ವಿದ್ಯಾರ್ಥಿಗಳೇ ಎಚ್ಚರ : ಯುಜಿಸಿ ರದ್ದುಗೊಳಿಸಿದ ಈ ಕೋರ್ಸ್ʼಗೆ ನೀವೂ ಪ್ರವೇಶ ಪಡೆದಿದ್ದೀರಾ?

2023-24ನೇ ಸಾಲಿನಲ್ಲಿ ಎಂ.ಫಿಲ್ ಪದವಿಗೆ (MPhil) ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನಸಹಾಯ (UGC) ಆಯೋಗ ಎಚ್ಚರಿಕೆ ನೀಡಿದ್ದು, ಈ ಪದವಿಗೆ ಪ್ರವೇಶ ಪಡೆಯದಂತೆ ಸೂಚನೆ ನೀಡಿದೆ.

ಈ ಹಿಂದೆಯೇ ಎಂ.ಫಿಲ್ ಪದವಿಯ (MPhil) ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿದ್ದರೂ, ವಿವಿಧ ವಿಶ್ವವಿದ್ಯಾಲಯಗಳು ಎಂ.ಫಿಲ್ ಪದವಿಗೆ ಅರ್ಜಿ ಆಹ್ವಾನಿಸಿದ ಹಿನ್ನೆಲೆಯಲ್ಲಿ ಈ ಸೂಚನೆಯನ್ನು ನೀಡಲಾಗಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ವು (ಪಿಎಚ್‌ಡಿ ಪದವಿ ನೀಡುವ ಕನಿಷ್ಠ ಮಾನದಂಡಗಳು ಮತ್ತು ಕಾರ್ಯವಿಧಾನಗಳು) ನಿಯಮಾವಳಿಗಳು 2022 ಅನ್ನು ರೂಪಿಸಿದ್ದು, ಇದನ್ನು ನವೆಂಬರ್ 7, 2022 ರಂದು ಭಾರತದ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಗೆಜೆಟ್‌ʼನಲ್ಲಿ ವಿಶ್ವವಿದ್ಯಾನಿಲಯಗಳು 2023-24 ಶೈಕ್ಷಣಿಕ ವರ್ಷಕ್ಕೆ ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶವನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಲಾಗಿತ್ತು. ಇದಲ್ಲದೆ, ವಿದ್ಯಾರ್ಥಿಗಳು ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯದಂತೆ ಸೂಚಿಸಲಾಗಿತ್ತು.

UGC and M.Phil

ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ನೀಡಲಾಗುವ ಎಂಫಿಲ್ ಪದವಿ ಕೋರ್ಸ್ ಇನ್ನು ಮುಂದೆ ಕಾನೂನು ಬದ್ಧವಾಗಿರುವುದಿಲ್ಲ ಎಂಬ ಆಯೋಗದ ಸೂಚನೆಯನ್ನೂ ಮೀರಿ, ಹಲವು ವಿಶ್ವವಿದ್ಯಾಲಯಗಳ ಎಂ.ಫಿಲ್‌ ಪದವಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದ್ದರು. ಈ ಬೆನ್ನಲ್ಲೇ, ಮತ್ತೊಮ್ಮೆ ನೋಟಿಫಿಕೇಶನ್‌ ಮೂಲಕ ಸೂಚನೆ ನೀಡಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ವಿಶ್ವವಿದ್ಯಾಲಯಗಳ ಅಧಿಕಾರಿಗಳು 2023-24 ಶೈಕ್ಷಣಿಕ ವರ್ಷಕ್ಕೆ ಎಂಫಿಲ್ (MPhil) ಕಾರ್ಯಕ್ರಮಕ್ಕೆ ಪ್ರವೇಶವನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು, ವಿದ್ಯಾರ್ಥಿಗಳು ಸಹಿತ ಈ ಪದವಿಗೆ ಪ್ರವೇಶ ಪಡೆಯಬಾರದು ಎಂದು ಸೂಚಿಸಿದೆ.

 

You might also like
Leave A Reply

Your email address will not be published.