ಭಾರತ ಆರ್ಥಿಕತೆ ಮತ್ತು ಧಾರ್ಮಿಕ ಪ್ರವಾಸೋದ್ಯಮ

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ‌ನೇರವೇರಿ ಬಾಲ ರಾಮನು ವಿರಾಜಮಾನನಾದ ಬಳಿಕ ಪ್ರತಿಷ್ಠಾ ದಿನವೇ 5-6 ಲಕ್ಷಜನರು ದರ್ಶನ ಪಡೆದಿದ್ದು, ಈ ವರೆಗೆ ಒಟ್ಟು 19 ಲಕ್ಷ ಜನ ಭಕ್ತರು ಶ್ರೀ ರಾಮನ ದರ್ಶನ ಪಡೆದಿದ್ದಾರೆ ಎಂದು ಸುದ್ದಿ ಸಂಸ್ಥೆಯಾದ Opindia ವರದಿಮಾಡಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಾಣ ಪ್ರತಿಷ್ಠಾನೆ ನೆರವೇರಿಸಿದ ಸಂಧರ್ಭದಲ್ಲಿಯೇ 7000 ಜನ ಅತಿಥಿಗಳು ಅಲ್ಲಿ ಭಾಗವಹಿಸಿ ಬಾಲ ರಾಮನ ದರ್ಶನ‌ ಪಡೆದಿದ್ದು ದೇಶದಾದ್ಯಂತ ದೀಪಾವಳಿಯಂತಹ ಸಂಭ್ರಮ‌ ಮನೆ ಮಾಡಿತ್ತು.

ಈ ವರೆಗೆ ಒಟ್ಟು 19 ಲಕ್ಷ ಜನ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದಿದ್ದು ವರದಿಯೊಂದರ ಪ್ರಕಾರ ದಿನದ ಸರಾಸರಿ 2 ಲಕ್ಷವಾದರೆ ಒಂದು ವರ್ಷದಲ್ಲಿ ಒಟ್ಟು 5 ಕೋಟಿ ಜನ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆಯಂತೆ.

ಇಂದಿಗೂ ಕೂಡಾ ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮವು ದೇಶದ ಆರ್ಥಿಕತೆಯ ಬಹುದೊಡ್ಡ ಭಾಗವಾಗಿದೆ. ‌ಅಯೋಧ್ಯೆ ಈಗ ಈ ಸಾಲಿನಲ್ಲಿ ಸೇರಿದ್ದು ದೇಶದ GDP ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ದೇಶದ GDP ಬೆಳವಣಿಗೆಗೆ ಪ್ರವಾಸೋದ್ಯಮ ಇಲಾಖೆಯೊಂದೇ ಮುಂದಿ‌ನ‌ ಹತ್ತು ವರ್ಷಗಳಲ್ಲಿ (2033) ರ ಹೊತ್ತಿಗೆ ಒಟ್ಟು 443 ಬಿಲಿಯನ್ ಡಾಲರ್ ಎಂದರೆ ₹37 ಲಕ್ಷ ಕೋಟಿಯಷ್ಟು ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ.

Ayodhya

ಅಯೋಧ್ಯೆಗೆ ಬೇಟಿ‌ನೀಡುವ ಭಕ್ತಾದಿಗಳು ಕೇವಲ ಅಯೋಧ್ಯೆ ಮಾತ್ರವಲ್ಲದೆ ಅಲ್ಲಿ ಉಳಿದು ಸುತ್ತ ಮುತ್ತಲಿನ ಜಾಗಗಳಿಗೂ ಭೇಟಿನೀಡಲು ಪ್ರೊತ್ಸಾಹಿಸಲು ಪ್ರಯತ್ನಗಳು ಸಾಗುತ್ತಿದ್ದು ಈಗಾಗಲೇ 17 ಹೋಟೆಲ್‌ಗಳು ಇವೆ. ಭಾರತದ ಪ್ರಮುಖ ಹೋಟೆಲ್ ಕಂಪೆನಿಗಳು ಅಯೋಧ್ಯೆಯಲ್ಲಿ ತಮ್ಮ ಶಾಖೆ ತೆರೆಯಲಿದ್ದು ಈಗಿರುವ ಹೋಟೆಲ್‌ಗಳನ್ನು ಹೊರತು ಪಡಿಸಿ ಒಟ್ಟು 73 ಹೋಟೆಲ್‌ಗಳು ತಲೆ ಎತ್ತಲಿವೆ ಹಾಗೂ ಅದರಲ್ಲಿ 40 ಹೋಟೆಲ್‌ಗಳು ಈಗಾಗಲೇ ನಿರ್ಮಾಣ ಹಂತದಲ್ಲಿವೆ ಎಂದು ಹೇಳಲಾಗುತ್ತದೆ.

You might also like
Leave A Reply

Your email address will not be published.