ಕೆಎಸ್‌ʼಆರ್‌ʼಟಿಸಿ ನೌಕರರಿಗೆ ಗುಡ್‌ ನ್ಯೂಸ್‌ – ಡಬಲ್‌ ಡ್ಯೂಟಿಯಿಂದ ಮುಕ್ತಿ!

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಇಂದಿನಿಂದಲೇ ಅಂದರೆ ಮಾರ್ಚ್ 28ರಿಂದ ಜಾರಿಯಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಹೌದು! ಕೆಎಸ್.ಆರ್.ಟಿ.ಸಿ ನೌಕರರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡಿದ್ದು, ಇಂದು ರಾತ್ರಿ ಮತ್ತು ದೂರ ಪ್ರಯಾಣದಲ್ಲಿ ವಿಶ್ರಾಂತಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಕೆಲಸದ ಅವಧಿ ದಿನದಲ್ಲಿ 8 ಗಂಟೆ, ವಾರದಲ್ಲಿ 48 ಗಂಟೆ ಮೀರದಂತೆ ಸೂಚಿಸಿದೆ.

ಇತ್ತೀಚಿನ ದಿನಗಳಲ್ಲಿ ಬಸ್ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪಘಾತಕ್ಕೆ ಕಾರಣ ತಿಳಿಯಲು ಕೆಎಸ್.ಆರ್.ಟಿ.ಸಿ ಪ್ರತ್ಯೇಕ ಸಮಿತಿ ಮೂಲಕ ತನಿಖೆ ನಡೆಸಿತ್ತು. ಇದಕ್ಕೆ ಕಾರಣಗಳನ್ನು ಹುಡುಕಿದಾಗ ಡಬಲ್ ಡ್ಯೂಟಿ ಮತ್ತು ರಾತ್ರಿ ವೇಳೆ ವಿಶ್ರಾಂತಿ ನೀಡದಿರುವುದೇ ಕಾರಣ ಅನ್ನೋದು ತಿಳಿದುಬಂದಿತು. ಸರಿಯಾಗಿ ನಿದ್ರೆ ಇಲ್ಲದೇ, ಬಸ್ ಚಾಲನೆ ಮಾಡಲು ಸಾಧ್ಯವಾಗದೇ, ಅಪಘಾತಗಳು ಸಂಭವಿಸುತ್ತಿವೆ ಎಂದು ಸಮಿತಿ ನೀಡಿದ ವರದಿಯಲ್ಲಿ ತಿಳಿದುಬಂದಿತು ಎಂದು ಸಾರಿಗೆ ನಿಗಮ ತಿಳಿಸಿದೆ. ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ತನ್ನ ನೌಕರರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡಿದೆ ಎಂದು ಹೇಳಿದೆ.

Good news for KSRTC employees - freedom from double duty!

ಕೆಎಸ್ಆರ್ಟಿಸಿ ಆದೇಶದಲ್ಲಿ ಏನಿದೆ?

* ಕೆಎಸ್ಆರ್‌ʼಟಿಸಿ ಡ್ರೈವರ್ಗಳಿಗೆ ವಿಶ್ರಾಂತಿ ಕಡ್ಡಾಯ
* ಇಂದಿನಿಂದ ಡಬಲ್ ಡ್ಯೂಟಿ ಮಾಡಿಸುವಂತಿಲ್ಲ
* ದಿನದಲ್ಲಿ 8 ಗಂಟೆಗಿಂತ ಹೆಚ್ಚು ಕರ್ತವ್ಯ ಮಾಡಿಸುವಂತಿಲ್ಲ
* 8 ಗಂಟೆ ಮತ್ತು ರಾತ್ರಿ ವೇಳೆಯಲ್ಲಿ ಹೆಚ್ಚು ಡ್ಯೂಟಿ ಮಾಡಿದರೆ, ಅಂತಹ ಡ್ರೈವರ್ಗಳಿಗೆ ನಿದ್ರೆ ಮತ್ತು ವಿಶ್ರಾಂತಿ ಮಾಡಲು 4-5 ಗಂಟೆ ಅವಕಾಶ ನೀಡಬೇಕು.
* ಇದರಿಂದ ಕೆಎಸ್ಆರ್‌ʼಟಿಸಿ ಬಸ್ʼಗಳ ಅಪಘಾತಗಳು ತಪ್ಪುತ್ತದೆ.

You might also like
Leave A Reply

Your email address will not be published.