ಇವು ಕೇವಲ ಸೇತುವೆಗಳಲ್ಲ – ನಿರ್ಮಾಣ ತಂತ್ರಜ್ಞಾನದ 10 ಅದ್ಭುತಗಳು

1) ಮಗ್ಡೆಬರ್ಗ್ ವಾಟರ್ ಬ್ರಿಡ್ಜ್:

ಮಗ್ಡೆಬರ್ಗ್ ಪಟ್ಟಣದ ಸಮೀಪದ ಎಲ್ಬೆ ನದಿಗೆ ಅಡ್ಡಲಾಗಿ 918 ಮೀಟರ್ (3,012 ಅಡಿ) ಅಂದರೆ, ಭೂಮಿಯ ಮೇಲೆ 690 ಮೀಟರ್ ಮತ್ತು ನೀರಿನ ಮೇಲೆ 228 ಮೀಟರ್ ಅಷ್ಟು ಎತ್ತರದ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಯು 34 ಮೀಟರ್ (112 ಅಡಿ) ಅಗಲ ಮತ್ತು 6.25 ಮೀಟರ್ (20.5 ಅಡಿ) ಎತ್ತರವಿದೆ. ಇನ್ನೂ ನೀರಿನ ಆಳ 4.25 ಮೀಟರ್ (13.9 ಅಡಿ) ಇದೆ.
ಎರಡನೇ ಮಹಾಯುದ್ದದ ಕಾರಣದಿಂದಾಗಿ ಜರ್ಮನ್ ಅವರಿಗೆ ಸುಮಾರು 80 ವರ್ಷ ಬೇಕಾಗಿತ್ತು. ಇದೀಗ 2023ರಲ್ಲಿ ಸಾರ್ವಜನಿಕವಾಗಿ ಈ ಸೇತುವೆಯನ್ನು ತೆರೆಯಲಾಗಿದೆ.

Magdeburg Water Bridge

2) ಸಿಯೋಲ್ಸ್ ಬ್ಯಾನ್ಪೊ ಬ್ರಿಡ್ಜ್:

ಹ್ಯಾನ್ ನದಿಗೆ ನಿರ್ಮಿಸಿರುವ ಈ ಸೇತುವೆ ಪ್ರಮುಖ ಪ್ರವಾಸಿ ತಾಣ. ಬೃಹತ್ ಕಾರಂಜಿಯ 10,000 ಸೂಸುಶಾಯಿಯಿಂದ ಪ್ರತಿ ನಿಮಿಷ ಸುಮಾರು 190 ಟನ್ ನೀರು ಹೊರಚಿಮ್ಮುವುದು.

Seoul's Banpo Bridge

3) ಐಯೋಲ್ ಐಲ್ಯಾಂಡ್ ಬ್ರಿಡ್ಜ್:

ಆಸ್ಟ್ರೇಲಿಯಾದ ಗ್ರಾಜ್ ನ ಮರ್ ನದಿಯ ಮಧ್ಯಭಾಗದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಇಲ್ಲಿ ಸನ್ ಬಾತ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇತುವೆ ಮೇಲೆ ಟ್ರೆಂಡಿ ಬಾರ್ ಹಾಗೂ ಕಾಫಿ ಹೌಸ್ ಸಹ ಇದೆ.

Aiola Island Bridge Graz

4) ಗೇಟ್ಸ್ ಹೆಡ್ ಮಿಲೇನಿಯಂ ಬ್ರಿಡ್ಜ್:

ಇದು ವಿಶ್ವದ ಪ್ರಥಮ ಹಾಗೂ ಏಕೈಕ ಇಳಿಜಾರು ಸೇತುವೆ. ಸಣ್ಣ ಹಡಗುಗಳ ಈ ಇಳಿಜಾರಿನಲ್ಲಿ ಸಲೀಸಾಗಿ ಜಾರಬಹುದು.

Gates Head Millennium Bridge

5) ದ ಫಾಲ್ಕಿರ್ಕ್ ವೀಲ್:

ಸ್ಕಾಟ್ ಲ್ಯಾಂಡ್ ನ ಐತಿಹಾಸಿಕ ಫೋರ್ತ್ ಹಾಗೂ ಸ್ಲೈಡ್ ಕನ್ಯಾಲ್ ಹಾಗೂ ಯೂನಿಯನ್ ಕನ್ಯಾಲ್ ನಡುವೆ ಈ ಸೇತುವೆ ನಿರ್ಮಿಸಿರುವುದರಿಂದ ನೌಕಾಯಾನಕ್ಕೆ ಪುನರ್ ಚಾಲನೆ ದೊರೆತಿದೆ.

The Falkirk Wheel

6) ಹೆಂಡ್ರಸನ್ ವೇವ್ಸ್ ಬ್ರಿಡ್ಜ್:

ಸಿಂಗಪುರದಲ್ಲಿರುವ ಈ ಸೇತುವೆ ಅತ್ಯಂತ ಎತ್ತರದ ಪಾದಚಾರಿ ಸೇತುವೆ. ಇದು 36ಮೀ ಎತ್ತರವಿದೆ. ಅಂದರೆ ಸುಮಾರು 12 ಅಂತಸ್ತಿನ ಕಟ್ಟಡದ ಎತ್ತರವಿದೆ.

Henderson Waves Bridge

7) ಟೈಂಜಿನ್ ಐ ಬ್ರಿಡ್ಜ್:

ಹೈಹೆ ನದಿಗೆ ನಿರ್ಮಿಸಿರುವ ಯಾಂಗ್ಲೆ ಸೇತುವೆ ಮೇಲೆ ಅತಿ ದೊಡ್ಡ ಫೇರಿಸ್ ವೀಲ್ ನಿರ್ಮಿಸಲಾಗಿದೆ. ಅದು ಜನರನ್ನು ಗಾಳಿಯಲ್ಲಿ ಸುಮಾರು 120 ಮೀ. ಮೇಲಕ್ಕೆ ಎತ್ತಬಲ್ಲದು.

Tianjin Eye Bridge

8) ದ ಮಲೇಷಿಯಾ ಸ್ಕೈ ಬ್ರಿಡ್ಜ್:

ಲಂಕಾವೀಯಲ್ಲಿರುವ ಸೇತುವೆ ಸಮುದ್ರ ಮಟ್ಟದಿಂದ ಸುಮಾರು 700ಮೀ. ಎತ್ತರದಲ್ಲಿದೆ.

The Malaysia Sky Bridge

9) ಪೊಂಟೆ ವೆಷಿಯೋ:

ಫ್ಲಾರೆನ್ಸ್ ನಲ್ಲಿರುವ ಈ ಸೇತುವೆ ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಿರುವ ಯೂರೋಪಿನ ಅತ್ಯಂತ ಪುರಾತನ ಕಮಾನು ಸೇತುವೆ.

Ponte Vecchio

10) ಬ್ರಿಡ್ಜ್ ಟು ನೋವೇರ್:

ನಾರ್ವೆಯ ಅಟ್ಲಾಂಟಿಕ್‌ ರಸ್ತೆಯ ಈ ಸೇತುವೆ ಮೇಲೆ ಹಾದು ಹೋದರೆ, ಸಮುದ್ರದ ಮೇಲೆ ಸುಮಾರು 5ಕಿ.ಮೀ ದೂರ ಸಾಗಬಹುದು. ಸಮುದ್ರದಲ್ಲಿ ಸಣ್ಣ ಬಿರುಗಾಳಿ ಎದ್ದಾಗ ಈ ಸೇತುವೆ ಮೇಲೆ ಸಾಗುವುದು ರೋಚಕ ಅನುಭವ.

Bridge to Nowhere

You might also like
Leave A Reply

Your email address will not be published.