ನರೇಗಾ ಕಾರ್ಮಿಕರಿಗೆ ಗುಡ್ ನ್ಯೂಸ್ – ನರೇಗಾ ಕೂಲಿ ಹೆಚ್ಚಳ

ಕೇಂದ್ರ ಸರ್ಕಾರವು ಬೇಸಿಗೆಯ ಈ ಸಮಯದಲ್ಲೀ ನರೇಗಾ ಕಾಮಗಾರಿಗಳು ಆರಂಭವಾಗುವ ಮುನ್ನವೇ ದಿನಗೂಲಿ ದರವನ್ನು ಹೆಚ್ಚಳ ಮಾಡುವ ಮೂಲಕ ಮನ್ರೇಗಾ ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದೆ.

ಈ ಬಿರು ಬೇಸಿಗೆಯಲ್ಲಿ ಲೋಕಸಭಾ ಚುನಾವಣೆಯ ಕಾವಿನ ಜೊತೆಗೆ ಬರಗಾಲದಿಂದ ಪರಿತಪಿಸುತ್ತಿರುವ ಜನ ಗುಳೆ ಹೋಗುವುದೂ ಹೆಚ್ಚಳವಾಗಿದೆ. ಗ್ರಾಮಾಂತರದ ಜನತೆಗೆ ಉದ್ಯೋಗ ಖಾತ್ರಿಯೇ ಆಶ್ರಯದಾತ. ಈ ನಿಟ್ಟಿನಲ್ಲಿ ಮತ್ತಷ್ಟು ಜಾಗ್ರತೆ ವಹಿಸಿರುವ ಕೇಂದ್ರ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ಜನತೆ ಗುಳೆಹೋಗುವುದನ್ನು ತಪ್ಪಿಸಬೇಕು ಹಾಗೂ ಜನತೆ ಉದ್ಯೋಗ ಕಲ್ಪಿಸಿ ಬರಗಾಲದಲ್ಲಿ ನೆರವಾಗಬೇಕೆಂಬ ಉದ್ದೇಶದಿಂದ ನರೇಗಾದ ದಿನಗೂಲಿ ದರವನ್ನು ಹೆಚ್ಚಿಸಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಉ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪರಿಷ್ಕೃತ ವೇತನ ದರವನ್ನು ಕೇಂದ್ರ ಸರ್ಕಾರವು ಇಂದು ಬಿಡುಗಡೆ ಮಾಡಿದ್ದು, ಹಲವಾರು ರಾಜ್ಯಗಳು ವೇತನವನ್ನು ಶೇ. 8 ರಿಂದ 10 ರಷ್ಟು ಹೆಚ್ಚಿಸಿದ್ದರೆ, ಕೇಂದ್ರ ಸರ್ಕಾರವು ಶೇ.3 ರಿಂದ 10 ರಷ್ಟು ಹೆಚ್ಚಿಸಿದೆ.

Mgnrega Wages Hike

ಈ ನೂತನ ದಿನಗೂಲಿ ದರವು ಇದೇ ಏಪ್ರಿಲ್ 1 ರಿಂದ ಅನ್ವಯವಾಗಲಿದೆ. ದೇಶದಲ್ಲಿಯೇ ಗೋವಾ, ಹರಿಯಾಣ, ಸಿಕ್ಕಿಂ ರಾಜ್ಯಗಳ ಹೊರತಾಗಿ ಕರ್ನಾಟಕದಲ್ಲಿಯೇ ಅತಿ ಹೆಚ್ಚಿನ ವೇತನ ಪಾವತಿ ಮಾಡಲಾಗುತ್ತಿದೆ. ಕೇಂದ್ರದ ನೂತನ ಅಧಿಸೂಚನೆಯ ಪ್ರಕಾರ ರಾಜ್ಯದ ನರೇಗಾ ದಿನಗೂಲಿ ರೂ.349.

ಅತಿ ಹೆಚ್ಚು ದಿನಗೂಲಿ ನೀಡುವ ರಾಜ್ಯಗಳು :
ಹರಿಯಾಣ – ರೂ.376
ಗೋವಾ – ರೂ.356
ಕರ್ನಾಟಕ – ರೂ.349
ಅಂಡಮಾನ್ ನಿಕೋಬಾರ್ – ರೂ.347 ಹಾಗೂ ರೂ.329
ಕೇರಳ – ರೂ. 349
ದಾದ್ರಾ ಮತ್ತು ನಗರ್ ಹವೇಲಿ – 324
ಪಂಜಾಬ್ – ರೂ.322
ತಮಿಳುನಾಡು – ರೂ.319
ಪುದುಚೆರಿ – ರೂ.319
ಲಕ್ಷದ್ವೀಪ – ರೂ.315

ಕಡಿಮೆ ದಿನಗೂಲಿ ಪಡೆಯುವ ರಾಜ್ಯಗಳು :
ಅರುಣಾಚಲ ಪ್ರದೇಶ – ರೂ.234
ನಾಗಾಲ್ಯಾಂಡ್ – ರೂ.234
ಉತ್ತರ ಪ್ರದೇಶ – ರೂ.237
ಉತ್ತರಾಖಾಂಡ್ – ರೂ.237
ತ್ರಿಪುರ – ರೂ.242
ಛತ್ತೀಸ್ ಘಡ್ – ರೂ.243
ಬಿಹಾರ್ – ರೂ.245
ಜಾರ್ಖಾಂಡ್ – ರೂ.245
ಅಸ್ಸಾಂ – ರೂ.249
ಪಶ್ಚಿಮ ಬಂಗಾಳ – ರೂ.250

You might also like
Leave A Reply

Your email address will not be published.