ಆರ್.ಸಿ.ಬಿ ದಾಖಲೆ ಪುಡಿಗಟ್ಟಿದ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡ : ನವ ದಾಖಲೆ ಸೃಷ್ಠಿ

ಮುಂಬೈ ಇಂಡಿಯನ್ಸ್ ವಿರುದ್ಧ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊಸ ದಾಖಲೆ ಬರೆದಿದೆ. ತನ್ನ ಪಾಲಿನ 20 ಓವರ್ ಗಳಿಗೆ ಎಸ್.ಆರ್.ಎಚ್ 3 ವಿಕೆಟ್ ಕಳೆದುಕೊಂಡು 277 ರನ್ ಹೊಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆಯನ್ನು ಎಸ್.ಆರ್.ಎಚ್ ಮುರಿದಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡುವಂತಾದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್ ಮ್ಯಾನ್ ಗಳು ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ ನೆರೆದಿದ್ದ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು. 18 ಎಸೆತಗಳಲ್ಲಿ ಟ್ರಾವಿಸ್ ಹೆಡ್ (62) ಅರ್ಧಶತಕ ಸಿಡಿಸಿದರೆ, ಅಭಿಷೇಕ್ ಶರ್ಮಾ (63) ಕೇವಲ 16 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ನಂತರ 34 ಎಸೆತಗಳಲ್ಲಿ ಅಜೇಯ 80 ರನ್ ಗಳನ್ನು ಸಿಡಿಸಿದರು.

ಆರ್.ಸಿ.ಬಿ ದಾಖಲೆ ಮುರಿದ ಎಸ್.ಆರ್.ಎಚ್

ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ಗರಿಷ್ಠ ಮೊತ್ತ ಕಲೆ ಹಾಕಿದ ತಂಡ ಎಂಬ ದಾಖಲೆಯನ್ನು ಸನ್ ರೈಸರ್ಸ್ ಹೈದರಾಬಾದ್ ಬರೆಯಿತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಔಟಾಗದೇ 175 ರನ್ ಚಚ್ಚಿದ್ದರು. ಇನ್ನೂ ಹೈದರಾಬಾದ್ ತಂಡ 20 ಓವರ್ ಗಳಿಗೆ 277 ರನ್ ಗಳನ್ನು ಗಳಿಸಿದೆ. ಒಟ್ಟಾರೆಯಾಗಿ ಆರ್.ಸಿ.ಬಿ ಇದೀಗ 2ನೇ ಸ್ಥಾನಕ್ಕೆ ಇಳಿದಿದೆ ಹಾಗೂ ನಾಲ್ಕನೇ ಸ್ಥಾನದಲ್ಲಿಯೂ ಆರ್.ಸಿ.ಬಿ ಇದೆ.

ಶತಕದ ಜೊತೆಯಾಟ:

ಮಾಕ್ರಮ್ ಮತ್ತು ಹೆನ್ರಿಕ್ ಕ್ಲಾಸನ್ ಮುಂಬೈ ಬೌಲರ್ಗಳನ್ನು ಅಕ್ಷರಶ: ಚೆಂಡಾಡಿದರು. ಸಿಕ್ಸ್, ಬೌಂಡರಿ ಹೊಡೆದು ಬೆವರಿಳಿಸಿದರು. ಇಬ್ಬರು ಮುರಿಯದ ನಾಲ್ಕನೇ ವಿಕೆಟಿಗೆ 55 ಎಸೆತಗಳಲ್ಲಿ 116 ರನ್ ಹೊಡೆದು ತಂಡದ ಮೊತ್ತವನ್ನು 270 ರನ್ಗಳ ಗಡಿಯನ್ನು ದಾಟಿಸಿದರು. ಕ್ಲಾಸನ್ ಔಟಾಗದೇ 80 ರನ್ ( 34 ಎಸೆತ, 4 ಬೌಂಡರಿ, 7 ಸಿಕ್ಸರ್), ಮಾರ್ಕ್ರಾಮ್ ಔಟಾಗದೇ 42 ರನ್ ( 28 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರು.

ಸ್ಫೋಟಕ ಅರ್ಧಶತಕ:

ಟ್ರಾವಿಸ್ ಹೆಡ್ – 18 ಎಸೆತ, 9 ಬೌಂಡರಿ, 2 ಸಿಕ್ಸರ್
ಅಭಿಷೇಕ್ ಶರ್ಮಾ – 16 ಎಸೆತ, 2 ಬೌಂಡರಿ, 6 ಸಿಕ್ಸರ್
ಹೆನ್ರಿಕ್ ಕ್ಲಾಸನ್ – 23 ಎಸೆತ,1 ಬೌಂಡರಿ, 5 ಸಿಕ್ಸರ್

ರನ್ ಏರಿದ್ದು ಹೇಗೆ?

50 ರನ್ – 28 ಎಸೆತ
100 ರನ್ – 43 ಎಸೆತ
150 ರನ್ – 63 ಎಸೆತ
200 ರನ್ – 90 ಎಸೆತ
250 ರನ್ – 114 ಎಸೆತ
277 ರನ್ – 120 ಎಸೆತ

ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ಕಲೆ ಹಾಕಿದ ತಂಡಗಳು

1. ಸನ್ರೈಸರ್ಸ್ ಹೈದರಾಬಾದ್ 277/3 vs ಮುಂಬೈ ಇಂಡಿಯನ್ಸ್ (2024)
2. ರಾಯಲ್ ಚಾಲೆಂಜರ್ಸ್ ಬೆಂಗಳೂರು 263/5 vs ಪುಣೆ ವಾರಿಯರ್ಸ್ ಇಂಡಿಯಾ (2013)
3. ಲಖನೌ ಸೂಪರ್ ಜಯಂಟ್ಸ್ 256/5 vs ಪಂಜಾಬ್ ಕಿಂಗ್ಸ್ (2023)
4. ರಾಯಲ್ ಚಾಲೆಂಜರ್ಸ್ ಬೆಂಗಳೂರು 248/5 vs ಗುಜರಾತ್ ಲಯನ್ಸ್ (2016)
5. ಚೆನ್ನೈ ಸೂಪರ್ ಕಿಂಗ್ಸ್ 246/5 vs ರಾಜಸ್ಥಾನ್ ರಾಯಲ್ಸ್ (2010)
6. ಕೋಲ್ಕತಾ ನೈಟ್ ರೈಡರ್ಸ್ 245/6 vs ಕಿಂಗ್ಸ್ ಇಲೆವೆನ್ ಪಂಜಾಬ್ (2018)
7. ಚೆನ್ನೈ ಸೂಪರ್ ಕಿಂಗ್ಸ್ 240/5 vs ಕಿಂಗ್ಸ್ ಇಲೆವೆನ್ ಪಂಜಾಬ್ (2008)
8. ಚೆನ್ನೈ ಸೂಪರ್ ಕಿಂಗ್ಸ್ 235/4 vs ಕೋಲ್ಕತಾ ನೈಟ್ ರೈಡರ್ಸ್ (2023)‌

You might also like
Leave A Reply

Your email address will not be published.