ಇಂದು ದೇಶಾದ್ಯಂತ 702 ಕೋವಿಡ್ ಪ್ರಕರಣಗಳು ದಾಖಲು; 6 ಬಲಿ

ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ನಮ್ಮೊಟ್ಟಿಗೆ ಯಾರು ಬರ್ತರೋ ಇಲ್ವೋ ಗೊತ್ತಿಲ್ಲ. ಆದರೆ, ಕೋವಿಡ್ ನ ಹೊಸ ರೂಪತಳಿ ಜೆ.ಎನ್.1 ಮಾತ್ರ ಹೊಸವರ್ಷಕ್ಕೂ ಮುನ್ನವೇ ನಮ್ಮ ಬೆನ್ನಟ್ಟಿದೆ!

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 702 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,097ಕ್ಕೆ ಏರಿಕೆಯಾಗಿದೆ. ಇನ್ನೂ 6 ಜನರು ಕೊರೊನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು (ಗುರುವಾರ) ಬೆಳಿಗ್ಗೆ 8 ಗಂಟೆಗೆ ಮಾಹಿತಿ ನೀಡಿದೆ.

ಮೃತಪಟ್ಟವರ ಪೈಕಿ ಮಹಾರಾಷ್ಟ್ರದಲ್ಲಿ ಇಬ್ಬರು ಹಾಗೂ ದೆಹಲಿ, ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಬ್ಬರು ಕೋವಿಡ್ ಗೆ ಬಲಿಯಾಗಿದ್ದಾರೆ.

You might also like
Leave A Reply

Your email address will not be published.