ಅಯ್ಯಂಗಾರ್ ಯೋಗ – ಭಾರತದ ಟೆನಿಸ್ ತಾರೆಯ ಯಶಸ್ಸಿನ ಗುಟ್ಟು

ಭಾರತದ ಅತ್ಯಂತ ಪ್ರತಿಷ್ಠಿತ ಟೆನಿಸ್ ವೃತ್ತಿಪರರಲ್ಲಿ ಒಬ್ಬರಾದ ಇವರು 2019ರಲ್ಲಿ ತಮ್ಮ ಮೊಣಕಾಲಿನ ಸಮಸ್ಯೆಯಿಂದಾಗಿ ಆಟದಿಂದ ಹೊರಗುಳಿಯಬೇಕಾಯಿತು. ಆ ಸಾಂಕ್ರಾಮಿಕ ರೋಗದ ನಡುವೆಯು ಚಲ ಬಿಡದೇ ತಮ್ಮ 43ನೇ ವಯಸ್ಸಿನಲ್ಲಿ 500ನೇ ಗೆಲುವನ್ನು$ ದಾಖಲಿಸುವ ಮೂಲಕ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ ತಂದ ಈ ವ್ಯಕ್ತಿ ಯಾರು? ಇವರ ಸಾಂಕ್ರಾಮಿಕ ರೋಗಕ್ಕೆ ಮದ್ದಾದದ್ದು ಏನು? ಇಲ್ಲಿದೆ ಈ ಕುರಿತಾದ ವರದಿ.$

ಭಾರತೀಯ ಟೆನಿಸ್ ಆಟಗಾರ ಅಂದರೆ ಸಾಕು ಥಟ್ ಎಂದು ತಲೆಲಿ ಹೊಳೆಯುವ ಹೆಸರೆ ರೋಹನ್ ಬೋಪಣ್ಣ. ಭಾರತದ ಅತ್ಯಂತ ಪ್ರತಿಷ್ಠಿತ ಟೆನಿಸ್ ವೃತ್ತಿಪರರಲ್ಲಿ ಒಬ್ಬರು. ಟೆನಿಸ್ ಆಟದಲ್ಲಿ ತುಂಬಾ ಸಕ್ರಿಯ ಆಟಗಾರ. ಕಳೆದ ಕೆಲವು ವರ್ಷಗಳಿಂದ ತಮಗಾದ ಸಾಂಕ್ರಾಮಿಕ ರೋಗದ ನಿಮಿತ್ತ ಆಟದ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಇದೀಗ 43 ನೇ ವಯಸ್ಸಿನಲ್ಲಿ ಆಸ್ಟ$್ರೇಲಿಯನ್ ಓಪನ್ 2024ರಲ್ಲಿ ಪಾಲ್ಗೊಂಡ ರೋಹನ್ ಬೋಪಣ್ಣ ತಮ್ಮ ವೃತ್ತಿಜೀವನದ 500ನೇ ಗೆಲುವನ್ನು ದಾಖಲಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ರೋಹನ್ ಬೋಪಣ್ಣ ಅವರ ಗೆಲುವಿನ ಹಿಂದಿದೆ ನುಂಗಲಾರದ ನೋವು:

2019 ರಲ್ಲಿ ರೋಹನ್ ಬೋಪಣ್ಣ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದುದ್ದರಿಂದ ಟೆನ್ನಿಸ್ ಆಟದಿಂದ ಹೊರಗುಳಿಯಬೇಕಾಯ್ತು. ತಮಗಾದ ಮೊಣಕಾಲಿನ ನೋವನ್ನು ಕಡಿಮೆ ಮಾಡಿಕೊಳ್ಳಲು ನೋವು ನಿವಾರಕಗಳ ಮೊರೆ ಹೋಗಿದ್ದರು. ಆದರೂ ಅವರ ಮೊಣಕಾಲುಗಳಲ್ಲಿ ಸವೆತ ಕಾಣಿಸಿತ್ತು. ನಂತರ ಪಿಆರ್ ಪಿ ಮತ್ತು ಹೈಲುರಾನಿಕ್ ಚುಚ್ಚುಮದ್ದಿನ ಪ್ರಯತ್ನಗಳ ಹೊರತಾಗಿಯೂ ಅವರಿಗೆ ಯಾವುದೇ ಪರಿಹಾರ ಕಾಣಿಸಲಿಲ್ಲ.

ecret of Success of Indian Tennis Star

ಇದಾದ ಮುಂದಿನ ವರ್ಷ ಅಂದರೆ 2020 ರಲ್ಲಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬೋಪಣ್ಣ ಅಯ್ಯಂಗಾರ್ ಯೋಗದ ಮೊರೆ ಹೋದರು. ಯೋಗ ದೇಹದ ಜೋಡಣೆಗೆ ಒತ್ತು ನೀಡುತ್ತದೆ ಎಂಬುದನ್ನು ಅರಿತ ಅವರು, ಅಯ್ಯಂಗಾರ್ ಯೋಗವನ್ನು ನಿರಂತರವಾಗಿ ಮಾಡಲಾರಂಭಿಸಿದ್ದು, ಅವರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಲಾರಂಭಿಸಿತ್ತು. ವಾರಕ್ಕೆ ನಾಲ್ಕು ಬಾರಿ 90 ನಿಮಿಷಗಳ ಅವಧಿಯನ್ನು ಇದಕ್ಕಾಗೆ ಮೀಸಲಿಡಲಾರಂಭಿಸಿದರು.

ಈ ಅಭ್ಯಾಸದ ಪರಿಣಾಮವಾಗಿ ಬೋಪಣ್ಣ ಅವರ ಕಾಲುಗಳು ಮತ್ತು ದೇಹವನ್ನು ಬಲಪಡಿಸಿದ್ದಲ್ಲದೇ, ಮಾನಸಿಕವಾಗಿಯು ಸಾಕಷ್ಟು ಬಲಪಡಿಸಲಾರಂಭಿಸಿತು. ಅಲ್ಲದೇ ಶಾಂತಿಯು ಹೆಚ್ಚಾಯಿತು. ಈ ಶಾಂತಿ, ನೆಮ್ಮದಿಯಿಂದ ಟೆನಿಸ್ ಅಂಕಣದಲ್ಲಿ ಯಾವುದೇ ಭಯ, ಮುಜುಗೊರವಿಲ್ಲದೇ ಆಡಲಾರಂಭಿಸಿದೆ. ಇದರಿಂದ ಮತ್ತೆ ನನಗೆ ಯಶಸ್ಸು ಸಿಕ್ಕಿದೆ. ನಿರಂತರ ಪ್ರಯತ್ನದಿಂದ ಎಂತಹ ಕೆಲಸಗಳು ಸಾಧ್ಯವಾಗುತ್ತದೆ ಎಂದು ಬೋಪಣ್ಣ ಅವರು ಸಂದರ್ಶನವೊಂದಲ್ಲಿ ತಮ್ಮ ಅನಿಸಿಕೆಯನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಅಯ್ಯಂಗಾರ್ ಯಾರು?

ಅಯ್ಯಂಗಾರ್, ಹೀಗೆಂದರೆ ಬಹುಷಃ ಬಹಳಷ್ಟು ಜನರಿಗೆ ತಿಳಿಯಲಿಕ್ಕಿಲ್ಲ. ಅದೇ ಯೋಗದೀಕ್ಷಾ ದುರಂಧರ, ವಿಶ್ವ ಯೋಗಾಚಾರ್ಯ ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್ ಎಂದರೆ ತಕ್ಷಣ ಅರ್ಥವಾಗುತ್ತದೆ. ಭಾರತ ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆ ಎಂದರೆ ಅದು ಯೋಗ. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವ ಈ ಯೋಗ ಪರಂಪರೆಯನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡಲಾಗಿದೆ. ಹೀಗೆ ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡುವಲ್ಲಿ # ಅವರ ಕೊಡುಗೆ ಅಪಾರವಾದದ್ದು.

Iyengar

ಯೋಗ ನಮ್ಮ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಅನೇಕ ಆಟಗಾರರು, ತಾರೆಯರು ಯೋಗದ ಮಹತ್ವವನ್ನು ಅರಿತಿದ್ದಾರೆ. ಈಗ ರೋಹನ್ ಬೋಪಣ್ಣ ಕೂಡ ತಮ್ಮ ಸಾಧನೆಗೆ ಯೋಗ ಕಾರಣ ಎಂದಿದ್ದಾರೆ.

You might also like
Leave A Reply

Your email address will not be published.