೀರ್ತಿಯೂ ಈತನಿಗಿದೆ. ಯೋಗಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುತ್ತಲೇ ಇವರ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಬಿದ್ದು ಈಗ ಅವರ ಸಾವಿನಲ್ಲಿ ಅಂತ್ಯಗೊಂಡಿದೆ ಎನ್ನಬಹುದು.

You might also like
Leave A Reply

Your email address will not be published.