ಭಾರತದ ಆಧಾರ್‌, ಚೀನಾ ಹಾಗೂ ಅಮೇರಿಕಾದ ಮಿಲಿಟಲಿ ಡೇಟಾ ಮಾರಾಟ : 21 ವರ್ಷದ ಯುವಕನ ಬಂಧನ

ಭಾರತ, ಚೀನಾ, ಅಮೇರಿಕಾ ಮತ್ತು ಉಕ್ರೈನ್ ನಾಲ್ಕು ದೇಶಗಳಿಗೆ ಸಂಭಂಧಿಸಿದ ಮಿಲಿಟರಿ, ಪೋಲಿಸ್, ಜನರ ಆಧಾರ್, ಬ್ಯಾಂಕ್ ಖಾತೆ ಮಾಹಿತಿಯ 4500 GB ಡೇಟಾವನ್ನು ಸಂಗ್ರಹಿಸಿ ಅದನ್ನು ಬೇರೆಯವರಿಗೆ ಮಾರಾಟ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಶ್ರೀಗಂಗಾನಗರದ 21 ವರ್ಷದ ಯುವಕ ಅಮಿತ್ ಚಾಂದ್‌ನನ್ನು ಅಲ್ಲಿನ ಪೋಲಿಸರು ಬಂಧಿಸಿದ್ದಾರೆ. ಬಂಧಿಸಿದ ಯುವಕನಿಂದ ಕೇವಲ ಈ ನಾಲ್ಕು ದೇಶಗಳಿಗೆ ಸಂಭಂಧಿಸಿದ ಮಾಹಿತಿ ಮಾತ್ರವಲ್ಲದೆ ಡಾರ್ಕ್ ವೆಬ್‌ನಿಂದ ಇಸ್ಲಾಮಿಕ್ ಸ್ಟೇಟ್ಸ್ ಮತ್ತು ತಾಲಿಬಾನ್‌ಗೆ ಸೇರಿದ ಮಾಹಿತಿಯನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.

ಕಳೆದ ಶನಿವಾರ ಬಂದ ಮಾಹಿತಿಯನ್ನು ಆಧರಿಸಿ IB ಇನ್ಫಾರ್ಮೇಶನ್ ಬ್ಯೂರೋ ತಂಡವು ಯುವಕನ ಮನೆ ಮೇಲೆ ದಾಳಿ ಮಾಡಿದ್ದು ಯುವಕನಿಂದ 4500 ಜಿಬಿ ಡೇಟಾ ವಶಪಡಿಸಿಕೊಂಡಿದೆ. ಈತ ಸರ್ಕಾರಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಈತನ ತಂದೆ ನಸೀಬ್ ಚಾಂದ್ ದುಬೈ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವನ ಯಾವುದೇ ಚಟುವಟಿಕೆಗಳ ಬಗ್ಗೆ ಮನೆಯವರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಆರೋಪಿಯು ತನ್ನ ಮನೆಯಿಂದಲೇ ಈ ಎಲ್ಲಾ ಜಾಲಗಳನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿಯು ಯೂಟ್ಯೂಬ್ ‌ಗಳನ್ನು ನೋಡಿ ಆನ್‍ಲೈನ್ ಗೇಮಿಂಗ್‌ಗಳನ್ನು ನೋಡಿ ಹ್ಯಾಕ್ ಮಾಡುವ ಪ್ರಕ್ರಿಯೆಗಳನ್ನು ಕಲಿತಿದ್ದು ದಾಳಿಯ ವೇಳೆ ಈತನ ಕೊಠಡಿಯಿಂದ ಮೂರು ಮೊಬೈಲ್ ಫೋನ್‌ಗಳು, ಒಂದು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್, ಎರಡು ಪೆನ್‌ಡ್ರೈವ್, ಐದು ಹಾರ್ಡ್ ಡಿಸ್ಕ್, ನಾಲ್ಕು SSD ಗಳು ಹಾಗೂ 23,300 ರೂ ಗಳನ್ನು ವಶಪಡಿಸಿಕೊಂಡಿದ್ದಾರೆ. ಆತನಿಂದ ವಶಪಡಿಸಿಕೊಂಡ ಸಾಧನಗಳಿಂದ ಡೇಟಾವನ್ನು ವಿಶ್ಲೇಷಿಸಿ ತನಿಖೆ‌ಗೆ ಮುಂದಾಗಿದ್ದಾರೆ.‌

ಆರೋಪಿಯು ಯೂಟ್ಯೂಬ್‌ನಲ್ಲಿ ಹ್ಯಾಕಿಂಗ್ ತಂತ್ರಗಾರಿಕೆಯನ್ನು ಕಲಿತು ಡಾರ್ಕ್ ವೆಬ್‌ನಲ್ಲಿ ಗೌಪ್ಯ ಡೇಟಾವನ್ನು ಖರೀದಿಸಲು ಬಳಸುತ್ತಿದ್ದನು, ನಂತರ ಅವನು ತನ್ನ ಮೂರು ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಮಾರಾಟ ಮಾಡುತ್ತಿದ್ದ. ಆರೋಪಿಯು ಕದ್ದ ಡೇಟಾಗೆ ಬದಲಾಗಿ ತನ್ನ ಗ್ರಾಹಕರಿಂದ ಕ್ರಿಪ್ಟೋಕರೆನ್ಸಿಯಲ್ಲಿ ಪೇಮೆಂಟ್ ‌ಗಳನ್ನು ಸ್ವೀಕರಿಸಿದ್ದು, ಸೈಬರ್ ತನಿಖೆಯ ಸಮಯದಲ್ಲಿ ಆರೋಪಿಯ ಡೆಸ್ಕ್‌ಟಾಪ್‌ನಲ್ಲಿ ಆಧಾರ್ ಕಾರ್ಡ್ ಡೇಟಾ, ಪ್ಯಾನ್ ಕಾರ್ಡ್ ಡೇಟಾ, ಇಂಡಿಯನ್ ಮಹೀಂದ್ರ, ಕೊಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಯುಎಸ್‌ಎ ಸಿಟಿಜನ್, ಉಕ್ರೇನ್, ಮಣಿಪುರ ಪೊಲೀಸ್, ಯುಎಸ್ ಆರ್ಮಿ ಮತ್ತು ಭಾರತ ಸರ್ಕಾರಕ್ಕೆ ಸಂಬಂಧಿಸಿದ ಇತರ ಡೇಟಾ ಪತ್ತೆಯಾಗಿದೆ. ಇದೆಲ್ಲದರ ಬಗ್ಗೆ ತನಿಖೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಪೊಲೀಸರು ಆತನ ಗ್ರಾಹಕರು ಮತ್ತು ಆತ ಮಾರಾಟ ಮಾಡಿದ ಡೇಟಾದ ನಿಖರವಾದ ಪ್ರಮಾಣ ಮತ್ತು ಸ್ವರೂಪವನ್ನು ಪರಿಶೀಲಿಸುತ್ತಿದ್ದು, ಆರೋಪಿ ಅಮಿತ್ ಚಂದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419, 420 ಮತ್ತು 120 ಬಿ ಹಾಗೂ ಐಟಿ ಕಾಯ್ದೆಯ ಸೆಕ್ಷನ್ 43, 66 ಬಿ, 66 ಸಿ ಮತ್ತು 67 ಎ ಗಳನ್ನು ಹಾಕಿ ಬಂಧಿಸಲಾಗಿದೆ.

You might also like
Leave A Reply

Your email address will not be published.