ನಿತೀಶ್ ಕುಮಾರ್ ಅವರನ್ನು ಕಸಕ್ಕೆ ಹೋಲಿಸಿದ ಲಾಲೂ ಪುತ್ರಿ

ಲಾಲೂ ಪ್ರಸಾದ್ ಅವರ ಪುತ್ರಿ ಹಾಗೂ ಆರ್‌ಜೆಡಿ ನಾಯಕಿ ರೋಹಿಣಿ ಆಚಾರ್ಯ ಅವರು ಮಹಾಘಟಬಂಧನ್ ಮೈತ್ರಿ ತೊರೆದು ಹೋಗಿರುವ ನಿತೀಶ್ ಕುಮಾರ್ ಅವರನ್ನು ಕಸಕ್ಕೆ ಹೋಲಿಸುವ ಮೂಲಕ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಏನದು ಟ್ವೀಟ್?

`ಕಸವು ಮತ್ತೆ ಡಸ್ಟ್‌ಬಿನ್‌ಗೆ ಹೋಗಿದೆ. ಗಬ್ಬು ನಾರುವ ಕಸವನ್ನು ಪಡೆದ ಡಸ್ಟ್‌ಬಿನ್‌ಗೆ ಅಭಿನಂದನೆಗಳು’ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಯೊಂದಿಗೆ ಸಂಬಂಧವನ್ನು ಕಡಿದುಕೊಂಡು ನಿತೀಶ್ ಕುಮಾರ್ ಆರ್‌ಜೆಡಿ ತ್ಯಜಿಸುತ್ತಿದ್ದಂತೆ ರೋಹಿಣಿ ಅವರು ಈ ಪೋಸ್ಟ್ ಮಾಡಿದ್ದಾರೆ.

ಅಲ್ಲದೇ, ಲಾಲೂ ಪ್ರಸಾದ್ ಅವರ ಹಳೆಯ ಪೋಸ್ಟ್‌ನ್ನು ಸಹ ರೋಹಿಣಿಯವರು ಹಂಚಿಕೊಂಡಿದ್ದು, ಈ ಪೋಸ್ಟ್‌ನಲ್ಲಿ `ನಿತೀಶ್ ಒಂದು ಹಾವು, ಹಾವು ಪೊರೆ ಕಳಚಿದಂತೆ, ಅವರು ಸಹ ಎರಡು ವರ್ಷಕ್ಕೊಮ್ಮೆ ಪೊರೆ ಕಳಚುತ್ತಾರೆ. ಈ ಬಗ್ಗೆ ಯಾರಿಗಾದರೂ ಅನುಮಾನವಿದೆಯೇ? ಎಂದು ಬರೆಯಲಾಗಿದೆ.

You might also like
Leave A Reply

Your email address will not be published.