ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪ್ರಿಯಾಂಕ ಗಾಂಧಿ ಭಾಗಿ – ಇಡಿ

ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರ ಹೆಸರನ್ನು ಚಾರ್ಜ್ ಶೀಟ್’ನಲ್ಲಿ ಉಲ್ಲೇಖಿಸಿದೆ. ಫರಿದಾಬಾದ್’ನ ಅಮಿಪುರ ಗ್ರಾಮದ ಕೃಷಿ ಭೂಮಿ ಖರೀದಿಸುವಲ್ಲಿ ಪ್ರಿಯಾಂಕ ಗಾಂಧಿ ಅವರ ಪಾತ್ರವಿದೆ ಎಂದು ಈ ಮೂಲಕ ಆರೋಪಿಸಲಾಗಿದೆ. ಏನದು ಪ್ರಕರಣ?

ಹರಿಯಾಣದ ಫರಿದಾಬಾದ್’ನ ಅಮಿಪುರ ಗ್ರಾಮದಲ್ಲಿ ಪ್ರಿಯಾಂಕ ಅವರ ಪತಿ ರಾಬರ್ಟ್ ವಾದ್ರಾ ಅವರು 2005-06 ರ ನಡುವೆ 334 ಕನಾಲ್ (40.8 ಎಕರೆ) ಅಳತೆಯ ಮೂರು ತುಂಡು ಭೂಮಿಯನ್ನು ನವದೆಹಲಿ ಮೂಲದ ರಿಯಲ್ ಎಸ್ಟೆಂಟ್ ಏಜೆಂಟ್ ಪಹ್ವಾ ಅವರಿಂದ ಖರೀದಿಸಿ ಅದೇ ಭೂಮಿಯನ್ನು ಡಿಸೆಂಬರ್ 2010 ರಲ್ಲಿ ಪುನಃ ಅವರಿಗೆ ಮಾರಾಟ ಮಾಡಿದ್ದಾರೆ.

ಇದಾದ ಬಳಿಕ, ಪಹ್ವಾ ಅವರು ಎನ್.ಆರ್.ಐ ಉದ್ಯಮಿ ಹಾಗೂ ವಾದ್ರಾ ಅವರ ಆಪ್ತರಾದ ಸಿಸಿ ಥಂಪಿ ಮತ್ತು ರಾಬಾರ್ಟ್ ವಾದ್ರಾ ಅವರಿಗೆ ಇದೇ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಆದರೆ, ವಾದ್ರಾ ಅವರು ಪಹ್ವಾಗೆ ಸಂಪೂರ್ಣ ಮಾರಾಟದ ಹಣವನ್ನು ಪಾವತಿಸದೇ, ಬೇನಾಮಿ ಹಣ ನೀಡಲಾಗಿದೆ ಎಂದು ಇಡಿ ತಿಳಿಸಿದೆ.

ಈ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಲಂಡನ್ ಮೂಲದ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಅವರು ಒಳಗೊಂಡಿದ್ದು, 2016 ರಲ್ಲಿ ಭಾರತದಿಂದ ಯುಕೆಗೆ ಪಲಾಯನ ಮಾಡಿದ್ದಾರೆ. ಒಟ್ಟಾರೆಯಾಗಿ ಈ ಪ್ರಕರಣವು ಮನಿ ಲಾಂಡರಿಂಗ್, ವಿದೇಶಿ ವಿನಿಮಯ ಮತ್ತು ಕಪ್ಪು ಹಣದ ಕಾನೂನುಗಳ ಉಲ್ಲಂಘನೆ ಮತ್ತು ಅಧಿಕೃತ ರಹಸ್ಯ ಕಾಯಿದೆಯಡಿ ತನಿಖೆ ನಡೆಯುತ್ತಿದೆ.

ed department

ಹೊಸ ಆರೋಪಪಟ್ಟಿಯಲ್ಲಿ, ಪಹ್ವಾ ಅವರು ಭೂ ಸ್ವಾಧೀನದ ಉದ್ದೇಶಕ್ಕಾಗಿ ಹಣವನ್ನು ಪಡೆಯುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ಈ ಭೂಮಿ ಮಾರಾಟದಲ್ಲಿ ಪ್ರಿಯಾಂಕ ಗಾಂಧಿ ಅವರು ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದ್ದು, ಈ ಪ್ರಕರಣದಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಲಾಗಿಲ್ಲ.

You might also like
Leave A Reply

Your email address will not be published.