ಅಂಬಾನಿ ಪುತ್ರನ ಮದುವೆಗಾಗಿ ಧರೆಗಿಳಿದು ಬಂತು ಕೈಲಾಸ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವದ ಆಚರಣೆಗಾಗಿ ಗುಜರಾತ್‌ನ ಜಾಮ್ ನಗರ ಸಂಪೂರ್ಣವಾಗಿ ಸಿದ್ಧಗೊಂಡಿದೆ.

ಜಾಮ್‌ ನಗರದಲ್ಲಿ 14 ದೇವಾಲಯಗಳನ್ನು ಒಳಗೊಂಡ ಬೃಹತ್‌ ದೇವಾಲಯಗಳ ಸಂಕೀರ್ಣವನ್ನು ನಿರ್ಮಿಸಲಾಗಿದ್ದು ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿನಿಧಿಸುತ್ತಿದೆ. ಈ ಸಂಕೀರ್ಣದಲ್ಲಿ ಭಾರತೀಯ ಇತಿಹಾಸ ಹಾಗೂ ಪರಂಪರೆಯನ್ನು ಸಾರುವ ವರ್ಣಚಿತ್ರಗಳು ಇರಲಿವೆ. ಈ ಸಂಕೀರ್ಣ ನಿರ್ಮಾಣದ ಯೋಜನೆ ನೀತಾ ಅಂಬಾನಿಯವರದ್ದು ಎಂದು ತಿಳಿದುಬಂದಿದೆ.

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ಈ ಯೋಜನೆಯಿಂದಾಗಿ ಸ್ಥಳಿಯ ಕುಶಲಕರ್ಮಿಗಳು ಮತ್ತು ಶಿಲ್ಪಿಗಳ ಪ್ರತಿಭಾ ಪ್ರದರ್ಶನಕ್ಕೂ ಇದು ವೇದಿಕೆಯಾಗಿದ್ದು, ಸಂಪೂರ್ಣ ದೇಗುಲದ ಸಂಕೀರ್ಣವು ಪ್ರಾಚೀನ ಭಾರತದ ಆಧ್ಯಾತ್ಮಿಕ ಸಾರ ಮತ್ತು ವಾಸ್ತುಶಿಲ್ಪದ ವೈಭವವನ್ನು ಪ್ರತಿನಿಧಿಸಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಈ ಬಗ್ಗೆ ರಿಲಯನ್ಸ್ ಫೌಂಡೇಶನ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಈ ವಿಡಿಯೋದಲ್ಲಿ ನೀತಾ ಅಂಬಾನಿಯವರು ಅಲ್ಲಿನ ಕೆಲಸಗಾರರೊಂದಿಗೆ ಅವರ ಪ್ರಯತ್ನಗಳಿಗೆ ಪ್ರೇರಣೆ ನೀಡುತ್ತಾ ಉತ್ಸಾಹದಿಂದ ಮಾತನಾಡುತ್ತಿರುವುದು ಹಾಗೂ ಕೆಲಸಗಾರರು ಮತ್ತು ಭಕ್ತರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸುತ್ತಿರುವು ದೃಶ್ಯಗಳಿವೆ.

ಗುಜರಾತ್‌ನ ಜಾಮ್ ನಗರದಲ್ಲಿ ನಡೆಯಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಹಾಲಿವುಡ್ ಪ್ರತಿಭೆ ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಇತರ ಪ್ರತಿಭೆಗಳು ಪ್ರದರ್ಶನ ನೀಡಲಿದ್ದಾರೆ.

You might also like
Leave A Reply

Your email address will not be published.