ರಾಜಕೀಯಕ್ಕೆ ಖ್ಯಾತನಟಿ? – ಗೊಂದಲಕ್ಕೆ ಬ್ರೇಕ್ ಹಾಕಿದ ಮಾಧುರಿ ದೀಕ್ಷಿತ್

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳು ಸಾಕಷ್ಟು ನಿರೀಕ್ಷೆಯಡಿ ತಯಾರಿ ಮಾಡಿಕೊಳ್ಳುತ್ತಿವೆ. ಸಿನಿಮಾ, ಕ್ರೀಡೆ ಸೇರಿದಂತೆ ಬೇರೆ ಬೇರೆ ವಲಯಗಳಿಂದಲೂ ಸ್ಪರ್ಧಿಸುತ್ತಿದ್ದು, ಯಾವ ಯಾವ ಕ್ಷೇತ್ರದಿಂದ ಯಾರು ಯಾರು ಸ್ಪರ್ಧಿಸುತ್ತಿದ್ದಾರೆ ಎಂಬ ವಿಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಯಾಗುತ್ತಿದೆ.

ಈ ಚರ್ಚೆಯಡಿ ಮಾಧುರಿ ದೀಕ್ಷಿತ್ ಅವರು ರಾಜಕೀಯ ಪ್ರವೇಶ ಮಾಡಲಿದ್ದು, ಮುಂಬೈನ್ ಒಂದು ಕ್ಷೇತ್ರದಿಂದ ಚುನಾವಣೆಯ ಕಣಕಿಳಿಯಲಿದ್ದಾರೆ ಎಂಬ ಚರ್ಚೆಯು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿತ್ತು.

Madhuri Dixit

ಈ ಕುರಿತು ನಟಿ ಮಾಧುರಿ ದೀಕ್ಷಿತ್ ಅವರೇ ಖುದ್ದಾಗಿ ಮಾತನಾಡಿದ್ದು, ರಾಜಕೀಯವಾಗಿ ನನ್ನನ್ನು ತೊಡಗಿಸಿಕೊಳ್ಳುವಲ್ಲಿ ಇಷ್ಟ ಇಲ್ಲ. ನನ್ನ ಫ್ಯಾಷನ್ ಅಲ್ಲ. ಸಿನಿಮಾ ರಂಗದಲ್ಲೇ ಮುಂದುವರಿಯಲು ಇಷ್ಟಪಡುತ್ತೇನೆ. ಸಧ್ಯ ನನ್ನ ನೂತನ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗದ್ದೇನೆ. ಹೊಸ ವರ್ಷದಲ್ಲಿ ಅಂದರೆ ಜನವರಿ 5 ರಂದು ನನ್ನ ನಟನೆಯ ನೂತನ ಸಿನಿಮಾ ‘ಪಂಚಕ್’ ತೆರೆಕಾಣಲಿದ್ದು, ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಈ ಸಿನಿಮಾ ಯಶಸ್ಸು ಕಂಡರೆ ಹೊಸ ವರ್ಷದಲ್ಲಿ ಮತ್ತಷ್ಟು ಸಿನಿಮಾ ಮಾಡಲು ಪ್ರೇರಣೆಯಾಗುತ್ತದೆ ಎಂದು ತಿಳಿಸಿದ್ದಾರೆ.

You might also like
Leave A Reply

Your email address will not be published.